ಗೋಕರ್ಣದ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ ನಟ; ಜೀವರಕ್ಷಿಸಿದ ರಕ್ಷಣಾ ತಂಡ

Rescue Team
Published on

ಗೋಕರ್ಣ: ಇತ್ತೀಚಿನ ವರ್ಷಗಳಲ್ಲಿ ಗೋಕರ್ಣಕ್ಕೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಕಡಲ ಕಿನಾರೆ, ಹಿನ್ನೀರ ಪ್ರದೇಶ, ತಲೆಯೆತ್ತಿರುವ ರೆಸಾರ್ಟ್​​ಗಳು ದೇಶ, ವಿದೇಶದ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಸಮುದ್ರದಲ್ಲಿ ಮೋಜು ಮಸ್ತಿಯಲ್ಲಿ ತೊಡಗುವಾಗ ಜಾಗರೂಕತೆ ವಹಿಸಿ ಎಂದು ಸಲಹೆ ನೀಡಿದರೂ ಬಹತೇಕ ಪ್ರವಾಸಿಗರು ಅಲ್ಲಗಳೆಯುತ್ತಾರೆ. ಸಮುದ್ರದಲ್ಲಿ ಹುಚ್ಚಾಟ ಮೆರೆಯುತ್ತಾರೆ. ಸಾಹಸ ಮಾಡಲು ಹೋಗಿ ತಮ್ಮ ಪ್ರಾಣಕ್ಕೇ ಕುತ್ತು ತರುವಂತಹ ಕೆಲಸ ಮಾಡಿಕೊಳ್ಳುತ್ತಾರೆ.

ಇದೀಗ ತೆಲುಗು ನಟನೊಬ್ಬ ಗೋಕರ್ಣದ ಕೂಡ್ಲೆ ಬೀಚ್​​ನಲ್ಲಿ ಸಮುದ್ರದಲ್ಲಿ ಸಾಹಸ ಮಾಡಲು ಹೋಗಿ ಅಪಾಯಕ್ಕೆ ಸಿಲುಕಿದ್ದಾನೆ. ನಟ ಅಖಿಲ್​ರಾಜ್ ಅಪಾದಲ್ಲಿರುವುದನ್ನು ಗಮನಿಸಿದ ಜೀವರಕ್ಷಕ ಸಿಬ್ಬಂದಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸ್ಟಿಕ್ ಗೋಕರ್ಣ‌ ಅಡ್ವೆಂಚರ್ ತಂಡದ ಜೀವ ರಕ್ಷಜರು ಜಟ್ ಸ್ಕೀ ಮೋಟರ್ ಬೋಟ್ ನಲ್ಲಿ ತೆರಳಿ‌ ಅಖಿಲ್​ ರಾಜ್​ನನ್ನು ರಕ್ಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net