ಕರೊನಾ ವೈರಸ್​ ಎಫೆಕ್ಟ್​: ರಾಜ್ಯದ 9 ಮೃಗಾಲಯಗಳು ನಾಳೆಯಿಂದ ಬಂದ್​...ತೆರೆಯೋದು ಯಾವಾಗ ಗೊತ್ತಾ?

ZOO 14 March 20
Published on

ಬೆಂಗಳೂರು: ಕರೊನಾ ವೈರಸ್​ ವ್ಯಾಪಕವಾಗಿ ಹರಡುತ್ತಿರುವ ಕಾರಣಕ್ಕೆ ರಾಜ್ಯ ಸರ್ಕಾರ ಕಟ್ಟೆಚ್ಚರ ವಹಿಸಿದೆ. ಮುಂದಿನ ಒಂದು ವಾರ ಆರೋಗ್ಯ ತುರ್ತುಪರಿಸ್ಥಿತಿಯ ಕ್ರಮಗಳನ್ನು ಕೈಗೊಂಡಿದೆ.

ಮುಖ್ಯಮಂತ್ರಿ ಯಡಿಯೂರಪ್ಪನವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಏನೇನು ಇರುತ್ತದೆ, ಏನು ಇರೋದಿಲ್ಲ ಎಂಬುದನ್ನು ತಿಳಿಸಿದ್ದಾರೆ. ಶಾಲಾ, ಕಾಲೇಜುಗಳು, ಬೇಸಿಗೆ ಶಿಬಿರಗಳು, ಸಭೆ, ಸಮಾರಂಭ, ಕ್ರೀಡಾಕೂಟಗಳಂತಹ ಸಾರ್ವಜನಿಕ ಸಮಾರಂಭಗಳನ್ನು ಆಯೋಜಿಸಬಾರದು ಎಂದಿದ್ದಾರೆ.

ಇಂದು ಅರಣ್ಯ ಸಚಿವ ಆನಂದ್ ಸಿಂಗ್​ ಟ್ವೀಟ್ ಮಾಡಿ, ಮಾ.15ರಿಂದ 23ರವರೆಗೆ ಮೈಸೂರು ಮೃಗಾಲಯವೂ ಸೇರಿ 9 ಮೃಗಾಲಯಗಳನ್ನು ತೆರೆಯುವುದಿಲ್ಲ ಎಂದಿದ್ದಾರೆ.

ಅತಿಥಿಗಳ ಯೋಗಕ್ಷೇಮ, ಸುರಕ್ಷತೆಗೆ ನಮ್ಮ ಬದ್ಧತೆ, ಆದ್ಯತೆ. ಸಾರ್ವಜನಿಕ ಹಿತದೃಷ್ಟಿಯಿಂದ, ಕರೊನಾ ವೈರಸ್​ ಹಬ್ಬುವುದನ್ನು ತಡೆಗಟ್ಟುವ ಸಲುವಾಗಿ ಕರ್ನಾಟಕ ಪ್ರಾಧಿಕಾರದಡಿ ಬರುವ ಎಲ್ಲ 9 ಮೃಗಾಲಯಗಳನ್ನೂ ಮಾ.15ರಿಂದ 23ರವರೆಗೆ ಮುಚ್ಚಲು ಆದೇಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಬಂದ್​ ಆಗಿರುವ ಝೂಗಳು: ಮೈಸೂರು, ಬನ್ನೇರುಘಟ್ಟ, ಶಿವಮೊಗ್ಗ, ಗದಗ, ಚಿತ್ರದುರ್ಗ, ಬೆಳಗಾವಿ, ಕಲಬುರಗಿ, ಹಂಪಿ ಹಾಗೂ ಆನಗೋಡು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net