

ನವದೆಹಲಿ: ದ್ವಿಪಕ್ಷೀಯ ವಾಣಿಜ್ಯ ಒಪ್ಪಂದದ ಆರನೇ ಸುತ್ತಿನ ಮಾತುಕತೆಗಾಗಿ ಅಮೆರಿಕ ತಂಡ ಆ. 25ರಂದು ಭಾರತಕ್ಕೆ ಭೇಟಿ ಆಗಮಿಸಲಿದೆ. ಆದರೂ, ಆ. 1ಕ್ಕಿಂತ ಮೊದಲು ತಾತ್ಕಾಲಿಕ ವಾಣಿಜ್ಯ ಒಪ್ಪಂದಕ್ಕಾಗಿ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಆದರೆ ಇನ್ನೂ ಹಲವು ವಿಷಯಗಳು ಬಗೆಹರಿಯದೇ ಇರುವುದರಿಂದ ಅಷ್ಟರೊಳಗೆ ಒಪ್ಪಂದ ಏರ್ಪಡುವ ಸಾಧ್ಯತೆ ಕಡಿಮೆ ಇದೆ ಎಂದು ಅಮೆರಿಕದ ವಾಣಿಜ್ಯ ಪ್ರತಿನಿಧಿ ಜೇಮಿಸನ್ ಗ್ರೀರ್ ತಿಳಿಸಿದ್ದಾರೆ.
ಆದರೆ ತರಾತುರಿಯಲ್ಲಿ ಒಪ್ಪಂದ ಏರ್ಪಟ್ಟರೂ ಆಶ್ಚರ್ಯವಿಲ್ಲ ಎಂದು ಭಾರತದ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಅಮೆರಿಕ ಅಧ್ಯಕ್ಷ ಟ್ರಂಪ್ ವಿಧಿಸಿರುವ ಆ. 1ರ ಗಡುವು ವಿಸ್ತರಣೆ ಆಗದಿದ್ದರೆ ಅಥವಾ ತಾತ್ಕಾಲಿಕ ಒಪ್ಪಂದವೂ ಸಾಧ್ಯವಾಗದಿದ್ದರೆ, ಭಾರತೀಯ ರಫ್ತುದಾರರು ಈಗಿರುವ ಶೇ. 10 ಸುಂಕಕ್ಕೆ ಹೆಚ್ಚುವರಿಯಾಗಿ ಶೇ. 16ರಷ್ಟು ಸುಂಕ ತೆರಬೇಕಾಗುತ್ತದೆ. ಉಭಯ ದೇಶಗಳು ಕಳೆದ ವಾರ ವಾಷಿಂಗ್ಟನ್ನಲ್ಲಿ ಐದನೇ ಸುತ್ತಿನ ಮಾತುಕತೆ ಮುಗಿಸಿವೆ.
ಸ್ಮಾರ್ಟ್ಫೋನ್ ಪೂರೈಕೆ ಚೀನಾವನ್ನು ಮೀರಿಸಿದ ಭಾರತ
ನವದೆಹಲಿ: ಅಮೆರಿಕಕ್ಕೆ ಪೂರೈಸಲಾದ ಸ್ಮಾರ್ಟ್ಫೋನ್ಗಳಿಗೆ ಅತಿದೊಡ್ಡ ಉತ್ಪಾದನಾ ಕೇಂದ್ರವಾಗಿ ಭಾರತ ಹೊರಹೊಮ್ಮಿದೆ. ಸುಂಕ ಮಾತುಕತೆಗಳ ನಡುವೆ ಚೀನಾದ ಪೂರೈಕೆ ಪಾಲು ಕುಸಿದಿದೆ ಎಂದು ಕೆನಾಲಿಸ್ ಸಂಸ್ಥೆಯ ವರದಿ ತಿಳಿಸಿದೆ. ಅಮೆರಿಕದಲ್ಲಿ ಭಾರತದ ಸ್ಮಾರ್ಟ್ಫೋನ್ ಶಿಪ್ವೆುಂಟ್ಗಳು ಪ್ರಸಕ್ತ ವರ್ಷದ ಎರಡನೇ ತ್ರೖೆಮಾಸಿಕದಲ್ಲಿ ಶೇ. 1ರಷ್ಟು ಹೆಚ್ಚಾಗಿವೆ. ಚೀನಾದಲ್ಲಿ ಅಸೆಂಬಲ್ ಆದ ಸ್ಮಾರ್ಟ್ಫೋನ್ ಶಿಪ್ವೆುಂಟ್ಗಳ ಪಾಲು ಏಪ್ರಿಲ್-ಜೂನ್ ಅವಧಿಯಲ್ಲಿ ಶೇ. 61ರಿಂದ ಶೇ. 25ಕ್ಕೆ ಕುಸಿದಿದೆ. ಮೇಡ್ ಇನ್ ಇಂಡಿಯಾ ಸ್ಮಾರ್ಟ್ಫೋನ್ಗಳ ಒಟ್ಟು ಪ್ರಮಾಣ ವಾರ್ಷಿಕವಾಗಿ ಶೇ. 240ರಷ್ಟು ಬೆಳೆದಿದೆ ಎಂದು ಕೆನಾಲಿಸ್ನ ಮುಖ್ಯ ವಿಶ್ಲೇಷಕ ಸನ್ಯಮ್ ಚೌರಾಸಿಯಾ ಹೇಳಿದ್ದಾರೆ.