Sargun Mehta: 'ರಾಮಾಯಣ' ಚಿತ್ರದಲ್ಲಿ ಲಕ್ಷ್ಮಣನಾಗಿ ಮಿಂಚಿದ ರವಿ ದುಬೆಗೆ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಪತಿಯ ಯಶಸ್ಸನ್ನು ಕಂಡು ನಟಿ ಸರ್ಗುನ್ ಮೆಹ್ತಾ ಸೋಶಿಯಲ್ ಮೀಡಿಯಾದಲ್ಲಿ ಅತ್ಯಂತ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಈ ದೀಪಾವಳಿಗೆ ನಮ್ಮ ವನವಾಸ ಮುಗಿಯುತ್ತೆ ಅಂದಿದ್ದು ಇವತ್ತು ನಿಜವಾಗಿದೆ" ಎಂದು ಸರ್ಗುನ್ ಭಾವುಕ ಪೋಸ್ಟ್ ಹಾಕಿದ್ದಾರೆ. ಪತಿಯ 21 ವರ್ಷಗಳ ನಟನಾ ಪಯಣದ ಏಳು-ಬೀಳುಗಳು ಹಾಗೂ ತಿರಸ್ಕಾರಗಳನ್ನು ನೆನಪಿಸಿಕೊಂಡು, ರವಿ ಅವರ ಸತತ ಶ್ರಮ ಹಾಗೂ ಮೌಲ್ಯಗಳೇ ಈ ಗೆಲುವಿಗೆ ಕಾರಣ ಎಂದು ಬರೆದುಕೊಂಡಿದ್ದಾರೆ.
‘ನನ್ನ ಪತಿ ದೇವರೆಂದು ನಾನು ಹೇಳುತ್ತಿದ್ದ ಮಾತು ಇಂದು ಸತ್ಯವಾಗಿದೆ. ಹೆಮ್ಮೆಯ ಪತ್ನಿಯಾಗಿ ಮಾತ್ರವಲ್ಲದೆ, ನಿಮ್ಮ ಜೀವನಪರ್ಯಂತದ ಅತಿದೊಡ್ಡ ಅಭಿಮಾನಿಯಾಗಿ ನಾನು ಶುಭ ಹಾರೈಸುತ್ತೇನೆ’ ಎಂದು ಬರೆದಿರುವ ಸರ್ಗುನ್, ತಮ್ಮ ಪತಿಯನ್ನು ‘ರವಿ ಲೆಜೆಂಡ್ ದುಬೆ’ ಎಂದು ಕೊಂಡಾಡುವ ಮೂಲಕ ತಮ್ಮ ಪೋಸ್ಟ್ ಹಂಚಿಕೊಂಡಿದ್ದಾರೆ.
ರಾಮಾಯಣ' ಸಿನಿಮಾದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಅದ್ಭುತವಾಗಿ ನಟಿಸಿದ್ರೆ, ನಮ್ಮ ರಾಕಿ ಭಾಯ್ ಯಶ್ ರಾವಣನ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಇನ್ನು ಲಕ್ಷ್ಮಣನಾಗಿ ಮಿಂಚಿದ ರವಿ ದುಬೆ ಹಾಗೂ ಹನುಮಂತನಾಗಿ ಕಾಣಿಸಿಕೊಂಡ ಸನ್ನಿ ಡಿಯೋಲ್ ಅಭಿನಯಕ್ಕೆ ಎಲ್ಲೆಡೆಯಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.