ಬೆಡ್​ ಮೇಲೆ ಮಲಗಿರುವುದು ಮನುಷ್ಯನೇ ಅಲ್ಲ! ಏನಂತ ಗೆಸ್​ ಮಾಡೋದಕ್ಕೂ ನಿಮ್ಮಿಂದ ಸಾಧ್ಯ ಇಲ್ಲ

Man in Bed
Published on

ಮೇಲಿರುವ ಮಾನವನ ಚಿತ್ರದ ಬಗ್ಗೆ ನೀವೇನಾದರೂ ಯೋಚಿಸಿದ್ದೀರಾ? ಯಾವುದಕ್ಕೂ ಆ ಚಿತ್ರವನ್ನು ಮತ್ತೊಮ್ಮೆ ಸೂಕ್ಷ್ಮವಾಗಿ ನೋಡಿ ಬಿಡಿ...

ಹಾಗೇ ನೋಡಿದ ಮೇಲೂ ನಮಗೇನು ವ್ಯತ್ಯಾಸ ಕಾಣುತ್ತಿಲ್ಲ, ಏಕೆಂದರೆ ಅದು ಬೆಡ್​ ಮೇಲೆ ಮಲಗಿರುವ ವ್ಯಕ್ತಿಯೊಬ್ಬನ ಫೋಟೋ ಎಂದು ನೀವು ಹೇಳಬಹುದು. ಆದರೆ, ಚಿತ್ರದ ಅಸಲಿಯತ್ತು ತಿಳಿದರೆ, ಮತ್ತೊಮ್ಮೆ ಫೋಟೋ ನೋಡಿ ತಮ್ಮ ಕಣ್ಣುಗಳನ್ನು ಉಜ್ಜಿಕೊಳ್ಳುವುದಂತು ಖಂಡಿತ. ಸ್ವತಃ ಒಂದು ಕ್ಷಣ ನಮ್ಮ ಕಣ್ಣನ್ನೇ ನಾವು ನಂಬುವುದಿಲ್ಲವೇನೋ?

ಹೌದು. ನಮ್ಮ ಕಣ್ಣುಗಳನ್ನೇ ನಂಬಲು ಸಾಧ್ಯವಾಗದಂತಹ ಚಿತ್ರಗಳ ಸರಣಿಯೊಂದು ಟ್ವಿಟರ್​ನಲ್ಲಿ ಹರಿದಾಡುತ್ತಿದೆ. ಚಿತ್ರದಲ್ಲಿ ವ್ಯಕ್ತಿಯೊರ್ವ ಆಸ್ಪತ್ರೆಯ ಬೆಡ್​ ಮೇಲೆ ಮಲಗಿರುವಂತೆ ಗೋಚರವಾಗುತ್ತದೆ. ಆತನ ಒಂದು ಪಕ್ಕದಲ್ಲಿ ಟೇಬಲ್​ ಲ್ಯಾಂಪ್​ ಇದೆ. ಇನ್ನೊಂದು ಬದಿಯಲ್ಲಿ ಕೇಕ್​ ಹಿಡಿದಿರುವ ವ್ಯಕ್ತಿಯೊಬ್ಬನ ಕೈ ಕಾಣುತ್ತದೆ.

ಮೊದಲ ಬಾರಿ ನೋಡಿದಾಗ ವ್ಯಕ್ತಿಯಲ್ಲದೆ ಬೇರೇನು ಅನಿಸದು. ಅಲ್ಲದೆ, ಅದೇನೆಂದು ಊಹಿಸಲು ಆಗದು. ಆದರೆ, ಸೂಕ್ಷ್ಮವಾಗಿ ನೋಡಿದರೆ ಏನೆಂದು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಬಹುದು. ಏಕೆಂದರೆ, ಚಿತ್ರದಲ್ಲಿರುವುದು ವ್ಯಕ್ತಿಯಲ್ಲ, ಬದಲಾಗಿ ಮಾನವನ ಮಾದರಿಯಲ್ಲಿರುವ ಹೈಪರ್​ ರಿಯಲಿಸ್ಟಿಕ್​ ಕೇಕ್​.

THIS IS A CAKE ಎಂದು ಬರೆದು ಟ್ವಿಟರ್​ ಬಳಕೆದಾರನೊಬ್ಬ ಚಿತ್ರವನ್ನು ಶೇರ್​ ಮಾಡಿಕೊಂಡಿದ್ದಾನೆ. ಹುಬ್ಬೇರಿಸುವ ಚಿತ್ರವೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಸಾವಿರಾರು ಲೈಕ್ಸ್​ ಮತ್ತು ಕಮೆಂಟ್​ಗಳನ್ನು ಗಿಟ್ಟಿಸಿಕೊಳ್ಳುತ್ತಿದೆ ಮತ್ತು ಅನೇಕರು ಅದ್ಭುತ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.

ಇನ್ನು ಈ ಅದ್ಭುತ ಕೇಕ್​ ಅನ್ನು ಬ್ರಿಟೀಷ್​ ಬೇಕರ್​ ಬೆನ್​ ಕುಲ್ಲೆನ್​ ಎಂಬುವರು ತಯಾರಿಸಿದ್ದಾರೆ. ಕುಲ್ಲೆನ್​ ಅವರು ದಿ ಬೇಕ್​ ಕಿಂಗ್​ ಎಂದೇ ಹೆಸರುವಾಸಿಯಾಗಿದ್ದಾರೆ. ಇವರು ಮಾನವ ಮಾದರಿಯ ಚಾಕೋಲೇಟ್ ಗೆನಾಚ್​ ಒಳಗೊಂಡ​ ವೆನಿಲ್ಲಾ ಕೇಕ್ ಅನ್ನು ಕಳೆದ ವರ್ಷ ತಯಾರಿಸಿದ್ದರು. ಕೇಕ್​ನಲ್ಲಿ ವಿವಿಧ ಪ್ರಯೋಗಳನ್ನು ಮಾಡುವುದೇ ಕುಲ್ಲೆನ್​ ಅವರ ಪ್ಯಾಸನ್​ ಆಗಿದೆ. ಇನ್ನು ಈ ಕೇಕ್​ ಬಗ್ಗೆ ನಿಮಗೆ ಏನನಿಸುತ್ತದೆ ಎಂಬುದನ್ನು ಕಾಮೆಂಟ್​ ಮೂಲಕ ತಿಳಿಸಿ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net