ಆ ಮುಖ, ಆ ತುಟಿ, ಆ ಬುದ್ದಿವಂತಿಕೆ, ಅವಳು ಮಷಿನ್​ಗನ್​ನಂತೆ... ಟ್ರಂಪ್ ಹೀಗೆ ಹೇಳಿದ್ದು ಯಾರ ಬಗ್ಗೆ ಗೊತ್ತಾ?| Donald Trump

Trump2
Published on

Donald Trump: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಾಸಗಿ ಸಂದರ್ಶನವೊಂದರಲ್ಲಿ ತಮ್ಮ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರ ಕುರಿತು ಆ ಮುಖ, ಬುದ್ದಿವಂತಿಕೆ, ಆ ತುಟಿ, ಅವು ಚಲಿಸುವ ರೀತಿ, ಅವಳು ಒಂದು ರೀತಿ ಮಷಿನ್​ ಗನ್​ನಂತೆ ಎಂದು ಹಾಡಿ ಹೊಗಳಿದ್ದಾರೆ.

ಕ್ಯಾರೋಲಿನ್ ಒಂದು ರೀತಿ ತಾರೆಯಾಗಿದ್ದಾಳೆ. ಅವಳದು ಬಹಳ ಒಳ್ಳೆಯ ವ್ಯಕ್ತಿತ್ವ. ನನಗೆ ಅನ್ನಿಸುತ್ತೆ ಅವಳಿಗಿಂತ ಉತ್ತಮ ಪತ್ರಿಕಾ ಕಾರ್ಯದರ್ಶಿ ಯಾರೂ ಇಲ್ಲ. ಅವಳು ಉತ್ತಮ ಕೆಲಸ ಮಾಡ್ತಿದ್ದಾಳೆ ಎಂದು ಹೇಳಿದ್ದಾರೆ.

27 ವರ್ಷದ ಕ್ಯಾರೋಲಿನ್ ಲೀವಿಟ್, ಟ್ರಂಪ್ ಅವರ ಒಟ್ಟಾರೆ ಐದನೇ ಪತ್ರಿಕಾ ಕಾರ್ಯದರ್ಶಿ. ಅತೀ ಚಿಕ್ಕ ವಯಸ್ಸಿನ ಕಾರ್ಯದರ್ಶಿ. ಮತ್ತು ಅವರ ಎರಡನೇ ಅವಧಿಯ ಮೊದಲ ಪತ್ರಿಕಾ ಕಾರ್ಯದರ್ಶಿಯಾಗಿದ್ದಾರೆ.

ಗುರುವಾರ ವೈಟ್ ಹೌಸ್‌ನಲ್ಲಿ ನಡೆದ ಸುದ್ದಿಗೋಷ್ಟಿನಡೆಸಿ ಮಾತನಾಡಿದ್ದ ಕ್ಯಾರೋಲಿನ್ ಲೀವಿಟ್, ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ತಮ್ಮ ಆರು ತಿಂಗಳ ಅಧಿಕಾರಾವಧಿಯಲ್ಲಿ ಸರಾಸರಿ ತಿಂಗಳಿಗೆ ಒಂದು ಶಾಂತಿ ಒಪ್ಪಂದ ಅಥವಾ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿದ್ದಾರೆ. ಅಂತಾರಾಷ್ಟ್ರೀಯ ಮನ್ನಣೆಗೆ ಅಧ್ಯಕ್ಷರು ಅರ್ಹರಾಗಿದ್ದಾರೆ. ಈ ಹಿಂದೆಯೇ ಅವರಿಗೆ ನೊಬೆಲ್ ಪ್ರಶಸ್ತಿ ಸಿಗಬೇಕಿತ್ತು. ಬಹಳ ತಡವಾಗಿದೆ" ಎಂದು ಲೀವಿಟ್ ಹೇಳಿದ್ದರು.

ಸಂದರ್ಶನದಲ್ಲಿ ನಿರೂಪಕ ಲೀವಿಟ್ ಮಾತಿನ ಬಗ್ಗೆ ಕೇಳಿದ್ದಕ್ಕೆ ಮೇಲಿನ ರೀತಿಯಾಗಿ ಟ್ರಂಪ್ ಶ್ಲಾಘಿಸಿದ್ದಾರೆ. ಏತನ್ಮದ್ಧೆ ಲೀವಿಟ್ ಅವರ ತುಟಿ ಬಗ್ಗೆ ಟ್ರಂಪ್ ಹೊಗಳಿದ್ದಕ್ಕೇ ಸೋಷಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿದೆ. ಎಪ್​ಸ್ಟೀನ್ ಫೈಲ್ ವಿಚಾರದೊಂದಿಗೆ ತಳುಕು ಹಾಕಿ ಟೀಕೆ ಮಾಡುತ್ತಿದ್ದಾರೆ.

"ಟ್ರಂಪ್ ಮಹಿಳೆಯರ ಬಗ್ಗೆ ಮಾತನಾಡುವಾಗ ಯಾವಾಗಲೂ ಅವರ ನೋಟ ಲೈಂಗಿಕತೆಯ ಕಡೆಯೇ ಇರುತ್ತದೆ. ಅಪರೂಪಕ್ಕೆ ಒಂದು ಬಾರಿ ಬುದ್ಧಿಶಕ್ತಿ, ಅವರ ಸಾಧನೆಗಳ ಬಗ್ಗೆ ಮಾತನಾಡುತ್ತಾರೆ. ಇದು ಅವರು ಎಪ್​ಸ್ಟೀನ್​ನೊಂದಿಗಿನ ಸಂಪರ್ಕ, ಯುವತಿಯರ ಜೊತೆಗಿನ ಸಂಬಂಧವನ್ನು ಸೂಚಿಸುತ್ತದೆ" ಎಂದು ಎಕ್ಸ್​ನಲ್ಲಿ ಒಬ್ಬರು ಕಮೆಂಟ್ ಮಾಡಿದ್ದಾರೆ.

ಬಹಳ ವಯಸ್ಸಾದ ಮನುಷ್ಯ. ಈಗ ಏನು ಹೇಳಿದೆ ಎಂದು ಅವನಿಗೆ ಅರ್ಥವಾಗುತ್ತಿಲ್ಲ. ಅಯ್ಯೋ ಎಂದು ಒಬ್ಬರು, ಆ ಎಪ್​ಸ್ಟೀನ್​ ಫೈಲ್​ಗಳಲ್ಲಿ ಈತನು ಇದ್ದಾನೆ ಎಂದು ಇನ್ನೊಬ್ಬರು ಈ ರೀತಿಯಾಗಿ ಹಲಾವರು ಜನ ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ.

ಮಾಜಿ ಕುಖ್ಯಾತ ಅಪರಾಧಿ ಜೆಫ್ರಿ ಎಪ್​ಸ್ಟೀನ್​ ಜೊತೆಗಿನ ಹಿಂದಿನ ಸಂಬಂಧದ ಬಗ್ಗೆ ಟ್ರಂಪ್ ಈಗಲೂ ಟೀಕೆಯನ್ನು ಎದುರಿಸುತ್ತಿದ್ದಾರೆ. ಈ ಸಂಬಂಧ ಮುಂದಿನ ದಿನಗಳಲ್ಲಿಎಪ್​ಸ್ಟೀನ್​ ಫೈಲ್​ಗೆ ಸಂಬಂಧಿಸಿದ ಎಲ್ಲವನ್ನೂ ಬಿಡುಗಡೆ ಮಾಡ್ತೀನಿ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net