ಮಾಳವಿಕಾ ಮೋಹನನ್​ ಜನ್ಮದಿನಕ್ಕೆ ಸ್ಪೆಷಲ್​ ಪೋಸ್ಟರ್ ಬಿಡುಗಡೆಗೊಳಿಸಿದ ​'ತಂಗಳನ್' ಚಿತ್ರತಂಡ!

Untitled design - 2023-08-04T180952.252
Published on

ತಮಿಳುನಾಡು: ತಮಿಳು ಚಿತ್ರರಂಗದ ಖ್ಯಾತ ನಟ ವಿಕ್ರಮ್​ ಅಭಿನಯದ ಬಹುನಿರೀಕ್ಷಿತ 'ತಂಗಳನ್' ಚಿತ್ರವು 2024 ರಲ್ಲಿ ತೆರೆ ಕಾಣಲು ಸಜ್ಜಾಗಿದೆ. ಈ ಮಧ್ಯೆ ಇಂದು ಸಿನಿಮಾದ ನಟಿ ಮಾಳವಿಕಾ ಮೋಹನನ್ ಅವರ ಜನ್ಮದಿನದ ಹಿನ್ನಲೆ ಚಿತ್ರತಂಡ ಆಕರ್ಷಕ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದೆ.

ಸಿನಿಮಾದ ನಿರ್ಮಾಪಕ ಪಾ. ರಂಜಿತ್ ಅವರು ಇತ್ತೀಚೆಗೆ ಬಿಡುಗಡೆಗೊಳಿಸಿದ ಚಿತ್ರದ ಮೇಕಿಂಗ್ ವಿಡಿಯೋ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದ್ದು, ಚಿತ್ರವು ಕರ್ನಾಟಕದ ಕೆಜಿಎಫ್​ನಲ್ಲಿ ನಡೆದ ನೈಜ ಘಟನೆ ಆಧರಿತ ಎಂದು ಹೇಳಲಾಗಿದೆ. ಸಿನಿಮಾದಲ್ಲಿ ಡಿ-ಗ್ಲಾಮರಸ್​​ ಪಾತ್ರದಲ್ಲಿ ನಟಿಸಿರುವ ನಾಯಕಿ ಮಾಳವಿಕಾ ಮೋಹನನ್ ಅವರ ಹುಟ್ಟುಹಬ್ಬಕ್ಕೆ ಚಿತ್ರತಂಡ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ಇಂದು ರಿಲೀಸ್ ಮಾಡಿದೆ.

ಪೋಸ್ಟರ್​ ಅಭಿಮಾನಿಗಳನ್ನು ಸೆಳೆದಿದ್ದು, ಮಾಳವಿಕಾ ಅವರು ಬುಡಕಟ್ಟು ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸಿನಿಪ್ರೇಕ್ಷಕರು, ನಿಮ್ಮ ಜನ್ಮದಿನಕ್ಕೆ ಪೋಸ್ಟರ್​​ ಉತ್ತಮ ಉಡುಗೊರೆಯಾಗಿ ದೊರತಿದೆ ಎಂದು ಹೇಳುವ ಮೂಲಕ ಶುಭಕೋರಿದ್ದಾರೆ. ನೀಲಂ ಪ್ರೊಡಕ್ಷನ್ಸ್ ಮತ್ತು ಸ್ಟುಡಿಯೋ ಗ್ರೀನ್ ನಿರ್ಮಿಸಿರುವ ಈ ಚಿತ್ರದಲ್ಲಿ ಪಾರ್ವತಿ ತಿರುವೋತ್ತು, ಪಶುಪತಿ ಸೇರಿದಂತೆ ಇತರ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net