Video| ಮೂತ್ರ ವಿಸರ್ಜಿಸಿ ಹಣ್ಣು ಮಾರಲು ಹೋದ.. ಮುಂದೇನಾಯ್ತು ನೀವೇ ನೋಡಿ

Untitled-design-2024-09-24T160916.145
Published on

ಮುಂಬೈ: ಹಣ್ಣು ಮಾರಾಟ ಮಾಡುವ ವ್ಯಕ್ತಿಯೊಬ್ಬನನ್ನು ತಮ್ಮ ಗಾಡಿಯಲ್ಲಿ ಇರಿಸಲಾದ ಪ್ಲಾಸ್ಟಿಕ್ ಚೀಲದಲ್ಲಿ ಮೂತ್ರ ವಿಸರ್ಜನೆ ಮಾಡಿ ಕೈ ತೊಳೆಯದೆ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮಹಾರಾಷ್ಟ್ರದ ಡೊಂಬಿವಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಆತನ ಈ ದುಷ್ಕೃತ್ಯದ ವಿಡಿಯೋ(Video) ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವೈರಲ್​ ವಿಡಿಯೋದಲ್ಲಿ 20 ವರ್ಷದ ಹಣ್ಣು ಮಾರಾಟಗಾರ ಬ್ಯಾಗ್‌ನಲ್ಲಿ ಮೂತ್ರ ವಿಸರ್ಜಿಸುವುದನ್ನು ಹಾಗೂ ಬಳಿಕ ಕೈ ಶುಚಿಗೊಳಿಸದೆ ತನ್ನ ಕೆಲಸವನ್ನು ಪುನರಾರಂಭಿಸುತ್ತಿರುವುದನ್ನು ಕಾಣಬಹುದಾಗಿದೆ.

ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತರುವ ಮುನ್ನವೇ ಕೋಪಗೊಂಡ ವಿಡಿಯೋ ನೋಡಿ ಕೋಪಗೊಂಡ ಸ್ಥಳೀಯರು ಮಾರುಕಟ್ಟೆಗೆ ನುಗ್ಗಿ ಆತನನ್ನು ಥಳಿಸಿ ಹಣ್ಣಿನ ಅಂಗಡಿಯನ್ನು ಧ್ವಂಸಗೊಳಿಸಿದ್ದಾರೆ ಎನ್ನಲಾಗಿದೆ.

ಡೊಂಬಿವಲಿಯ ನಿಲ್ಜೆ ಪ್ರದೇಶದ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯನ್ನು ಅಲಿ ಖಾನ್ ಎಂದು ಗುರುತಿಸಲಾಗಿದೆ ಎಂದು ಮಾನ್ಪಾಡಾ ಪೊಲೀಸರು ತಿಳಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 271 (ನಿರ್ಲಕ್ಷ್ಯದಿಂದ ಜೀವಕ್ಕೆ ಅಪಾಯಕಾರಿ ಕಾಯಿಲೆಯ ಸೋಂಕನ್ನು ಹರಡುವ ಸಾಧ್ಯತೆ) 272 (ಜೀವಕ್ಕೆ ಅಪಾಯಕಾರಿ ಕಾಯಿಲೆಯ ಸೋಂಕನ್ನು ಹರಡುವ ಮಾರಣಾಂತಿಕ ಕೃತ್ಯ) ಮತ್ತು 296 (ಅಶ್ಲೀಲತೆ) ಅಡಿಯಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಆರೋಪಿ ಏಕೆ ಹೀಗೆ ಮಾಡಿದ್ದಾನೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಯಾವುದೇ ನಿರ್ದಿಷ್ಟ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ರೀತಿಯ ಘಟನೆಯ ವಿಡಿಯೋ ವೈರಲ್​ ಆಗುತ್ತಿರುವುದು ಇದೆ ಮೊದಲೆನಲ್ಲ. ಈ ಹಿಂದೆ ಗಾಜಿಯಾಬಾದ್‌ನ ಲೋನಿ ಪ್ರದೇಶದಲ್ಲಿ ಜ್ಯೂಸ್ ಮಾರಾಟಗಾರರೊಬ್ಬರು ಜ್ಯೂಸ್‌ನಲ್ಲಿ ಮೂತ್ರವನ್ನು ಬೆರೆಸುತ್ತಿರುವುದು ಕಂಡುಬಂದಿತ್ತು. ಪೊಲೀಸರು ಅವರ ಅಂಗಡಿಯಿಂದ ಒಂದು ಲೀಟರ್ ಮೂತ್ರವನ್ನು ವಶಪಡಿಸಿಕೊಂಡಿದ್ದರು. ಯಾರೋ ಒಬ್ಬರು ಗ್ರಾಹಕರಿಗೆ ಉಗುಳುವ ಮೂಲಕ ಮಸಾಜ್ ಮಾಡುತ್ತಿರುವುದು, ಯಾರೋ ಒಬ್ಬರು ವೀರ್ಯವನ್ನು ಬೆರೆಸಿ ಫಲೂಡಾ ಮಾರಾಟ ಮಾಡುತ್ತಿದ್ದದ್ದು ಹೀಗೆ ಇಂತಹ ಹಲವು ವೈರಲ್ ವಿಡಿಯೋಗಳು ಬೆಳಕಿಗೆ ಬಂದಿವೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net