

ಬೀಜಿಂಗ್: ಸರ್ಕಾರಿ ಅಥವಾ ಗೌರವಾನ್ವಿತ ಹುದ್ದೆಗಳಲ್ಲಿರುವ ಜನರು ಲಂಚ ಪಡೆಯುತ್ತಾರೆ ಎಂಬುದನ್ನು ಕೇಳಿರುತ್ತೇವೆ. ಆದರೆ ಚೀನಾದಲ್ಲಿ ಬ್ಯೂಟಿಫುಲ್ ಮಹಿಳಾ ಗವರ್ನರ್ (Beautiful Governor) ಅಧಿಕಾರಿಯೊಬ್ಬರು ತಮ್ಮ ಅಧಿಕಾರವನ್ನು ಹೇಗೆಲ್ಲಾ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ತಿಳಿದ್ರೆ ಶಾಕ್ ಆಗುತ್ತೆ. ಒಂದು ಕಾಲದಲ್ಲಿ ಈ ಅಧಿಕಾರಿ ತಮ್ಮ ಸೌಂದರ್ಯದಿಂದ ಹೆಸರುವಾಸಿಯಾಗಿದ್ದರು. ಆದರೀಗ ಬೇರೆ ವಿಚಾರಕ್ಕೆ ಸುದ್ದಿಯಾಗಿದ್ದಾರೆ.
ಈ ಮಾಜಿ ಮಹಿಳಾ ಅಧಿಕಾರಿಯ ಹೆಸರು ಝಾಂಗ್ ಯಾಂಗ್. ಈಕೆ ತನ್ನ ಅಧೀನ ಅಧಿಕಾರಿಗಳು ಮತ್ತು ಉದ್ಯೋಗಿಗಳೊಂದಿಗೆ ಲೈಂಗಿಕ ಸಂಬಂಧಗಳನ್ನು ಹೊಂದಿದ್ದಾರೆಂದು ಆರೋಪಿಸಲಾಗಿದೆ. ಆರೋಪ ಕೇಳಿ ಬಂದ ನಂತರ ಕಳೆದ ವರ್ಷ ಏಪ್ರಿಲ್‌ನಲ್ಲಿ ಝೂಂಗ್ ಯಾಂಗ್ ಅವರನ್ನು ಅವರ ಹುದ್ದೆಯಿಂದ ವಜಾ ಮಾಡಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಈ ಮಹಿಳೆಯ ಬಗ್ಗೆ ಬೆಳಕಿಗೆ ಬಂದಿರುವ ಮಾಹಿತಿ ನಿಜಕ್ಕೂ ಅಚ್ಚರಿ ಮೂಡಿಸಿದೆ.
ಝಾಂಗ್ ಯಾಂಗ್ ಎಂಬ ಹೆಸರಿನ ಈ ಗವರ್ನರ್ 58 ಪುರುಷ ಉದ್ಯೋಗಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾರೆ ಮತ್ತು ಸುಮಾರು 60 ಮಿಲಿಯನ್ ಯುವಾನ್ ಮೌಲ್ಯದ ಲಂಚವನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಕೆಲವರು ಅವರಿಂದ ಲಾಭ ಪಡೆಯುವ ಸಲುವಾಗಿ ಸಂಬಂಧ ಹೊಂದಿದ್ದರೆ, ಇತರರು ಹೊರಹಾಕಲ್ಪಡುವ ಭಯದಿಂದ ಇಷ್ಟವಿಲ್ಲದಿದ್ದರು ಆಕೆಯೊಂದಿಗೆ ಸಂಬಂಧ ಹೊಂದಿದ್ದರು ಎಂದು ಹೇಳಲಾಗುತ್ತಿದೆ. ಝೂಂಗ್ ತಾನು ಸಂಬಂಧ ಹೊಂದಿದವರೊಂದಿಗೆ ಅಧಿಕಾರದ ಅವಧಿಯಲ್ಲಿ ಕೆಲಸ ಮತ್ತು ವ್ಯಾಪಾರ ಪ್ರವಾಸಗಳಿಗೆ ಹೋಗುವ ನೆಪದಲ್ಲಿ ಸಮಯ ಕಳೆದಿದ್ದಾಳೆ ಎಂದು ವರದಿಯಾಗಿದೆ. ಅದಷ್ಟೆ ಅಲ್ಲ, ಆಕೆಯ ಹ್ಯಾಂಡ್ ಬ್ಯಾಗ್ನಲ್ಲಿ ಸದಾ ಕಾಂಡೋಮ್ ಇರುತ್ತಿತ್ತು ಎನ್ನಲಾಗಿದೆ.
ಗವರ್ನರ್ ಝೂಂಗ್ ಯಾಂಗ್ ಅವರಿಗೆ ಬ್ಯೂಟಿಫುಲ್ ಗವರ್ನರ್ ಎಂಬ ಅಡ್ಡಹೆಸರನ್ನು ನೀಡಲಾಗಿದೆ. ಅವರು Guizhou ಪ್ರಾಂತ್ಯದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (CPC) ಗವರ್ನರ್ ಮತ್ತು ಉಪ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಲಂಚ ಮತ್ತು ಭ್ರಷ್ಟಾಚಾರಕ್ಕಾಗಿ ಝೂಂಗ್ ಅವರನ್ನು ಏಪ್ರಿಲ್ 2023ರಲ್ಲಿ ಬಂಧಿಸಲಾಯಿತು. ಸೆಪ್ಟೆಂಬರ್‌ನಲ್ಲಿ ಅವರನ್ನು ಕಚೇರಿಯಿಂದ ತೆಗೆದುಹಾಕಲಾಯಿತು. ಹಾಗೂ CPC ಯಿಂದ ಹೊರಹಾಕಲಾಯಿತು. ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‌ನ ಸ್ಥಾನವನ್ನೂ ಕಳೆದುಕೊಂಡಿದ್ದಾರೆ. ಮಹಿಳಾ ಗವರ್ನರ್ ದುರ್ವರ್ತನೆಗಾಗಿ 13 ವರ್ಷಗಳ ಜೈಲು ಶಿಕ್ಷೆ ಮತ್ತು ಒಂದು ಮಿಲಿಯನ್ ಯುವಾನ್ (ಸುಮಾರು 1.18 ಕೋಟಿ ರೂ.) ದಂಡ ವಿಧಿಸಲಾಗಿದೆ. (ಏಜೆನ್ಸೀಸ್)