ಹೈಸ್ಪೀಡ್​ ರೇಸಿಂಗ್​ ಅಭ್ಯಾಸದ ವೇಳೆ Ajith ಅವರಿದ್ದ ಕಾರು ಅಪಘಾತ; ವಿಡಿಯೋ ವೈರಲ್​, ನಟನ ಪರಿಸ್ಥಿತಿ ಈಗ ಹೇಗಿದೆ ಗೊತ್ತಾ?

Actor Ajith
Published on

ದುಬೈ: ಸೌತ್​ ಸಿನಿ ಇಂಡಸ್ಟ್ರಿಯ ಖ್ಯಾತ ನಟ ಅಜಿತ್​ ಕುಮಾರ್​ (Ajith Kumar) ತಮ್ಮ ಅಭಿನಯ ಹಾಗೂ ವಿಭಿನ್ನ ಮ್ಯಾನರಿಸಂ ಮೂಲಕವೇ ದೇಶ ಮಾತ್ರವಲ್ಲೇ ವಿದೇಶದಲ್ಲೀ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದು, ಅಭಿಮಾನಿಗಳ ಹಾಟ್​ ಪೇವರಿಟ್​ ಆಗಿದ್ದಾರೆ. ಅಜಿತ್​ ನಟನೆ ಮಾತ್ರವಲ್ಲದೇ ಬೈಕ್​ ರೇಸರ್​ ಕೂಡ ಆಗಿದ್ದು, ಬಿಡುವಿನ ವೇಳೆಯಲ್ಲಿ ಅವರು ಬೈಕ್​, ಕಾರ್​ ರೇಸ್​ ಹಾಗೂ ಸ್ಟಂಟ್​ಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ಇದಕ್ಕೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳು ಆಗಿಂದಾಗೆ ವೈರಲ್​ ಆಗುತ್ತಿರುತ್ತವೆ.

ಇದೀಗ ನಟ ಅಜಿತ್​ (Ajith) ಅವರು ದುಬೈನಲ್ಲಿ ಹೈಸ್ಪೀಡ್ ರೇಸಿಂಗ್ ಅಭ್ಯಾಸ ನಡೆಸುತ್ತಿದ್ದ ವೇಳೆ ಅವರಿದ್ದ ಕಾರು ತಡೆಗೋಡೆಗೆ ಡಿಕ್ಕಿ ಹೊಡೆದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಸದ್ಯ ನಟ ಪ್ರಾಣಾಪಾಯದಿಂದ ದೂರಾಗಿದ್ದಾರೆ ಎಂದು ವರದಿಯಾಗಿದೆ.

ಅಜಿತ್​ ಅವರು ಅಜಿತ್​ ಕುಮಾರ್​ (Ajith Kumar) ರೇಸಿಂಗ್ ಎಂಬ ಕಂಪನಿಯನ್ನು ಹೊಂದಿದ್ದು, ಅವರು ದುಬೈನಲ್ಲಿ ನಡೆಯಲಿರುವ  24 ಅವರ್ಸ್ ರೇಸ್​’ (24 ಹೆಚ್​ ದುಬೈ 2025) ಸ್ಪರ್ಧೆಯಲ್ಲಿ ಭಾಗಿಯಾಗಲು ತಮ್ಮ ತಂಡದ ಸದಸ್ಯರೊಂದಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.  6 ಗಂಟೆ ದೀರ್ಘ ಅವಧಿಯ ಪರೀಕ್ಷೆಯಲ್ಲಿ ಅಜಿತ್ ಪಾಲ್ಗೊಂಡಿದ್ದರು. ಈ ಪರೀಕ್ಷೆ ಪೂರ್ಣಗೊಳ್ಳಲು ಇನ್ನೇನು ಕೆಲವೇ ನಿಮಿಷಗಳು ಇರುವಾಗ ಅಜಿತ್ ಅವರ ಕಾರು ತಡೆಗೋಡೆಗೆ ಡಿಕ್ಕಿ ಹೊಡೆದಿದೆ.

180 ಕಿಲೋ ಮೀಟರ್​ ವೇಗದಲ್ಲಿ ಕಾರು ಡಿಕ್ಕಿ ಆಗಿದ್ದರೂ ಕೂಡ ಅಜಿತ್​ (Ajith) ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಸದ್ಯ ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ನೆಚ್ಚಿನ ನಟನಿಗೆ ಆರೋಗ್ಯವನ್ನು ಪ್ರಾರ್ಥಿಸಿ ಫ್ಯಾನ್ಸ್​ ಕಮೆಂಟ್​ ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net