

ನವದೆಹಲಿ: ಭಾರೀ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದ್ದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಸ್ಮಾರಕದ ಸ್ಥಳದ ಆಯ್ಕೆ ನಡೆಯುತ್ತಿರುವಾಗಲೇ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ (Pranab Mukherjee) ಅವರ ಸ್ಮಾರಕವನ್ನು ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಪ್ರಣಭ್ ಮುಖರ್ಜಿ ಅವರ ಪುತ್ರಿ ಶರ್ಮಿಷ್ಠಾ ಮುಖರ್ಜಿ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಈ ಸಂಬಂಧ ಶರ್ಮಿಷ್ಠಾ ಮುಖರ್ಜಿಗೆ ಪತ್ರ ಬರೆದಿರುವ ಕೇಂದ್ರ ಸರ್ಕಾರ, 2020 ಆಗಸ್ಟ್ 31ರಂದು ನಿಧನರಾದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ (Pranab Mukherjee) ಅವರ ಸ್ಮಾರಕ ನಿರ್ಮಾಣಕ್ಕೆ ರಾಜ್ಘಾಟ್ನ ಒಂದು ಭಾಗವಾದ ರಾಷ್ಟ್ರೀಯ ಸ್ಮೃತಿಯಲ್ಲಿ ನಿವೇಶನವನ್ನು ಸಕ್ಷಮ ಪ್ರಾಧಿಕಾರವು ಗುರುತಿಸಿ ನಿಗದಿಪಡಿಸಿದೆ ಎಂದು ತಿಳಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಶರ್ಮಿಷ್ಠಾ ಮುಖರ್ಜಿ, ಬಾಬಾ (Pranab Mukherjee) ಅವರ ಸ್ಮಾರಕ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರ ನನ್ನ ಹೃದಯ ಮುಟ್ಟಿದೆ. ಈ ಸಂಬಂಧ ಪ್ರಧಾನಿ ಮೋದಿ ಖುದ್ದು ಭೇಟಿ ಮಾಡಿ ಧನ್ಯವಾದಗಳನ್ನು ತಿಳಿಸಿದೆ. ವರ ಭೇಟಿ ನಿಜಕ್ಕೂ ನನ್ನಲ್ಲಿ ಧನ್ಯತಾಭಾವ ಮೂಡಿಸಿದೆ.
ಬಾಬಾ (Pranab Mukherjee) ಸರ್ಕಾರದ ಗೌರವವನ್ನು ಕೇಳಿ ಪಡೆಯಬಾರದು. ಅದು ಒಲಿಯಬೇಕು ಎಂದು ಬಾಬಾ ಸದಾ ಹೇಳುತ್ತಿದ್ದರು. ಆ ಕೆಲಸವನ್ನು ಪ್ರಧಾನಿ ಮೋದಿ ಅವರು ಮಾಡಿದ್ದಕ್ಕೆ ನಾನು ಆಭಾರಿ. ಪ್ರಶಂಸೆ ಅಥವಾ ಟೀಕೆಗಳು ಬಾಬಾ ಅವರನ್ನು ಭಾದಿಸದು. ಆದರೆ ಸರ್ಕಾರ ಅವರನ್ನು ಗೌರವಿಸಿದ ಈ ನಿರ್ಧಾರವನ್ನು ಹೊಗಳಲು ನನ್ನಲ್ಲಿ ಪದಗಳಿಲ್ಲ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಶರ್ಮಿಷ್ಠಾ ಮುಖರ್ಜಿ ಪೋಸ್ಟ್ ಮಾಡಿದ್ದಾರೆ.
https://www.vijayavani.net/actress-ramya-reaction-after-court-hearing