ಥಾಯ್ಲೆಂಡ್​ನ ಓಪಲ್​ಗೆ ಮಿಸ್ ವರ್ಲ್ಡ್ ಕಿರೀಟ

missworld
Published on

ಹೈದರಾಬಾದ್: ಹೈದರಾಬಾದ್​ನಲ್ಲಿ ನಡೆದ 72ನೇ ಆವೃತ್ತಿಯ ಮಿಸ್ ವರ್ಲ್ಡ್, 2025 ಸ್ಪರ್ಧೆಯಲ್ಲಿ ಥಾಯ್ಲೆಂಡ್​ನ ಓಪಲ್ ಸುಚಾಟಾ ಚುವಾಂಗ್​ಸ್ರಿ ವಿಜಯಿಯಾಗಿದ್ದು, ಮಿಸ್ ವರ್ಲ್ಡ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಫಿನಾಲೆ ಸಮಾರಂಭದಲ್ಲಿ ಓಪಲ್ ಸುಚಾಟಾಗೆ 2024ರ ಮಿಸ್ ವರ್ಲ್ಡ್

ಕ್ರಿಸ್ಟಿನಾ ಪಿಸ್ಕ್​ಜೋವಾ ಕಿರೀಟ ತೊಡಿಸಿದರು. ಇಥಿಯೋಪಿಯಾದ ಹ್ಯಾಸೆಟ್ ಡೆರೆಜೆ ಮೊದಲ ರನ್ನರ್ ಆಗದರೆ, ಪೋಲೆಂಡ್​ನ ಮಜಾ ಕ್ಲಾಜ್ಡಾ ಎರಡನೇ ರನ್ನರ್ ಅಪ್ ಸ್ಥಾನ ಪಡೆದರು. ಮಾರ್ಟಿನಿಕ್​ನ ಆರ್ಲಿ ಜೋಕಿಮ್ ನಾಲ್ಕನೇ ಸ್ಥಾನ ಪಡೆದರು. ಈ ವರ್ಷ 108 ಸ್ಪರ್ಧಿಗಳು ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಂದಿನಿ ಗುಪ್ತಾ ಟಾಪ್ 20ರಲ್ಲಿ ಸ್ಥಾನ ಪಡೆದಿದ್ದರು. ಆದರೆ ಆ ಬಳಿಕ ಅಗ್ರ 8ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿ ಸ್ಪರ್ಧೆಯಿಂದ ಹೊರಬಿದ್ದರು. 2016ರ ಮಿಸ್ ವರ್ಲ್ಡ್ ಸ್ಟೆಫೆನಿ ಡೆಲ್ ವ್ಯಾಲೆ ಕಾರ್ಯಕ್ರಮದ ನಿರೂಪಣೆ ಮಾಡಿದರು. ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಇಶಾನ್ ಖಟ್ಟರ್ ನೃತ್ಯ ಪ್ರದರ್ಶನ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net