ಸಂಸತ್ತಿನಲ್ಲಿ ಕುಳಿತು ಯುವತಿಯ ಬೆತ್ತಲೆ ಫೋಟೋ ನೋಡಿದ ಎಂಪಿ; ಕೊಟ್ಟಿದ್ದು ವಿಲಕ್ಷಣ ಸ್ಪಷ್ಟನೆ

MP
Published on

ಸಂಸತ್ತಿನಲ್ಲಿ ಗಂಭೀರ ವಿಚಾರ ಚರ್ಚೆಯಾಗಬೇಕಾದರೆ..ಇಲ್ಲೋರ್ವ ಸಂಸದ ಅಶ್ಲೀಲ ಫೋಟೋಗಳನ್ನು ನೋಡಿ ಸುದ್ದಿಯಾಗಿದ್ದಾರೆ.

ಥೈಲ್ಯಾಂಡ್​​ನ ಸಂಸದನೋರ್ವ ಈ ಎಡವಟ್ಟು ಕೆಲಸ ಮಾಡಿ ಸಿಕ್ಕಿಬಿದ್ದಿದ್ದಾರೆ. ಬಜೆಟ್​​ ಮಂಡನೆ ಸಭೆಯಲ್ಲಿ ಪಾಲ್ಗೊಂಡಿದ್ದ ಸಂಸದ ರೊನಾಥೆಪ್ ಅನುವಾತ್ ಎಂಬುವರು ತಮ್ಮ ಸ್ಮಾರ್ಟ್​ ಫೋನ್​​ನಲ್ಲಿ ಅಶ್ಲೀಲ ಚಿತ್ರ ನೋಡುತ್ತಿದ್ದರು. ಈ ವೇಳೆ ಕ್ಯಾಮರಾ ಕಣ್ಣಲ್ಲಿ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ:ನಾಲೆಯಲ್ಲಿ ತೇಲಿಬಂದ ವಸ್ತು ನೋಡಿ ಬೆಚ್ಚಿಬಿದ್ದ ಜನರು: ಪೊಲೀಸರಿಗೂ ನಿಗೂಢವಾಯ್ತು ಪ್ರಕರಣ!

ಅಲ್ಲದೆ ಆ ಫೋಟೋಗಳನ್ನು ಹತ್ತಿರದಿಂದ ನೋಡುವ ಸಲುವಾಗಿ ರೊನಾಥೆಪ್, ತಾವು ಧರಿಸಿದ್ದ ಫೇಸ್​ಮಾಸ್ಕ್​ ಕೂಡ ತೆಗೆದು, ಮೊಬೈಲ್​​ನ್ನು ಮತ್ತಷ್ಟು ಹತ್ತಿರ ಹಿಡಿದುಕೊಂಡಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.

ಯುವತಿಯೋರ್ವಳು ತನ್ನ ಟಾಪ್​​ ತೆಗೆದಿದ್ದರೆ, ಇನ್ನೋರ್ವಳು ಬೆತ್ತಲೆಯಾಗಿ ಬೆಡ್​ ಮೇಲೆ ಮಲಗಿರುವ ಫೋಟೋವನ್ನು ಈ ಸಂಸದ ನೋಡುತ್ತಿದ್ದರು ಎನ್ನಲಾಗಿದೆ. ತಮ್ಮ ಕರ್ಮಕಾಂಡದ ಫೋಟೋ ವೈರಲ್ ಆಗುತ್ತಿದ್ದಂತೆ ರೊನಾಥೆಪ್ ಇದನ್ನು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ ವಿಚಿತ್ರ ಸ್ಪಷ್ಟನೆಯನ್ನೂ ನೀಡಿದ್ದಾರೆ.

ನನಗೆ ಯುವತಿಯೋರ್ವಳು ಈ ಫೋಟೋ ಕಳಿಸಿ, ನನಗೆ ತುರ್ತಾಗಿ ಹಣ ಬೇಕು..ಸಹಾಯ ಬೇಕು ಎಂದು ಮೆಸೇಜ್​ ಬರೆದಿದ್ದಳು. ಅದಕ್ಕಾಗಿ ನಾನು ಆ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ನಿಜಕ್ಕೂ ಯುವತಿ ಅಪಾಯದಲ್ಲಿದ್ದಾಳಾ? ಯಾವ ಪರಿಸ್ಥಿತಿಯಲ್ಲಿ ಇದ್ದಾಳೆ? ಅಪಾಯದಲ್ಲಿ ಇದ್ದಾಳಾ ಎಂಬುದನ್ನು ನೋಡುತ್ತಿದ್ದೆ ಎಂದು ಸ್ಥಳೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.  ಇದನ್ನೂ ಓದಿ: ಹೊಡಿತಾಳೆ, ಬಡಿತಾಳೆ ನನ್​ ಹೆಂಡ್ತಿ: ಕುಡುಕಿಯಿಂದ ಪೊಲೀಸ್​ ರಕ್ಷಣೆ ಕೋರಿದ ಪತಿರಾಯ!

ನಾನು ಹತ್ತು ನಿಮಿಷಗಳ ಕಾಲ ಆ ಫೋಟೋವನ್ನು ಅವಲೋಕಿಸಿದೆ. ಆದರೆ ಅಲ್ಲಿ ಯಾವುದೇ ತುರ್ತು ಪರಿಸ್ಥಿತಿ ಇರುವಂತೆ ಕಾಣಲಿಲ್ಲ. ಹಣಕ್ಕೋಸ್ಕರ ಹೀಗೆ ಮಾಡುತ್ತಿದ್ದಾಳೆ ಎಂಬುದು ಗೊತ್ತಾಯಿತು. ನಂತರ ಡಿಲೀಟ್ ಮಾಡಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ರೊನಾಥೆಪ್​​ಗೆ ಸಮನ್ಸ್​ ನೀಡಲಾಗಿದೆ. ಆದರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಸಂಸತ್ತಿನಲ್ಲಿ ಮೊಬೈಲ್​ ನೋಡಬಾರದು ಎಂಬ ನಿಯಮ ಇಲ್ಲ. ಇದು ವೈಯಕ್ತಿಕ ವಿಚಾರ ಎಂದು ಸ್ಪೀಕರ್​ ಕೂಡ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net