ಅರ್ಧ ಬಾಟಲ್ ವಿಸ್ಕಿಯನ್ನು ಕೆಳಗಿಡದೆ ಕುಡಿದ.. ಸ್ವಲ್ಪ ಹೊತ್ತಿನ ನಂತ್ರ ಏನಾಯ್ತು ಗೊತ್ತಾ? Challenge

Challenge
Published on

ಥಾಯ್ಲೆಂಡ್ : (Challenge ) ಒಂದೇ ಬಾರಿಗೆ ಅರ್ಧ ಬಾಟಲಿಯ ವಿಸ್ಕಿಯನ್ನು ಕುಡಿದ ಯುವಕನೊಬ್ಬ ಚಾಲೆಂಜ್   ಸ್ವೀಕರಿಸಿ ಸಾವನ್ನಪ್ಪಿದ್ದಾನೆ. ಈ ಘಟನೆ ಥಾಯ್ಲೆಂಡ್​​ನಲ್ಲಿ ನಡೆದಿದೆ.

ಥಾನಕರ್ನ್ ಕಾಂತಿ ಮೃತ.  ಈತ ಥಾಯ್ಲೆಂಡ್ ಮೂಲದವನು.  ಸಾಮಾಜಿಕ ಮಾಧ್ಯಮದಲ್ಲಿ ಉತ್ತಮ ಫಾಲೋವರ್ಸ್ ಹೊಂದಿರುವ ಪ್ರಭಾವಿ. ನೆಟಿಜನ್‌ಗಳು ಅವರನ್ನು "ಬ್ಯಾಂಕ್ ಲೀಸೆಸ್ಟರ್" ಎಂದು ಕರೆಯುತ್ತಾರೆ. ಬಾಟೆಲ್​ ಒಮ್ಮೆ  ಎತ್ತಿದರೆ ಕೆಳಗಿಸದೇ  ಕುಡಿದು ಮುಗಿಸುವ ಲಿಕ್ಕರ್ ಚಾಲೆಂಜ್ ತೆಗೆದುಕೊಂಡು ಸಾವನ್ನಪ್ಪಿದ್ದಾನೆ.

 ಅರ್ಧ ಬಾಟಲಿಗಿಂತ ಹೆಚ್ಚು ಇರುವ ಮದ್ಯ ಇಳಿಸದೆ ಕುಡಿಯುವ ಸವಾಲನ್ನು ಸ್ವೀಕರಿಸಿದ್ದಾನೆ.  ಈ ಹಿಂದೆಯೂ ಇದೇ ರೀತಿಯ ಹಲವು ಸವಾಲುಗಳನ್ನು ಮಾಡಿದ್ದ ಥಾನಕರ್ನ್ ಕಣಕ್ಕೆ ಇಳಿದಿದ್ದರು. ಕ್ರಿಸ್‌ಮಸ್ ನೈಟ್ ಪಾರ್ಟಿ ವೇಳೆ ಮದ್ಯವನ್ನು ಇಳಿಸದೆ ಕುಡಿದರು.  ಇತರರು ಆತನನ್ನು ಹುರಿದುಂಬಿಸುತ್ತಿರುವುದು ಕೂಡ ವಿಡಿಯೋದಲ್ಲಿ ದಾಖಲಾಗಿದೆ. ಆದರೆ, ಮದ್ಯ ಸೇವಿಸಿದ ಸ್ವಲ್ಪ ಹೊತ್ತಿನಲ್ಲೇ ವಾಂತಿ ಮಾಡಿಕೊಂಡು ಸಮತೋಲನ ಕಳೆದುಕೊಂಡಿದ್ದಾರೆ.  ಥಾನಕರ್ನ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ಡಿಸೆಂಬರ್ 26 ರ ಮುಂಜಾನೆ ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು.

ಅಧಿಕೃತ ಶವಪರೀಕ್ಷೆ ಬಾಕಿಯಿದ್ದರೂ, ಅತಿಯಾದ ಮದ್ಯಪಾನದಿಂದ ಹೃದಯಾಘಾತದಿಂದ ಅವರ ಸಾವು ಸಂಭವಿಸಿರಬಹುದು ಎಂದು ಪೊಲೀಸರು ನಂಬಿದ್ದಾರೆ.

ಬ್ಯಾಂಕಾಕ್‌ನ ಕೊಳೆಗೇರಿಯಲ್ಲಿ ಬೆಳೆದ ಥಾನಕರ್ನ್ ಅನೇಕ ಕಷ್ಟಗಳನ್ನು ಎದುರಿಸಿದರು. ಅವರು ಕೇವಲ ಎರಡು ತಿಂಗಳ ಮಗುವಾಗಿದ್ದಾಗ ಅವರ ಪೋಷಕರು ಬೇರ್ಪಟ್ಟ ನಂತರ ಅವರ ಅಜ್ಜಿಯಿಂದ ಬೆಳೆದ ಅವರು ತಮ್ಮ ಕುಟುಂಬವನ್ನು ಬೆಂಬಲಿಸಲು ಏಳನೇ ವಯಸ್ಸಿನಲ್ಲಿ ಮಾರುಕಟ್ಟೆಯಲ್ಲಿ ಹೂವಿನ ಹಾರಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು. ನಂತರ ಅವರು ರಾಪ್ ವೀಡಿಯೊಗಳನ್ನು ಪೋಸ್ಟ್ ಮಾಡಿದರು. ವಿವಿಧ ಸವಾಲುಗಳಲ್ಲಿ ಭಾಗವಹಿಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದರು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net