

ವಿಶ್ವಸಂಸ್ಥೆ: ಸರ್ಕಾರೇತರ ಸಂಘಟನೆಗಳು ಕರೊನಾ ವೈರಾಣು ಅಂಶಗಳನ್ನು ಪಡೆದುಕೊಳ್ಳುವ ಸಾಧ್ಯತೆ ಇರುವ ಕಾರಣ ಭಯೋತ್ಪಾದಕರು ಕೊವಿಡ್-19 ಪರಿಸ್ಥಿತಿಯ ದುರ್ಲಾಭ ಪಡೆದು ಜೈವಿಕ ಅಸ್ತ್ರದ ದಾಳಿ ನಡೆಸುವ ಶಂಕೆ ಇದೆ ಎಂದು ವಿಶ್ವಸಂಸ್ಥೆ ಮಹಾ ಪ್ರಧಾನಕಾರ್ಯದರ್ಶಿ ಅಂಟೋನಿಯೊ ಗುಟೆರೆಸ್ ಎಚ್ಚರಿಸಿದ್ದಾರೆ.
ಈ ಸಾಂಕ್ರಾಮಿಕ ರೋಗದಿಂದ ಬಯಲಿಗೆ ಬಂದ ದೌರ್ಬಲ್ಯ ಮತ್ತು ಸಿದ್ಧತೆಯಲ್ಲಿನ ಕೊರತೆಯಂಥ ಅವಕಾಶವನ್ನು ಭಯೋತ್ಪಾದಕರು ಜೈವಿಕ ದಾಳಿಯ ಅವಕಾಶವಾಗಿ ಬಳಸಿಕೊಳ್ಳುವ ಅಪಾಯ ಇದೆ ಎಂದಿದ್ದಾರೆ.
ಬಹುತೇಕ ಸರ್ಕಾರಗಳು ಸಾಂಕ್ರಾಮಿಕ ರೋಗದ ವಿರುದ್ಧ ಗಮನ ಕೇಂದ್ರೀಕರಿಸಿರುವ ಈ ಸಂದರ್ಭದಲ್ಲಿ ಉಗ್ರರ ಸಂಘಟನೆಗಳು ದಾಳಿ ನಡೆಸಲು ಷಡ್ಯಂತ್ರ ರೂಪಿಸುವ ಸಾಧ್ಯತೆಯೂ ಇದೆ ಎಂದು ಎಚ್ಚರಿಸಿದ್ದಾರೆ. ಭದ್ರತಾ ಮಂಡಳಿಯ ಸಭೆಯಲ್ಲಿ ಮಾತನಾಡಿದ ಅವರು, ಕರೊನಾ ಮುಂದಿಟ್ಟಿರುವ ಅಪಾಯಕಾರಿ ಸವಾಲುಗಳನ್ನು ಪಟ್ಟಿ ಮಾಡಿದರು. ವಿಡಿಯೋ ಕಾನ್ಪರೆನ್ಸ್ ಮೂಲಕ ನಡೆದ ಈ ಸಭೆಯಲ್ಲಿ ಇದೇ ಮೊದಲ ಬಾರಿಗೆ ಕರೊನಾ ಬಗ್ಗೆ ರ್ಚಚಿಸಲಾಯಿತು. ಕೊವಿಡ್-19 ವಿರುದ್ಧದ ಹೋರಾಟವು ‘ಒಂದು ತಲೆಮಾರಿನ ಹೋರಾಟವಾಗಿದೆ; ಸ್ವತಃ ವಿಶ್ವಸಂಸ್ಥೆಯ ಅಸ್ತಿತ್ವದ ಹೋರಾಟವೂ ಆಗಿದೆ’ ಎಂದು ಗುಟೆರಸ್ ಹೇಳಿದ್ದಾರೆ. ಕರೊನಾ ಸಾಂಕ್ರಾಮಿಕವು ಜಾಗತಿಕ ಆರೋಗ್ಯ ಬಿಕ್ಕಟ್ಟಾಗಿದೆ ಹಾಗೂ ಅದು ದೂರಗಾಮಿ ಪರಿಣಾಮ ಬೀರುವಂಥದ್ದಾಗಿದೆ. ಅಂತಾರಾಷ್ಟ್ರೀಯ ಶಾಂತಿ, ಸುರಕ್ಷತೆಗೂ ಅದು ಅಪಾರ ಅಪಾಯ ಒಡ್ಡುತ್ತದೆ. ಸಾಮಾಜಿಕ ಅಶಾಂತಿ ಮತ್ತು ಹಿಂಸಾಚಾರ ಭುಗಿಲೆದ್ದು ರೋಗದ ವಿರುದ್ಧ ಹೋರಾಡುವ ಸಾಮರ್ಥ್ಯವೂ ಕುಗ್ಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಮಾಸ್ಕ್ ಧರಿಸದಿದ್ದರೆ -ಠಿ;200 ದಂಡ
ಮಾಸ್ಕ್ ಧರಿಸದೇ ಮನೆಯಿಂದ ಹೊರಬರುವವರಿಗೆ ಒಡಿಶಾ ಸರ್ಕಾರ -ಠಿ; 200ದಂಡ ವಿಧಿಸಲು ನಿರ್ಧರಿಸಿದೆ. ಅಲ್ಲದೇ ತಪ್ಪನ್ನು ಪುನರಾವರ್ತಿಸಿದವರಿಗೆ ಎರಡನೇ ಬಾರಿಗೆ -ಠಿ; 500 ದಂಡ ವಿಧಿಸುವುದಾಗಿ ಹೇಳಿದೆ.