ಹಿಜ್ಬುಲ್‍ನ ಉಗ್ರ ಅಣ್ಣನಿಗೆ ತಿರಂಗಾ ಹಾರಿಸಿ ಟಕ್ಕರ್ ಕೊಟ್ಟ ತಮ್ಮ!

rayis matto
Published on

ಶ್ರೀನಗರ: ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ, ಹಿಜ್ಬುಲ್ ಮುಖ್ಯಸ್ಥನ ಸಹೋದರ, ಜಮ್ಮು ಮತ್ತು ಕಾಶ್ಮೀರದ ಸೊಪೋರ್ ಎಂಬಲ್ಲಿರುವ ತನ್ನ ಮನೆಯಲ್ಲಿ ಭಾರತದ ಧ್ವಜವನ್ನು ಹಾರಿಸುವುದು ಕಂಡುಬಂದಿದೆ. ಇದು ಸಿನಿಮೀಯ ಎಂದೆನಿಸಿದರೂ ಇದು ಸತ್ಯ!

ಈ ವಿಡಿಯೋದಲ್ಲಿ ಹಿಜ್ಬುಲ್ ಭಯೋತ್ಪಾದಕ ಜಾವಿದ್ ಮಟ್ಟೂನ ಸಹೋದರ ರಯೀಸ್ ಮಟ್ಟೂ ತನ್ನ ಮನೆಯ ಕಿಟಕಿಯಿಂದ ಭಾರತದ ಧ್ವಜವನ್ನು ಬೀಸುವುದು ಕಾಣಬಹುದು.

ಫೈಸಲ್/ಸಾಕಿಬ್/ಮುಸೈಬ್ ಎಂದೂ ಕರೆಯಲ್ಪಡುವ ಜಾವಿದ್ ಮಟ್ಟೂ, ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಗುಂಪಿಗೆ ಸಂಬಂಧಿಸಿದ ಸಕ್ರಿಯ ಭಯೋತ್ಪಾದಕ. ಭದ್ರತಾ ಸಂಸ್ಥೆಗಳ ಪಟ್ಟಿಯಲ್ಲಿ ಕಣಿವೆ ರಾಜ್ಯದಲ್ಲಿನ ಟಾಪ್10 ಟಾರ್ಎಟ್‍ಗಳಲ್ಲಿ ಅವನೂ ಸೇರಿದ್ದಾನೆ.

ಶ್ರೀನಗರದಲ್ಲಿ ‘ತಿರಂಗಾ ರಾ್ಯಲಿ’

ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಆಗಸ್ಟ್ 13 ರಿಂದ 15ರ ನಡುವೆ 'ಹರ್ ಘರ್ ತಿರಂಗಾ'ದಲ್ಲಿ ಭಾಗವಹಿಸುವಂತೆ ಜನರನ್ನು ಕೇಳಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಭಾನುವಾರ, ಶ್ರೀನಗರದಲ್ಲಿ ಮೆಗಾ 'ತಿರಂಗಾ' ರಾ್ಯಲಿಯನ್ನು ಆಯೋಜಿಸಲಾಗಿದ್ದು, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net