ಉಗ್ರ ದಾಳಿ ಐವರು ಹುತಾತ್ಮ; ಸೇನಾ ವಾಹನದ ಮೇಲೆ ಗ್ರೆನೇಡ್​ ದಾಳಿ; ಸಜೀವ ದಹನ

attack
Published on

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಛ್​ನಲ್ಲಿ ಗುರುವಾರ ಭಯೋತ್ಪಾದಕರು ನಡೆಸಿದ ಗ್ರೆನೇಡ್​ ದಾಳಿಯಲ್ಲಿ ಮಿಲಿಟರಿ ವಾಹನ ಹೊತ್ತಿ ಉರಿದು ರಾಷ್ಟ್ರೀಯ ರೈಲ್ಸ್​ನ ಐವರು ಯೋಧರು ಮೃತಪಟ್ಟು, ಮತ್ತೊಬ್ಬರು ಗಾಯಗೊಂಡಿದ್ದಾರೆ. ಮಧ್ಯಾಹ್ನ 3 ಗಂಟೆ ಹೊತ್ತಿಗೆ ಉಗ್ರರು ಮಿಲಿಟರಿ ವಾಹನದ ಮೇಲೆ ದಾಳಿ ನಡೆಸಿದರು. ಬಹುಶಃ ಗ್ರೆನೇಡ್​ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಸೇನೆಯ ಉತ್ತರ ಕಮಾಂಡ್​ನ ಕೇಂದ್ರ ಕಾರ್ಯಾಲಯ ತಿಳಿಸಿದೆ. ಪೂಂಛ್​ ಜಿಲ್ಲೆಯ ರಜೌರಿ ಸೆಕ್ಟರ್​ನ ಭಿಂಬರ್​ ಗಾಲಿ ಮತ್ತು ಪೂಂಛ್​ ನಡುವೆ ಸೇನಾ ವಾಹನ ಸಂಚರಿಸುತ್ತಿದ್ದಾಗ ಭಾರಿ ಮಳೆ ಮತ್ತು ಮಂದನೋಟದ ಲಾಭ ಪಡೆದು ಭಯೋತ್ಪಾದಕರು ದಾಳಿ ನಡೆಸಿದರು ಎಂದು ಸೇನೆ ವಿವರಿಸಿದೆ.

ಭಯೋತ್ಪಾದನೆ ವಿರೋಧಿ ಕಾರ್ಯಾಚರಣೆ ಪಡೆ: ರಾಷ್ಟ್ರೀಯ ರೈಲ್ಸ್​ ಟಕವನ್ನು ಭಯೋತ್ಪಾದನೆ& ವಿರೋಧಿ ಕಾರ್ಯಾಚರಣೆಗಾಗಿ ಈ ಪ್ರದೇಶದಲ್ಲಿ ನಿಯೋಜಿಸಲಾಗಿದೆ. ಉಗ್ರರ ದಾಳಿಯಲ್ಲಿ ಗಾಯಗೊಂಡ ಯೋಧನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾ ಗುತ್ತಿದೆ. ದುಷ್ಕರ್ಮಿಗಳ ಪತ್ತೆಗೆ ಶೋಧ ನಡೆಸಲಾಗುತ್ತಿದೆ.

ಪಿಎಎಫ್​ಎಫ್​ ಹೊಣೆ

ಪಿಎಎಫ್​ಎಫ್​ (ಪೀಪಲ್ಸ್​ ಆ್ಯಂಟಿ&ಫ್ಯಾಸಿಸ್ಟ್​ ಫ್ರಂಟ್​) ಹೆಸರಿನ ಭಯೋತ್ಪಾದಕ ಸಂಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಈ ಉಗ್ರ ಸಂಟನೆ ಜೈಶ್​-ಎ-ಮೊಹಮ್ಮದ್​ ಜತೆ ನಂಟು ಹೊಂದಿದೆ. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಸಕ್ರಿಯವಾಗಿದೆ. ಕಳೆದ ಜನವರಿಯಲ್ಲಿ ಕೇಂದ್ರ ಗೃಹ ಸಚಿವಾಲಯ ಈ ಸಂಟನೆಯನ್ನು ನಿಷೇಧಿಸಿತ್ತು. ಜಮ್ಮು ಮತ್ತು ಕಾಶ್ಮೀರದಿಂದ 370ನೇ ವಿಧಿಯನ್ನು ತೆಗೆದುಹಾಕಿದ ನಂತರ ಪಿಎಎಫ್​ಎಫ್​ ಪ್ರಬಲವಾಗಿದೆ. ಈ ಸಂಟನೆಯು ಅನ್ಸಾರ್​ ಜ್ವತ್​&ಉಲ್​&ಹಿಂದ್​ನ ಮೃತ ಕಮಾಂಡರ್​ ರಕಿಲ್​ ಮೂಸಾನಿಂದ ಪ್ರೇರಿತವಾಗಿದೆ. ಸಂಟನೆಯ ಸದಸ್ಯರು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಪೂಂಛ್​ನಲ್ಲಿ ದಾಳಿಯಲ್ಲಿ ಪಿಎಎಫ್​ಎಫ್​ನ ಮೂವರು ಭಾಗಿಯಾಗಿದ್ದಾರೆ ಎನ್ನಲಾಗಿದೆ. ಈ ಸಂಟನೆಯ ಉಗ್ರರು ರಜೌರಿ&ಪೂಂಛ್​ ಕಾಡುಗಳಲ್ಲಿ ನೆಲೆಸಿದ್ದು, ಅವರು ಆಗಾಗ ಹೊರಬಂದು ದುಷತ್ಯ ನಡೆಸಿ ಕಾಡಿಗೆ ಮರಳುತ್ತಿರುತ್ತಾರೆ ಎಂದು ಮೂಲಗಳು ಹೇಳಿವೆ.

ರಾಜನಾಥ್​ ಸಿಂಗ್​ ಖಂಡನೆ

ಭಯೋತ್ಪಾದಕರ ಹೇಯದಾಳಿಗೆ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೇನೆ ಐದು ವೀರ ಯೋಧರನ್ನು ಕಳೆದುಕೊಂಡಿದ್ದು, ಈ ಸಮಯದಲ್ಲಿ ನಾವು
ದುಃಖತಪ್ತ ಕುಟುಂಬಗಳ ಜೊತೆಯಲ್ಲಿದ್ದೇವೆ ಎಂದು ಹೇಳಿದ್ದಾರೆ. ಮುಂದಿನ ತಿಂಗಳು ಗೋವಾದಲ್ಲಿ ನಡೆಯುವ ಶಾಂಘಾಯ್​ ಸಹಕಾರ ಸಂಸ್ಥೆಯ ವಿದೇಶಾಂಗ ಸಚಿವರ ಸಭೆಯಲ್ಲಿ ಪಾಕ್​ ಸಚಿವ ಬಿಲಾವಲ್​ ಭುಟ್ಟೋ ರ್ಜದಾರಿ ಭಾಗವಹಿಸಲಿದ್ದಾರೆಂದು ಪಾಕಿಸ್ತಾನ ಬುಧವಾರವಷ್ಟೇ ಪ್ರಕಟಿಸಿತ್ತು. ಅದರ ಮರುದಿನವೇ ಈ ದಾಳಿ ನಡೆದಿದೆ.

ಪುಲ್ವಾಮಾ ದಾಳಿ

2019 ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ಭದ್ರತಾ ಸಿಬ್ಬಂದಿ ಇದ್ದ ವಾಹನದ ಮೇಲೆ ಆತ್ಮಹತ್ಯಾ ದಾಳಿ ನಡೆದಿತ್ತು. 40 ಯೋಧರು ಮೃತಪಟ್ಟಿದ್ದರು.
ಉರಿ ದಾಳಿ
2016 ಸೆಪ್ಟೆಂಬರ್​ 18ರಂದು ಕಾಶ್ಮೀರದ ಉರಿ ಸೆಕ್ಟರ್​ನ ಎಲ್​ಒಸಿ ಬಳಿ ಇರುವ ಭಾರತೀಯ ಸೇನೆಯ ನೆಲೆ ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು. 16 ಸೈನಿಕರು ಸಾವನ್ನಪ್ಪಿದ್ದರು.

ಜಿ20 ಸಭೆ

ಶ್ರೀನಗರದಲ್ಲಿ ಮೇ ತಿಂಗಳಲ್ಲಿ ಜಿ20 ಪ್ರವಾಸೋದ್ಯಮ ಕಾರ್ಯ ತಂಡದ ಸಭೆ ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್​ ಷಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ಕಳೆದ ವಾರವಷ್ಟೇ ಕೇಂದ್ರಾಡಳಿತ ಪ್ರದೇಶದ ಭದ್ರತಾ ಪರಿಸ್ಥಿತಿ ಪರಿಶೀಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net