

ಸುಮಾವೀಣಾ
ಎಷ್ಟೇ ಅನುಕೂಲವಾಗಿದ್ದರೂ ಮತ್ತಷ್ಟು ಬೇಕು ಎನಿಸುತ್ತದೆ. ಏನೇ ಕೊರತೆ ಇದ್ದರೂ ತೃಪ್ತಿಯಿಂದ ಸಂತೋಷವಾಗಿ ಬದುಕು ಸಾಗಿಸುವುದು ಮಹತ್ವದ್ದು ಎಂಬುದನ್ನು ಸೂಚಿಸುವ ಪ್ರಸಂಗ ಇದು. ಕಾಗೆ ಒಮ್ಮೆ ನಿರುತ್ಸಾಹಿಯಾಗಿ ಮರದ ರೆಂಬೆಯಲ್ಲಿ ಕುಳಿತು ಅಳುತ್ತಿರುತ್ತದೆ. ಅದರ ಕಂಬನಿ ಮರದ ಕೆಳಗಿದ್ದ ಸನ್ಯಾಸಿಯ ಮೈಸೋಕುತ್ತದೆ. ಸನ್ಯಾಸಿ ತಲೆಯೆತ್ತಿದರೆ ದುಃಖಿಸುತ್ತಿರುವ ಕಾಗೆ ಕಾಣುತ್ತದೆ. ಸನ್ಯಾಸಿ "ನಿನ್ನ ಈ ದುಃಖಕ್ಕೆ ಕಾರಣವೇನು' ಎಂದಾಗ ಕಾಗೆಯು "ನಾನು ಜೀವನದಲ್ಲಿ ನೊಂದಿದ್ದೇನೆ. ಯಾರೂ ಆದರಿಸುವುದಿಲ್ಲ. ನನ್ನನ್ನು ಕಂಡಕೂಡಲೇ ಓಡಿಸುತ್ತಾರೆ. ಹೀಗೂ ಜೀವನ ಇರುತ್ತದೆಯೇ' ಎನ್ನುತ್ತದೆ. ಸನ್ಯಾಸಿಗೆ ಕರುಣೆ ಬಂದು, ಇರುವುದಲ್ಲೆ ಖುಷಿಯಾಗಿರಬೇಕು ಎಂದರೂ ಕಾಗೆಗೆ ಸಮಾಧಾನವಾಗುವುದಿಲ್ಲ. ಆಗ ಸನ್ಯಾಸಿ "ನನ್ನ ಮಂತ್ರಶಕ್ತಿಯಿಂದ ನೀನು ಏನಾಗಿ ಇರಬಯಸುವೆಯೋ ಹಾಗೆ ಮಾಡುವೆ' ಎಂದಾಗ ಕಾಗೆ, "ನನ್ನನ್ನು ಹಂಸವನ್ನಾಗಿ ಮಾಡು. ಸದಾ ಕೊಳದಲ್ಲಿ ತಂಪಾಗಿ ಇರಬಹುದು' ಎನ್ನುತ್ತದೆ. ಆಗ ಸನ್ಯಾಸಿ "ಹಾಗೆ ಆಗಲಿ. ಅದನ್ನು ಒಮ್ಮೆಮಾತನಾಡಿಸಿ ಬಾ' ಎಂದಾಗ ಕಾಗೆ ಹಂಸದ ಬಳಿ ತೆರಳಿ "ನೀನು ಎಷ್ಟು ಚಂದ! ಹಾಲಿನ ಬಣ್ಣ ನಿನ್ನದು. ನಿನ್ನನ್ನು ನೋಡಿ ಎಲ್ಲರೂ ಸುಖಿಸುತ್ತಾರೆ' ಎಂದಿತು. "ಇಲ್ಲ! ಬಿಳಿ ಬಣ್ಣ ಏನೂ ಅಲ್ಲ. ಇದಕ್ಕಿಂತ ಸುಂದರ ಬಣ್ಣಗಳಿವೆ. ಗಿಳಿ ನೋಡು ಎಷ್ಟು ಸುಂದರ' ಎನ್ನುತ್ತದೆ ಹಂಸ. ಕಾಗೆ ಗಿಳಿ ಬಳಿ ಹೋಗಿ, "ನೀನು ಎಷ್ಟು ಸುಂದರ. ನೀನೇ ಅತ್ಯಂತ ಸಂತೋಷವಾದ ಪ' ಎಂದಾಗ, "ಛೇ! ತಪ್ಪು ತಿಳಿದಿರುವೆ ನೀನು. ನಾನು ಪಂಜರವಾಸಿ. ಬಲವಂತವಾಗಿ ಪಂಜರದಲ್ಲಿಡುತ್ತಾರೆ. ಸ್ವಾತಂತ್ರ$್ಯವಿಲ್ಲ' ಎನ್ನುತ್ತದೆ. ವಿಷಾದ ವ್ಯಕ್ತಪಡಿಸಿ ಕಾಗೆ ಹಾರಿಕೊಂಡು ಬರುವಾಗ ಪ ಸಂಗ್ರಹಾಲಯದಲ್ಲಿರುವ ನವಿಲನ್ನು ನೋಡುತ್ತದೆ. ಸಾವಿರಾರು ಜನರು ಬಂದು ಅದನ್ನು ನೋಡಿ ಸಂತೋಷ ಪಡುತ್ತಿರುತ್ತಾರೆ. ನವಿಲಿನ ಹತ್ತಿರ ಬಂದ ಕಾಗೆ, "ಅದೆಷ್ಟು ಸುಖ ನಿನ್ನದು. ಭೂಮಿಯ ಮೇಲೆ ಸುಂದರ ಪ ಅಂದರೆ ನೀನೇ. ನನ್ನನ್ನು ಕಂಡರೆ ಎಲ್ಲರಿಗೂ ತಿರಸ್ಕಾರ' ಎಂದಾಗ ನವಿಲು, "ಈ ಸೌಂದರ್ಯ ಬಂಧನಕ್ಕೀಡು ಮಾಡಿದೆ. ಹಿಂಸೆ ಆಗುತ್ತದೆ. ಮನಸ್ಸಿಗೆ ಸುಖವಿಲ್ಲ. ಇಷ್ಟು ದಿನ ಗಮನಿಸಿರುವೆ. ಇಲ್ಲಿ ಎಲ್ಲಾ ವಿಧದ ಪಗಳು ಪಂಜರದಲ್ಲಿವೆ. ಕಾಗೆ ಮಾತ್ರವಿಲ್ಲ. ನೀನೊಬ್ಬನೇ ಸುಖವಾಗಿರುವುದು. ನಿನ್ನನ್ನು ಯಾರೂ ಬಂಧಿಸುವುದಿಲ್ಲ. ನಾನೂ ನಿನ್ನ ಹಾಗೆ ಆಗಬೇಕು ಅನ್ನಿಸುತ್ತದೆ' ಎಂದಿತು. ಎಲ್ಲಾ ಪಗಳಿಗೂ ಅವುಗಳದ್ದೆ ಸಮಸ್ಯೆಗಳಿವೆ. ಅವುಗಳಿಗೆ ಹೋಲಿಸಿಕೊಂಡರೆ ತಾನೇ ಸುಖಿ ಎಂದುಕೊಂಡ ಕಾಗೆಯು ಸನ್ಯಾಸಿ ಬಳಿ ಬಂದು, "ನಾನು ಕಾಗೆಯಾಗಿಯೇ ಇರುವೆ. ಇರುವುದರಲ್ಲಿ ನಾನೇ ಸುಖಿ' ಎನ್ನುತ್ತದೆ.
ನಮಗೆ ಅತೃಪ್ತಿ ಹೆಚ್ಚು. ಇತರರೊಂದಿಗೆ ಯಾವಾಗಲೂ ನಮ್ಮನ್ನು ನಾವು ಹೋಲಿಸಿಕೊಂಡು ಜಂಜಾಟವೆಂಬ ಹೊದರಿನಲ್ಲಿ ಸಿಲುಕುತ್ತೇವೆ. ಇರುವುದರಲ್ಲಿ ತೃಪ್ತಿಯಾಗಿದ್ದರೆ ಜೀವನ ಸುಖಮಯವಾಗಿರುತ್ತದೆ.
(ಲೇಖಕರು ಹವ್ಯಾಸಿ ಬರಹಗಾರರು)