TVK Vijay Rally ವೇಳೆ ಭೀಕರ ಕಾಲ್ತುಳಿತ ; ಮಕ್ಕಳು ಸೇರಿದಂತೆ 30 ಜನರು ಸಾವು..?

TVK Vijay Rally
Published on

TVK Vijay Rally: ತಮಿಳುನಾಡಿನ ಕರೂರಿನಲ್ಲಿ ಶನಿವಾರ (ಸೆ 27) ನಡೆದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ವಿಜಯ್ ಅವರ ಪ್ರಚಾರ ರ‍್ಯಾಲಿಯ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಮಕ್ಕಳು ಸೇರಿದಂತೆ ಸುಮಾರು 30 ಜನರು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. 40 ಕ್ಕೂ ಹೆಚ್ಚು ಜನರ ಸ್ಥಿತಿ ಚಿಂತಾಜನಕವಾಗಿದ್ದು, ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ, ಸಚಿವ ಸೆಂಥಿಲ್ ಬಾಲಾಜಿ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು ಎಂದು ಮೂಲಗಳು ತಿಳಿಸಿವೆ.

ರ‍್ಯಾಲಿಯಲ್ಲಿ ಜನಸಂದಣಿ ಹೆಚ್ಚಾಗುತ್ತಾ ಹೋದಂತೆ, ಪಕ್ಷದ ಕಾರ್ಯಕರ್ತರು ಮತ್ತು ಮಕ್ಕಳು ಒತ್ತಡದಿಂದಾಗಿ ಮೂರ್ಛೆ ಹೋದರು ಎಂದು ತಿಳಿದುಬಂದಿದ್ದು, ಇದರಿಂದಾಗಿ ವಿಜಯ್ ತಮ್ಮ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ ಜನಸ್ತೋಮವನ್ನು ಶಾಂತವಾಗಿರುವಂತೆ ಕರೆ ನೀಡಿದರು ಮತ್ತು ಆಂಬ್ಯುಲೆನ್ಸ್‌ಗಳಿಗೆ ದಾರಿ ಮಾಡಿಕೊಡುವಂತೆ ತಮ್ಮ ಬೆಂಬಲಿಗರಲ್ಲಿ ವಿನಂತಿಸಿಸಿಕೊಂಡರು ಎನ್ನಲಾಗಿದೆ. ಸಚಿವ ಸೆಂಥಿಲ್ ಬಾಲಾಜಿ, ಆರೋಗ್ಯ ಸಚಿವ ಸುಬ್ರಮಣಿಯನ್, ಜಿಲ್ಲಾಧಿಕಾರಿ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಸಚಿವ ಅನ್ಬಿಲ್ ಮಹೇಶ್ ಅವರಿಗೆ ಹತ್ತಿರದ ತಿರುಚಿರಾಪಳ್ಳಿಯಿಂದ ನೆರವು ನೀಡುವಂತೆ ಸೂಚಿಸಲಾಗಿದೆ, ಸಾರ್ವಜನಿಕರು ವೈದ್ಯಕೀಯ ತಂಡಗಳು ಮತ್ತು ಪೊಲೀಸರೊಂದಿಗೆ ಸಹಕರಿಸಬೇಕೆಂದು ಮುಖ್ಯಮಂತ್ರಿ ಸ್ಟಾಲಿನ್ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net