

Iran: ದಕ್ಷಿಣ ಇರಾನ್ನಲ್ಲಿ ಬಸ್ ಪಲ್ಟಿಯಾಗಿ ಕನಿಷ್ಠ 15 ಪ್ರಯಾಣಿಕರು ಸಾವನ್ನಪ್ಪಿದ್ದು, 27ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ.
ಇರಾನ್ ದಕ್ಷಿಣ ಪ್ರಾಂತ್ಯದ ಶಿರಾಜ್ ಸಿಟಿಯಲ್ಲಿ ಅಪಘಾತ ಸಂಭವಿಸಿದೆ. ಫಾರ್ಸ್ ಪ್ಯಾಂತ್ಯದ ತುರ್ತು ಸಂಸ್ಥೆಯ ಮುಖ್ಯಸ್ಥ ಮಸೌದ್ ಅಬೆದ್ ಮಾತನಾಡಿ, ಬಸ್ ಅಪಘಾತಕ್ಕೀಡಾದ ಹಿನ್ನಲೆ ಘಟನೆಯಲ್ಲಿ 15 ಜನರು ಮೃತಪಟ್ಟಿದ್ದಾರೆ. 27ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.
ವರ್ಷಕ್ಕೆ 17 ಸಾವಿರ ಮಂದಿ ಕೇವಲ ರಸ್ತೆ ಅಪಘಾತದಲ್ಲೇ ಸಾವನ್ನಪ್ಪುತ್ತಿರುವ ದೇಶಗಳ ಪೈಕಿ ಇರಾನ್ ಮುಂಚೂಣಿಯಲ್ಲಿದೆ. ಸುರಕ್ಷತಾ ಕ್ರಮಗಳ ನಿರ್ಲಕ್ಷ್ಯ, ಹಳೆಯ ವಾಹನಗಳ ಬಳಕೆ ಹಾಗೂ ಅಸಮರ್ಪಕ ತುರ್ತು ಸೇವೆಗಳಿಂದ ಇಂತಹ ಅಪಘಾತಗಳು ಸಂಭವಿಸುತ್ತಿವೆ ಎಂದು ವರದಿಗಳು ಉಲ್ಲೇಖಿಸಿವೆ. (ಏಜೆನ್ಸೀಸ್)