

ಬೆಂಗಳೂರು ಮುಂಬರುವ ಮಾರ್ಚ್/ಏಪ್ರಿಲ್‌ನಲ್ಲಿ ನಡೆಯಲಿರುವ 2024-25ನೇ ಸಾಲಿನ ದ್ವಿತೀಯ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿಯನ್ನು ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಪ್ರಕಟಿಸಿದೆ.
ದ್ವಿತೀಯ ಪಿಯುಸಿ ಪರೀಕ್ಷೆಯು ಮಾ.1ರಿಂದ 19ರ ವರೆಗೆ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಮಾ.20ರಿಂದ ಏ.2ರವೆಗೆ ನಡೆಯಲಿದೆ. ಪಿಯುಸಿ ಪರೀಕ್ಷೆಗಳು ಬೆಳಗ್ಗೆ 10ರಿಂದ ಮಧ್ಯಾಹ್ನೆ 1 ಗಂಟೆವರೆಗೆ ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಬೆಳಗ್ಗೆ 10ರಿಂದ ಮಧ್ಯಾಹ್ನ 1.15ರವರೆಗೆ ನಡೆಯಲಿವೆ ಎಂದು ಮಂಡಳಿ ಅಧ್ಯಕ್ಷರು ಪ್ರಕಟಣೆ ಹೊರಡಿಸಿದ್ದಾರೆ.
ತಾತ್ಕಾಲಿಕ ವೇಳಾಪಟ್ಟಿಗೆ ವಿದ್ಯಾರ್ಥಿಗಳು, ಪಾಲಕರು ಹಾಗೂ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಡಿ.16ರವರೆಗೆ ಕಾಲಾವಕಾಶ ನೀಡಲಾಗಿದೆ. ಆಕ್ಷೇಪಣೆಗಳನ್ನು ಮಂಡಳಿಯ ಇ-ಮೇಲ್ ವಿಳಾಸ ್ಚಜ್ಟಿಛ್ಟಿಟ್ಞಛಿಚಿಅಜಞಜ್ಝಿ.್ಚಟಞ ಕ್ಕೆ ಹಾಗೂ ಹಾರ್ಡ್ ಪ್ರತಿಯನ್ನು ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560 003 ಇಲ್ಲಿಗೆ ನಿಗದಿತ ಸಮಯದಲ್ಲಿ ಕಳುಹಿಸಬಹುದು ಎಂದು ತಿಳಿಸಿದ್ದಾರೆ.
ರಾಜ್ಯದ ಎಲ್ಲ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಶಾಲಾ/ಕಾಲೇಜುಗಳು ಪ್ರಕಟಣಾ ಲಕದಲ್ಲಿ ವೇಳಾಪಟ್ಟಿಯನ್ನು ಪ್ರಕಟಿಸಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ.
ವೇಳಾಪಟ್ಟಿ (ದ್ವಿತೀಯ ಪಿಯುಸಿ)
ದಿನಾಂಕ ವಿಷಯ
ಮಾ.1 ಕನ್ನಡ, ಅರೇಬಿಕ್
ಮಾ.3 ಶಿಕ್ಷಣ ಶಾಸ, ತರ್ಕಶಾಸ, ವ್ಯವಹಾರ ಅಧ್ಯಯನ
ಮಾ.4 ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ್ರೆಂಚ್
ಮಾ.5 ರಾಜ್ಯಶಾಸ, ಸಂಖ್ಯಾಶಾಸ
ಮಾ.7 ಇತಿಹಾಸ, ಭೌತಶಾಸ
ಮಾ.8 ಹಿಂದಿ
ಮಾ.10 ಐಚ್ಛಿಕ ಕನ್ನಡ, ಲೆಕ್ಕಶಾಸ, ಭೂಗರ್ಭಶಾಸ, ಗೃಹ ವಿಜ್ಞಾನ
ಮಾ.12 ಮನಃಶಾಸ, ರಾಸಾಯನಶಾಸ, ಮೂಲ ಗಣಿತ
ಮಾ.13 ಅರ್ಥಶಾಸ
ಮಾ.15 ಇಂಗ್ಲಿಷ್
ಮಾ.17 ಭೂಗೋಳಶಾಸ, ಜೀವಶಾಸ
ಮಾ.18 ಸಮಾಜಶಾಸ, ವಿದ್ಯುನ್ಮಾನಶಾಸ, ಗಣಕ ವಿಜ್ಞಾನ
ಮಾ.19 ಹಿಂದೂಸ್ತಾನಿ ಸಂಗೀತ, ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಹೆಲ್ತ್‌ಕೇರ್, ಬ್ಯೂಟಿ ಆೃಂಡ್ ವೆಲ್‌ನೆಸ್
ವೇಳಾಪಟ್ಟಿ (ಎಸ್‌ಎಸ್‌ಎಲ್‌ಸಿ)
ದಿನಾಂಕ ವಿಷಯ
ಮಾ.20 ಪ್ರಥಮ ಭಾಷೆ ಕನ್ನಡ
ಮಾ.22 ಸಮಾಜ ವಿಜ್ಞಾನ
ಮಾ.24 ದ್ವಿತೀಯ ಭಾಷೆ ಇಂಗ್ಲಿಷ್
ಮಾ.27 ಗಣಿತ
ಮಾ.29 ತೃತೀಯ ಭಾಷೆ ಹಿಂದಿ, ಎಸ್‌ಎಸ್‌ಕ್ಯುಎ್ಎ್ ವಿಷಯಗಳು
ಏ.1 ಜೆಟಿಎಸ್ ವಿಷಯಗಳು
ಏ.2 ವಿಜ್ಞಾನ