ಕೊನೆ ಕ್ಷಣದವರೆಗೂ ಎಕ್ಸಾಂ ಬರಿತೀವಿ! 'ಪುಷ್ಪ 2' ನಿರ್ದೇಶಕರಿಗೆ ಶುರುವಾಯ್ತು ಒತ್ತಡ, ಬಗೆಹರಿಯದ ತಲೆನೋವು | Pushpa 2

ವಿಜಯವಾಣಿ (81)
Published on

ಆಂಧ್ರಪ್ರದೇಶ: ದಕ್ಷಿಣ ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿರುವ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಪ್ಯಾನ್ ಇಂಡಿಯಾ ‘ಪುಪ್ಪ 2’ (Pushpa 2) ಚಿತ್ರ ಇದೀಗ ತೆರೆಗೆ ಬರಲು ಭರ್ಜರಿಯಾಗಿ ಸಿದ್ಧಗೊಳ್ಳುತ್ತಿದೆ. ಬಹಳ ದಿನಗಳಿಂದ ಸಿನಿಮಾದ ಅಧಿಕೃತ ಬಿಡುಗಡೆ ದಿನಾಂಕವನ್ನು ಘೋಷಿಸಲು ಮೀನ-ಮೇಷ ಎಣಿಸುತ್ತಿದ್ದ ಚಿತ್ರ ತಯಾರಕರು, ಸಾಕಷ್ಟು ಭಾರೀ ಚರ್ಚಿಸಿ, ಇದೀಗ ಅಂತಿಮವಾಗಿ ಇದೇ ಡಿಸೆಂಬರ್​ 05ರಂದು ತೆರೆಗೆ ತರಲು ನಿರ್ಧರಿಸಿದ್ದಾರೆ. ಇದರಿಂದ ಪ್ರೇಕ್ಷಕರಲ್ಲಿದ್ದ ಗೊಂದಲಗಳೇನೋ ಬಗೆಹರಿದಿದೆ. ಆದರೆ, ನಿರ್ದೇಶಕರ ಕುರ್ಚಿ ಮಾತ್ರ ದಿನದಿಂದ ದಿನಕ್ಕೆ ಕಾವೇರುತ್ತಿದೆ.

ಅಸಲಿಗೆ ಚಿತ್ರದ ಬಿಡುಗಡೆಗೆ ಉಳಿದಿರುವುದು ಕೇವಲ 28 ದಿನಗಳಷ್ಟೇ. ಈ ಮಧ್ಯೆ ಪುಷ್ಪ 2 ಸಿನಿಮಾದ ಬಹುತೇಕ ಚಿತ್ರೀಕರಣ ಕೆಲಸಗಳು ಪೂರ್ಣಗೊಂಡಿವೆ. ಆದರೆ, ಎರಡು ಮುಖ್ಯ ಹಾಡುಗಳ ಶೂಟಿಂಗ್ ಮಾತ್ರ ಬಾಕಿ ಉಳಿದಿದೆ. ಸದ್ಯ ಇದು ನಿರ್ದೇಶಕ ಸುಕುಮಾರ್​ಗೆ ದೊಡ್ಡ ತಲೆನೋವಾಗಿ ಕಾಡುತ್ತಿದೆ ಎಂಬುದರಲ್ಲಿ ಎರಡನೇ ಮಾತಿಲ್ಲ. ಒಂದೆಡೆ ಡಿ.05ರಂದು ತೆರೆಗೆ ಬರಲಿದ್ದು, ತಮ್ಮ ನೆಚ್ಚಿನ ನಟನನ್ನು ಬೆಳ್ಳಿ ಪರದೆಯ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ತೀವ್ರ ಕಾತರ ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ದಿನಗಳು ಕಳೆಯಲಿ ಎಂಬುದು ಪ್ರೇಕ್ಷಕರ ಬಯಕೆ. ಆದ್ರೆ, ಪ್ರತಿದಿನ ಮುಂದೆ ಹೋದಂತೆ ಚಿತ್ರತಂಡಕ್ಕೆ ಕಷ್ಟದ ಚಕ್ರವನ್ನು ಬೇಧಿಸಿದಂತಾಗಿದೆ.

ನಾನು ಕೂಡ ಅದೇ ರೀತಿ ಒತ್ತಡದಲ್ಲಿದ್ದೇನೆ

ನನಗೆ ಏನು ಎಂಬುದು ಗೊತ್ತಿಲ್ಲ. ಒಬ್ಬ ವಿದ್ಯಾರ್ಥಿ ಪರೀಕ್ಷೆಗೆ ಹಾಜರಾದಾಗ ಹೇಗೆ ಕಡೆಯ ನಿಮಿಷದವರೆಗೂ ಕುಳಿತು, ಪೇಪರ್​ ಕೊಡದೆ ಬರೆಯುತ್ತಾನೋ, ನಾನು ಕೂಡ ಅದೇ ರೀತಿ ಒತ್ತಡದಲ್ಲಿದ್ದೇನೆ ಎಂದು ಸುಕುಮಾರ್​ ಚಿತ್ರದ ಕೆಲಸಗಳಲ್ಲಿ ಬಿಸಿಯಾಗಿದ್ದಾರೆ. ಈಗಾಗಲೇ ಎಲ್ಲರಿಗೂ ತಿಳಿದಿರುವ ಹಾಗೆ, ಚಿತ್ರದ ವಿಶೇಷ ಹಾಡಿನಿಂದ ಪುಷ್ಪ 2 ರಿಲೀಸ್​ ದಿನಾಂಕದಲ್ಲಿ ಭಾರೀ ಬದಲಾವಣೆಯಾಯಿತು.

ಇನ್ನೊಂದು ಹಾಡಿನ ಚಿತ್ರೀಕರಣ ಬಾಕಿ

ಸದ್ಯ ಈ ಗೊಂದಲಕ್ಕೆ ತೆರೆಬಿದ್ದಿದ್ದು, ಕನ್ನಡತಿ ಶ್ರೀಲೀಲಾ ಈ ಹಾಡಿನಲ್ಲಿ ಕುಣಿದು ಕುಪ್ಪಳಿಸಲಿದ್ದಾರೆ ಎಂದು ವರದಿಯಾಗಿದೆ. ಈ ಸಾಂಗ್​ ಜತೆಗೆ ಇನ್ನೊಂದು ಹಾಡಿನ ಚಿತ್ರೀಕರಣ ಬಾಕಿಯಿದ್ದು, ಇವರೆಡನ್ನು ನವೆಂಬರ್​ನೊಳಗೆ ಮುಗಿಸಿ, ಬಿಡುಗಡೆಗೆ ನಿರ್ದೇಶಕರು ತಯಾರಾಗಬೇಕು. ಸದ್ಯದ ಮಟ್ಟಿಗೆ ಇದು ದೊಡ್ಡ ಸವಾಲಾಗಿ ನಿಂತಿರುವುದರಲ್ಲಿ ಅನುಮಾನವಿಲ್ಲ ಎಂದೇ ಹೇಳಬಹುದು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net