ತೆಂಕಲಗೂಡು ಬೃಹನ್ಮಠದಲ್ಲಿ ಪಂಚಮಹೋತ್ಸವ-ಪೋಸ್ಟರ್ ಬಿಡುಗಡೆ

HSN MUST ( Advt) Swamiji
Published on

 ಮೇ 11, 12 ರಂದು  ಧಾರ್ಮಿಕ ಸಮ್ಮೇಳನ-  ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ  5ನೇ  ಪಟ್ಟಾಧಿಕಾರದ ವರ್ಧಂತಿ

ಹಾಸನ : ಸಕಲೇಶಪುರ ತಾಲೂಕಿನ ಯಸಳೂರು ಗ್ರಾಮದಲ್ಲಿರುವ ಉಜ್ಜಯಿನಿ ಮಹಾಪೀಠದ ಶಾಖಾ ಮಠವಾದ ತೆಂಕಲಗೂಡು ಬೃಹನ್ಮಠದಲ್ಲಿ ಮೇ 11, 12 ರಂದು ಹಮ್ಮಿಕೊಂಡಿರುವ ಪಂಚಮಹೋತ್ಸವ-ಧಾರ್ಮಿಕ ಸಮ್ಮೇಳನದ ಪೋಸ್ಟರ್ ಮತ್ತು ಭಿತ್ತಿ ಪತ್ರಗಳನ್ನು ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಬಿಡುಗಡೆ ಮಾಡಿದರು. ನಂತರ ನಡೆದ ಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಹಲವು ಸಾಮಾಜಿಕ ಸೇವಾ ಕಾರ್ಯವನ್ನೂ ಮಠಗಳು ನೆರವೇರಿಸಬೇಕು ಎಂಬುದು ಮುಖ್ಯ. ಈ ನಿಟ್ಟಿನಲ್ಲಿ ಶ್ರೀ ಮಠದ ಲಿಂಗೈಕ್ಯ ಶ್ರೀ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯ 5ನೇ ಪುಣ್ಯ ಸ್ಮರಣೆ, ಕಾಶಿ ಪೀಠದ ಜಗದ್ಗುರು ಶ್ರೀ ಡಾ.ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಅಡ್ಡಪಲ್ಲಕ್ಕಿ ಮಹೋತ್ಸವ, ಜನಜಾಗೃತಿ ಧರ್ಮ ಸಮಾವೇಶ ಮತ್ತು ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ 5ನೇ ವರ್ಷದ ಪಟ್ಟಾಧಿಕಾರದ ವರ್ಧಂತಿ, 30ನೇ ವರ್ಷದ ಜನ್ಮ ವರ್ಧಂತಿ ಮಹೋತ್ಸವ ಸೇರಿದಂತೆ ಹಲವು ಧಾರ್ಮಿಕ ಸಮಾರಂಭವನ್ನು ಆಯೋಜಿಸಲಾಗಿದೆ ಎಂದರು.

ಬೃಹತ್ ಆರೋಗ್ಯ ತಪಾಸಣಾ ಉಚಿತ ಶಿಬಿರ: ಸಮಾಜದ ಎಲ್ಲರೂ ಆರೋಗ್ಯವಂತರಾಗಿ ಇರಬೇಕೆಂಬ ದಿಸೆಯಲ್ಲಿ ಬೃಹತ್ ಆರೋಗ್ಯ ತಪಾಸಣಾ ಉಚಿತ ಶಿಬಿರ ಹಾಗೂ ಸಿಪಿಆರ್ (ತುರ್ತು ಸಂದರ್ಭ ರೋಗಿಯ ಜೀವ ಸಂರಕ್ಷಣೆ) ತರಬೇತಿಯನ್ನೂ ಹಮ್ಮಿಕೊಳ್ಳಲಾಗಿದ್ದು, ತಜ್ಞರು ಭಾಗವಹಿಸಲಿದ್ದಾರೆ. ಸಾರ್ವಜನಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಶ್ರೀಗಳು ಮನವಿ ಮಾಡಿದರು.

ಲೋಕಾರ್ಪಣೆಗೊಳ್ಳಲಿದೆ  ಸಿದ್ಧಾಂತ ಶಿಖಾಮಣಿ ಗ್ರಂಥ: ಕಾಶಿ ಪೀಠದ ಜಗದ್ಗುರು ಶ್ರೀ ಡಾ.ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಪಂಚಮಹೋತ್ಸವ ಸಂದರ್ಭ (ಮೇ 12ರಂದು ) ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥವನ್ನು ಲೋಕಾರ್ಪಣೆ ಗೊಳಿಸಲಿದ್ದಾರೆ. ಈ ಗ್ರಂಥ ಸೇವೆಯನ್ನು ಅಖಿಲ ಭಾರತ ವೀರಶೈವ ಮಹಾಸಭಾದ ಹಾಸನ ಜಿಲ್ಲಾಧ್ಯಕ್ಷ ನಾಗರನವಿಲೆ ಪರಮೇಶ್ವರ ನೆರವೇರಿಸಲಿದ್ದಾರೆಂದು ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಈ ಸಂದರ್ಭ ಹಾಜರಿದ್ದ ಭಕ್ತ ಸಮೂಹ ಧಾರ್ಮಿಕ ಸಭೆಗೆ ಸಹಕಾರ ನೀಡುವುದಾಗಿ ಸಮ್ಮತಿ ಸೂಚಿಸಿತು. ಶ್ರೀಗಳ ವರ್ಧಂತಿ ಸೇರಿದಂತೆ ಪಂಚಮಹೋತ್ಸವದ ಪ್ರತಿ ಹಂತದಲ್ಲೂ ತನು, ಮನ, ಧನ ಸಹಕಾರ ನೀಡುವುದರ ಜತೆಗೆ ಭಕ್ತರ ಸೇವೆ ಮಾಡಲು ಸಿದ್ಧ ಎಂದು ಸಂಕಲ್ಪ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net