ಪಾಲಿಕೆಯಲ್ಲಿ ಮೀನು ಮಾರಾಟಕ್ಕೆ ತಡೆ!

IMG_8913
Published on

ಶಿವಮೊಗ್ಗ: ನಗರದ ಲಷ್ಕರ್ ಮೊಹಲ್ಲಾ ಮೀನು ಮಾರುಕಟ್ಟೆ ಬಳಿ ರಸ್ತೆ ಬದಿ ಮೀನು ವ್ಯಾಪಾರಕ್ಕೆ ನಿರ್ಬಂಧ ವಿಧಿಸಿರುವುದನ್ನು ಖಂಡಿಸಿ ಮೀನು ಮಾರಾಟಗಾರರು ಗುರುವಾರ ಪಾಲಿಕೆ ಎದುರು ಮೀನು ಮಾರಾಟ ಮಾಡುವ ಮೂಲಕ ಪ್ರತಿಭಟಿಸಲು ಮುಂದಾದರು. ಆದರೆ ಪಾಲಿಕೆ ಸಿಬ್ಬಂದಿ ಅದಕ್ಕೆ ಅವಕಾಶ ನೀಡಲಿಲ್ಲ.

ಮೀನು ಮಾರಾಟಗಾರರನ್ನು ಒಳಗೆ ಬಿಡದಂತೆ ತಡೆಯುವ ಸಲುವಾಗಿ ಕೆಲ ಸಮಯ ಪಾಲಿಕೆ ಮುಖ್ಯದ್ವಾರ ಬಂದ್ ಮಾಡಲಾಯಿತು. ಇದರಿಂದಾಗಿ ಪಾಲಿಕೆ ಎದುರು ವಾಹನಗಳು ಸಾಲುಗಟ್ಟಿ ನಿಲ್ಲುವಂತಾಯಿತು. ಅಂತಿಮವಾಗಿ ಮೀನು ಮಾರಾಟಗಾರರ ಮನವೊಲಿಸಿ ಪ್ರತಿಭಟನೆ ನಡೆಯದಂತೆ ನೋಡಿಕೊಳ್ಳುವಲ್ಲಿ ಪಾಲಿಕೆ ಸಿಬ್ಬಂದಿ ಯಶಸ್ವಿಯಾದರು.

ಲಷ್ಕರ್ ಮೊಹಲ್ಲಾ ಮೀನು, ಮಾಂಸ ಮಾರುಕಟ್ಟೆ ಮಳಿಗೆಯ ಟೆಂಡರ್ ಪಡೆದ ವ್ಯಾಪಾರಿಗಳು ವಹಿವಾಟು ನಡೆಸುತ್ತಿದ್ದಾರೆ. ಮಾರುಕಟ್ಟೆ ಎದುರು ಬೀದಿಬದಿ ಮೀನು ವ್ಯಾಪಾರಕ್ಕೆ ಪಾಲಿಕೆ ನಿಷೇಧ ಹೇರಿದೆ. ಹೀಗಾಗಿ ತಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿ ಬೀದಿಬದಿ ಮೀನು ವ್ಯಾಪಾರಿಗಳು ಪಾಲಿಕೆ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net