ಪ್ರತಿಯೊಬ್ಬರು ಓದಲೇಬೇಕಾದ ಸುದ್ದಿ ಇದು... ಮಹಾಮಾರಿ ಕರೊನಾ ತಡೆಗೆ ಹತ್ತು ಉಪಚಾರಗಳು

Giridhara Kaje
Published on

ಕರೋನಾ ಸೋಂಕು ಬರದಂತೆ ತಡೆಗಟ್ಟಲು ಆರೈಕೆಯ ಐದು ಆಯುರ್ವೇದ ಸೂತ್ರಗಳು: 1. ಒಬ್ಬ ವ್ಯಕ್ತಿಗೆ ಒಂದು ಲೀಟರ್​ ನೀರನ್ನು ಕುದಿಸಿ ಐದು ತುಳಸಿ ಎಲೆಗಳನ್ನು ಹಾಕಿ ಮತ್ತೆರಡು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಸಬೇಕು. ತುಳಸಿ ಅನೇಕ ವೈರಾಣುನಾಶಕ ಗುಣ

ಹೊಂದಿದೆೆ. ಶ್ವಾಸಕೋಶದ ಬಲವರ್ಧನೆಗೂ ಉತ್ತಮ. ಇದಕ್ಕೆ ತುಳಸಿ ಫಾಂಟ ಎಂದು ಹೆಸರು. ಲುವಾದ ಕಷಾಯವೆಂದರೂ ಸರಿಯೇ. ತುಳಸಿಯ ಬದಲು ಲಾವಂಚದ ಬೇರು ಅಥವಾ ಶುಂಠಿಯನ್ನಾದರೂ ಬಳಸಬಹುದು. ಹೀಗೆ ನೀರಿನ ಮೌಲ್ಯವರ್ಧನೆ ಮಾಡಿ ದಿನಕ್ಕೆ ಒಂದು ಲೀಟರ್​ನಷ್ಟು ಸೇವಿಸುವುದು. 2. ಒಂದು ಬೆಟ್ಟದ ನೆಲ್ಲಿಕಾಯಿ ಅಥವಾ ಅದರ ಒಂದು ಚಮಚ ಚೂರ್ಣವನ್ನು ನೀರಿನೊಂದಿಗೆ ಪ್ರತಿನಿತ್ಯ ಸೇವಿಸುವುದು. ಸಾರ್ವದೈಹಿಕ ರೋಗನಿರೋಧಕ ಶಕ್ತಿ ಹೆಚ್ಚಿಸಲು ಅತ್ಯುತ್ತಮ ದ್ರವ್ಯವಾಗಿದೆ.

3. ಕಾಲು ಚಮಚ (250 ಮಿಲಿ ಗ್ರಾಮ್​) ಹಿಪ್ಪಲಿ ಚೂರ್ಣವನ್ನು ಒಂದು ಲೋಟ ಹಾಲು ಅಥವಾ ಅರ್ಧ ಚಮಚ ಜೇನುತುಪ್ಪದ ಜೊತೆಗೆೆ ದಿನಕ್ಕೆ ಒಂದು ಬಾರಿ ಹತ್ತು ದಿನಗಳ ಕಾಲ ಸೇವಿಸುವುದು. ಹತ್ತು ದಿನಗಳ ಅಂತರ ನೀಡಿ ಪುನರಾವರ್ತಿಸಬಹುದು. ಉಸಿರಾಟದ ಸಮಸ್ಯೆ ನಿಯಂತ್ರಣಕ್ಕೆ ಸಹಕಾರಿಯಾಗಿದ್ದು, ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಭಾವೀ ಔಷಧ. ವೈರಾಣು ನಾಶಕ ಗುಣವೂ ಇದೆ.

4. ದಿನಕ್ಕೆ ಒಂದೂವರೆ ಲೀಟರ್​ ಷಡಂಗ ಪಾನೀಯ ಸೇವಿಸುವುದು & ಭದ್ರಮುಷ್ಟಿಬೇರು, ಪರ್ಪಟಕ, ಲಾವಂಚ, ಶ್ರೀಗಂಧ, ಉದೀಚ್ಯ, ಶುಂಠಿಗಳನ್ನು ಪ್ರತಿಯೊಂದೂ ಎರಡು ಗ್ರಾಮ್​ನಷ್ಟು ಮೂರು ಲೀಟರ್​ ನೀರಿಗೆ ಹಾಕಿ ಒಂದೂವರೆ ಲೀಟರ್​ ಆಗುವ ತನಕ ಕುದಿಸುವುದು. ಬಾಯಾರಿಕೆ ಕಡಿಮೆ ಮಾಡುವುದಲ್ಲದೆ ಜ್ವರವಿದ್ದಾಗಲೂ ಉತ್ತಮ ಪಥ್ಯ. ದೇಹವನ್ನು ತಂಪು ಮಾಡುವುದರ ಜೊತೆಗೆ ಹಲವಾರು ವೈರಾಣು ನಾಶಕ ಗುಣವನ್ನು ಹೊಂದಿದೆ.

5. ನೆಲನೆಲ್ಲಿ/ ಅಮೃತಬಳ್ಳಿ/ ಭದ್ರಮುಷ್ಟಿ ಇವುಗಳಲ್ಲಿ ಯಾವುದಾದರೊಂದರ ಅರ್ಧ ಚಮಚ ಚೂರ್ಣವನ್ನು ಒಂದು ಲೋಟ ನೀರಿಗೆ ಹಾಕಿ ಕುದಿಸಿ, ನಿಂಬೆಹಣ್ಣಿನ ರಸ ಹಾಗೂ ಬೆಲ್ಲ ಸೇರಿಸಿ ದಿನಕ್ಕೆ ಎರಡು ಬಾರಿ ಕುಡಿಯುವುದು.

ಕರೋನಾ ಬಂದಾಗ ಮಾಡಬೇಕಾದ ಆಯುರ್ವೇದದ ಐದು ಉಪಚಾರಗಳು:

1. ಅಷ್ಟಗುಣ ಮಂಡ: ಎಂಟು ಗ್ರಾಂ ಕೆಂಪಕ್ಕಿ, ಎಂಟು ಗ್ರಾಂ ಉದ್ದಿನಬೇಳೆ, ಕೊತ್ತಂಬರಿ ಬೀಜ, ಶುಂಠಿ, ಹಿಪ್ಪಲಿ, ಕಾಳುಮೆಣಸು, ತುಪ್ಪದಲ್ಲಿ ಹುರಿದ ಇಂಗು, ಇವೆಲ್ಲವೂ ಮೂರು ಚಿಟಿಕೆ, ಅರ್ಧ ಚಮಚದಷ್ಟು ಕಲ್ಲುಪ್ಪು ಇವುಗಳನ್ನು 225 ಮಿಲಿ ಲೀಟರ್​ ನೀರಿಗೆ ಹಾಕಿ ಬೇಯಿಸುವುದು. ಅಕ್ಕಿ ಹಾಗೂ ಬೇಳೆ ಬೆಂದ ನಂತರ ತಿಳಿಗಂಜಿಯನ್ನು ಕುಡಿಯುವುದು. ಜ್ವರ, ಸುಸ್ತು, ಶೀತ, ಕೆಮ್ಮು ನಿಯಂತ್ರಣಕ್ಕೆ ಅನುಕೂಲ ಹಾಗೂ ವೈರಾಣು ನಾಶಕವೂ ಹೌದು.

2. ಹುರಳಿಕಾಳು, ಚೆನ್ನಂಗಿಬೇಳೆ, ಕಡ್ಲೆಬೇಳೆ, ಹೆಸರುಬೇಳೆ ಇವುಗಳಲ್ಲಿ ಯಾವುದಾದರೊಂದಕ್ಕೆ 16 ರಿಂದ 18 ಪಟ್ಟು ನೀರುಹಾಕಿ ಬೇಯಿಸುವುದು. ಅದಕ್ಕೆ ಶುಂಠಿ, ಕಾಳುಮೆಣಸು ಹುಡಿ ಸೇರಿಸಿ ಬೆಳಗ್ಗೆ ಮತ್ತು ರಾತ್ರಿ ಆಹಾರಕ್ಕಿಂತ ಮೊದಲು ಕುಡಿಯುವುದು. ಜ್ವರವಿದ್ದಾಗ ಹಿತವಾದ ಪೇಯವಾಗಿದ್ದು ದೇಹಕ್ಕೆ ಬಲ ನೀಡುತ್ತದೆ.

3. ನಾಲ್ಕು ಲೀಟರ್​ ನೀರನ್ನು ಅರ್ಧ ಲೀಟರ್​ ಆಗುವ ತನಕ ಇಂಗಿಸಿ ಆ ನೀರನ್ನು ಕುಡಿಯುವುದು. ಈ ಉಷ್ಣೋದಕಕ್ಕೆ ಜ್ವರ ಹಾಗೂ ಕೆಮ್ಮು ಕಡಿಮೆ ಮಾಡುವ ಗುಣವೂ ವಿಶೇಷವಾಗಿ ಇರುತ್ತದೆ.

4. ಕುದಿಯುವ ನೀರಿಗೆ ಹತ್ತು ತುಳಸಿ ಎಲೆಗಳನ್ನು ಅಥವಾ ಅರ್ಧ ಚಮಚ ಅರಿಶಿನ ಹಾಕಿ ಉಗಿ ತೆಗೆದುಕೊಳ್ಳುವುದು. ದಿನಕ್ಕೆ ಮೂರ್ನಾಲ್ಕು ಬಾರಿ ಮಾಡಬಹುದು.

5. ನೆಲನೆಲ್ಲಿ/ ಅಮೃತಬಳ್ಳಿ/ ಭದ್ರಮುಷ್ಟಿ ಇವುಗಳಲ್ಲಿ ಯಾವುದಾದರೊಂದರ ಒಂದು ಚಮಚ ಚೂರ್ಣವನ್ನು ಒಂದು ಲೋಟ ನೀರಿಗೆ ಹಾಕಿ ಕುದಿಸಿ ಕಾಲುಭಾಗ ಆದ ನಂತರ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಕಷಾಯವನ್ನು ಕುಡಿಯುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net