ಪ್ರವಾಸಿಗರ ಕಾಮದಾಸೆ ಈಡೇರಿಸೋ ತಾತ್ಕಾಲಿಕ ಪತ್ನಿಯರು! ಈ ಊರಲ್ಲಿದೆ ಹೆಂಡ್ತಿ ಖರೀದಿಸೋ ವಿಚಿತ್ರ ಪದ್ಧತಿ | Temporary Wives

Temporary Wives
Published on

ಜಕಾರ್ತ: ಮನುಷ್ಯನ ಕಲ್ಪನೆಯನ್ನೂ ಮೀರಿ ಜಗತ್ತು ಬೆಳೆಯುತ್ತಿದೆ. ಇಂದು ಟೆಕ್ನಾಲಜಿಗಳೇ ಎಲ್ಲಡೆ ಆವರಿಸಿದೆ. ಆದರೆ, ತಾಂತ್ರಿಕವಾಗಿ ಎಷ್ಟೇ ಮುಂದುವರಿದರೂ ಜನರು ಇಂದಿಗೂ ಕೆಲವು ವಿಚಿತ್ರ ಆಚರಣೆಗಳನ್ನು ಮಾಡುತ್ತಿರುವುದು ವಿಪರ್ಯಾಸವೇ ಸರಿ. ವಿಶ್ವದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯ ಸಂಪ್ರದಾಯ ಮತ್ತು ಪದ್ಧತಿಗಳಿವೆ. ಕೆಲವೊಂದು ಸಾಮಾನ್ಯ ಎನಿಸಿದರೆ, ಕೆಲವು ಆಚರಣೆಗಳು ಎಲ್ಲರನ್ನೂ ಅಚ್ಚರಿಗೆ ದೂಡುತ್ತದೆ. ಅದರಲ್ಲೂ ಕೆಲವು ದೇಶಗಳ ಪದ್ಧತಿ ತುಂಬಾ ವಿಚಿತ್ರವಾಗಿರುತ್ತದೆ. ಅದಕ್ಕೆ ತಾಜಾ ಉದಾಹರಣೆ ಇಂಡೋನೇಷ್ಯಾದ ( Temporary Wives ) ಈ ವಿಚಿತ್ರ ಪದ್ಧತಿ.

ಮದುವೆಯ ಹೆಸರಿನಲ್ಲಿ ಯುವತಿಯರನ್ನು ಸೆಕ್ಸ್ ಟೂರಿಸಂಗೆ ಬಳಸಿಕೊಳ್ಳುವ ಪರಿಪಾಠ ಇಂಡೋನೇಷ್ಯಾದ ಹಳ್ಳಿಗಳಲ್ಲಿ ವ್ಯಾಪಕವಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಸಂತೋಷದ ಮದುವೆ ( Temporary Wives )

ವರದಿಗಳ ಪ್ರಕಾರ ಬಡ ಯುವತಿಯರನ್ನು ಅಲ್ಪಾವಧಿಗೆ ವಿವಾಹವಾಗುವ ಪ್ರವೃತ್ತಿ ಇಂಡೋನೇಷ್ಯಾದಲ್ಲಿ ಹೆಚ್ಚುತ್ತಿದೆ. ಅವರಿಗೆ ವರದಕ್ಷಿಣೆಯಾಗಿ ಹಣ ಸಹ ನೀಡಲಾಗುತ್ತೆದೆ. ನಿರುದ್ಯೋಗಿ ಮಹಿಳೆಯರನ್ನು ಹಣಕ್ಕಾಗಿ ಈ ತಾತ್ಕಾಲಿಕ ವಿವಾಹಗಳನ್ನು ಮಾಡಿಕೊಳ್ಳಲು ಒತ್ತಾಯಿಸಲಾಗುತ್ತದೆ. ಇಂಡೋನೇಷ್ಯಾದ ಪಶ್ಚಿಮ ಪ್ರದೇಶದ ಪನ್ಕಾಕ್​ನಲ್ಲಿ ಇಂದಿಗೂ ಈ ಅಭ್ಯಾಸವು ಸಕ್ರಿಯವಾಗಿದೆ ಎಂದು ವರದಿಗಳು ಹೇಳಿವೆ. ಇದನ್ನು ಸಂತೋಷದ ಮದುವೆಗಳು ( pleasure marriages ) ಎಂದು ಕರೆಯಲಾಗುತ್ತದೆ.

Temporary Wives 1

ಲೈಂಗಿಕ ಆನಂದ ನೀಡಬೇಕು

ಕೆಲ ಏಜೆನ್ಸಿಗಳು ಇಂತಹ ಮದುವೆ ನಡೆಸುತ್ತಿರುವ ಬಗ್ಗೆಯೂ ಮಾಹಿತಿ ಹೊರಬಿದ್ದಿದೆ. ಇಂತಹ ಏಜೆನ್ಸಿಗಳ ಮೂಲಕ ಪ್ರವಾಸಿಗರು ಸ್ಥಳೀಯ ಮಹಿಳೆಯರನ್ನು ಭೇಟಿ ಮಾಡಬಹುದು. ನಂತರ ಅವರು ಪರಸ್ಪರ ಒಪ್ಪಿಗೆಯಿಂದ ಮದುವೆಯಾಗಬಹುದು. ಮದುವೆಯ ನಂತರ ಯುವತಿಯರು ತಮ್ಮನ್ನು ಮದುವೆಯಾದ ಪ್ರವಾಸಿಯೊಂದಿಗೆ ವಾಸಿಸಬೇಕು. ಈ ಸಮಯದಲ್ಲಿ ಆಕೆ ಲೈಂಗಿಕ ಆನಂದ ಮತ್ತು ಮನೆಕೆಲಸಗಳಿಗೆ ಜವಾಬ್ದಾರಳಾಗಿರುತ್ತಾಳೆ. ಅಂತಿಮವಾಗಿ ಪತಿ ದೇಶವನ್ನು ತೊರೆದಾಗ ಮದುವೆಯನ್ನು ವಿಸರ್ಜಿಸಲಾಗುತ್ತದೆ. ಆರಂಭಿಕ ದಿನಗಳಲ್ಲಿ ಕುಟುಂಬ ಸದಸ್ಯರು ಅಥವಾ ಪರಿಚಯಸ್ಥರಿಂದ ಪ್ರವಾಸಿಗರಿಗೆ ಹುಡುಗಿಯರನ್ನು ಪರಿಚಯಿಸಲಾಯಿತು. ಇಂದು ಆ ಕೆಲಸವನ್ನು ಕೆಲ ಏಜೆನ್ಸಿಗಳು ನಿರ್ವಹಿಸುತ್ತಿವೆ.

15ಕ್ಕೂ ಹೆಚ್ಚು ಬಾರಿ ಮದುವೆ

ಕಹಾಯಾ ಎಂದು ಗುರುತಿಸಲಾದ ಮಹಿಳೆಯೊಬ್ಬರು 17 ವರ್ಷ ವಯಸ್ಸಿನಿಂದಲೂ ಪ್ರವಾಸಿಗರಿಗೆ ಹೆಂಡತಿಯಾಗಿರುವ ಅನುಭವವನ್ನು ಹಂಚಿಕೊಂಡಿದ್ದಾರೆ. ಇವರು 15ಕ್ಕೂ ಹೆಚ್ಚು ಬಾರಿ ಮದುವೆಯಾಗಿದ್ದಾರೆ. ಆಕೆಯ ಎಲ್ಲ "ಗಂಡಂದಿರು" ಮಧ್ಯಪ್ರಾಚ್ಯದಿಂದ ಬಂದ ಪ್ರವಾಸಿಗರು ಎಂದು ಲಾಸ್ ಏಂಜಲೀಸ್ ಟೈಮ್​ಗೆ ಕಹಾಯಾ ತಿಳಿಸಿದ್ದಾರೆ.

850 ಅಮೆರಿಕ ಡಾಲರ್​

ಆಕೆಯ ಮೊದಲ ತಾತ್ಕಾಲಿಕ ಪತಿ ಸೌದಿ ಅರೇಬಿಯಾದಿಂದ ಬಂದ 50ರ ಹರೆಯದ ಪ್ರವಾಸಿ. ಈ ವೇಳೆ ಆತ ಕಹಾಯಾಗೆ 850 ಅಮೆರಿಕ ಡಾಲರ್​ ನೀಡಿದ್ದ. ಆದರೆ, ತಾತ್ಕಾಲಿಕ ಮದುವೆ ನಡೆಸಿದ ಏಜೆನ್ಸಿ ಅವರ ಕಡಿತವನ್ನು ತೆಗೆದುಕೊಂಡ ನಂತರ, ಆಕೆಗೆ ಕೇವಲ ಅರ್ಧದಷ್ಟು ಮೊತ್ತವನ್ನು ಮಾತ್ರ ನೀಡಿತೆಂದು ಕಹಾಯಾ ಹೇಳಿದ್ದಾರೆ. ಅಲ್ಲದೆ, ಮದುವೆಯ ಐದು ದಿನಗಳ ನಂತರ ಆ ವ್ಯಕ್ತಿ ವಿಚ್ಛೇದನ ಪಡೆದು ಮನೆಗೆ ಹಿಂದಿರುಗಿದನು ಎಂದು ಹೇಳಿದ್ದಾರೆ. ಅಂದಹಾಗೆ ಕಹಾಯಾ ಅವರು ಪ್ರತಿ ಮದುವೆಗೆ 300 ರಿಂದ 500 ಯುಎಸ್​ ಡಾಲರ್​ ಅನ್ನು ಗಳಿಸುತ್ತಾರಂತೆ. ಈ ಹಣದಿಂದ ಅವರು ಬಾಡಿಗೆ ಪಾವತಿಸಲು ಮತ್ತು ಅನಾರೋಗ್ಯದ ಅಜ್ಜಿಯರನ್ನು ನೋಡಿಕೊಳ್ಳಲು ಬಳಸುತ್ತಾರಂತೆ.

Temporary Wives 2

ಕಾನೂನಿನಿಂದ ಮಾನ್ಯತೆ ಪಡೆದಿಲ್ಲ

ಇಂತಹ ವ್ಯವಸ್ಥೆಗಳನ್ನು ನಿಕಾಹ್ ಮುತಾಹ್ ಅಥವಾ ಸಂತೋಷದ ಮದುವೆಗಳು ಎಂದು ಕರೆಯಲಾಗುತ್ತದೆ ಮತ್ತು ಶಿಯಾ ಇಸ್ಲಾಂ ಸಂಸ್ಕೃತಿಯ ಭಾಗವೆಂದು ಹೇಳಲಾಗುತ್ತದೆ. ಆದಾಗ್ಯೂ, ಅನೇಕ ಶಿಯಾ ಇಸ್ಲಾಂ ಧರ್ಮ ಸೇರಿದಂತೆ ಹೆಚ್ಚಿನ ವಿದ್ವಾಂಸರು ಈ ಆಚರಣೆಯನ್ನು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲವೆಂದು ಪರಿಗಣಿಸುತ್ತಾರೆ. ಈ ಸಂತೋಷದ ಮದುವೆಗಳನ್ನು ಇಂಡೋನೇಷಿಯನ್ ಕಾನೂನಿನಿಂದ ಮಾನ್ಯತೆ ಪಡೆದಿಲ್ಲ. ಈ ಮದುವೆಯ ಮೂಲ ಉದ್ದೇಶವನ್ನು ವಿರೋಧಿಸಲಾಗುತ್ತದೆ. ಇಂಡೋನೇಷ್ಯಾದ ವಿವಾಹ ಕಾನೂನುಗಳ ಉಲ್ಲಂಘನೆಯು ದಂಡ, ಸೆರೆವಾಸ ಮತ್ತು ಸಾಮಾಜಿಕ ಅಥವಾ ಧಾರ್ಮಿಕ ಪರಿಣಾಮಗಳಿಗೆ ಕಾರಣವಾಗಬಹುದು.

ವರದಿಗಳ ಪ್ರಕಾರ, ತಾತ್ಕಾಲಿಕ ವಿವಾಹಗಳು ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಮತ್ತು ಆರ್ಥಿಕತೆಯನ್ನು ಹೆಚ್ಚಿಸಿದೆ ಮತ್ತು ಪ್ರಮುಖ ಉದ್ಯಮವಾಗಿ ಮಾರ್ಪಟ್ಟಿದೆ. ಅದಕ್ಕಾಗಿಯೇ ಅಲ್ಲಿನ ಸರ್ಕಾರ ಈ ಬಗ್ಗೆ ದಿವ್ಯ ಮೌನ ವಹಿಸಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net