ತುರ್ತಾಗಿ ಆಸ್ಪತ್ರೆಗೆ ಹೋಗಬೇಕಿದ್ದ ಟೆಂಪೋವನ್ನು ಎಗರಿಸಿದ ಕಳ್ಳರು

Oxygen
Published on

ಪುಣೆ: ಆಸ್ಪತ್ರೆಗೆ ತೆರಳಲು ಸಿದ್ಧವಾಗಿದ್ದ ಟೆಂಪೋವನ್ನು ಕಳ್ಳರು ಅಪಹರಿಸಿದ್ದಾರೆ.

ಈ ಟೆಂಪೋದಲ್ಲಿ ಆಸ್ಪತ್ರೆಯೊಂದಕ್ಕೆ ಪೂರೈಕೆ ಮಾಡಬೇಕಾದ ಏಳು ಆಕ್ಸಿಜನ್​ ಸಿಲಿಂಡರ್​​​​ಗಳಿದ್ದವು. ಟೆಂಪೋ ಚಾಲಕ ಪುಣೆಯ ಚಕನ್​ ಏರಿಯಾದಲ್ಲಿರುವ ತನ್ನ ಮನೆಯ ಹೊರಗೆ ನಿಲ್ಲಿಸಿದ್ದ. ಸಿಲಿಂಡರ್​​ಗಳನ್ನು ಅದರಲ್ಲಿಟ್ಟು, ಹೊರಡುವ ಸಿದ್ಧತೆಯಲ್ಲಿದ್ದ. ಆದರೆ ಮನೆಯಿಂದ ಆತ ಹೊರಗೆ ಬರುವಷ್ಟರಲ್ಲಿ ಟೆಂಪೋ ಕಳವಾಗಿದೆ.

ಕಳ್ಳತನದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಟೆಂಪೋವನ್ನು ಟ್ರೇಸ್​ ಮಾಡುವ ಪ್ರಯತ್ನದಲ್ಲಿದ್ದೇವೆ. ಹಾಗೇ ಆರೋಪಿಗಳನ್ನು ಅರೆಸ್ಟ್​ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕರೊನಾದಿಂದ ಷಟ್ಲರ್‌ಗಳಿಗೆ ಸಂಕಷ್ಟ, ಬ್ಯಾಡ್ಮಿಂಟನ್ ಆಡಲು ಅದೇ ಇಲ್ಲ!

ಸದ್ಯ ಕರೊನಾ ಕಾರಣದಿಂದ ಹಲವು ಆಸ್ಪತ್ರೆಗಳಲ್ಲಿ ಆಕ್ಸಿಜನ್​​ಗೆ ವಿಪರೀತ ಬೇಡಿಕೆ ಇದೆ. ಆಕ್ಸಿಜನ್​ ಸಿಲಿಂಡರ್​ ಉತ್ಪನ್ನ ಘಟಕಗಳು ಮತ್ತು ಆಸ್ಪತ್ರೆಗಳ ನಡುವೆ ಸಮನ್ವಯ ಸಾಧಿಸಲು ಆಯಾ ಜಿಲ್ಲಾಡಳಿತಗಳು ಪ್ರಯತ್ನ ಮಾಡುತ್ತಲೇ ಇವೆ. ಹೀಗಿದ್ದರೂ ಆಕ್ಸಿಜನ್​ ಸಿಲಿಂಡರ್​ ಕಳವು ಪ್ರಕರಣಗಳೂ ಹೆಚ್ಚುತ್ತಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net