

ಬೆಂಗಳೂರು: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯು ಮೊದಲ ಕಂತಿನ ತಸ್ತೀಕ್ ಹಣವನ್ನು ಬಿಡುಗಡೆ ಮಾಡಿದೆ.
77.85 ಕೋಟಿ ರೂ. ಬಿಡುಗಡೆ ಮಾಡಿರುವ ಇಲಾಖೆ, ತಸ್ತೀಕ್ ಮೊತ್ತವನ್ನು ಪ್ರಸ್ತುತ ಆರ್ಥಿಕ ವರ್ಷದಲ್ಲಿ ಯಾವುದೇ ನಿಬಂಧನೆಗಳನ್ನು ವಿಧಿಸದೆ ತುರ್ತಾಗಿ ಸಂಬಂಧಪಟ್ಟ ಸಂಸ್ಥೆ, ದೇವಾಲಯಗಳಿಗೆ ವಿಳಂಬಕ್ಕೆ ಅವಕಾಶ ಕೂಡದೆ ವಿತರಿಸಬೇಕೆಂದು ಆಯುಕ್ತರು ತಹಶೀಲ್ದಾರರಿಗೆ ಸೂಚಿಸಿದ್ದಾರೆ.
ಸಂಬಂಧಪಟ್ಟ ತಹಶೀಲ್ದಾರರು ಆಯಾಯ ಸಂಸ್ಥೆ,ದೇವಾಲಯಗಳ ಖಾತೆಯಿಂದ ಅರ್ಚಕರ ಖಾತೆಗೆ ನೇರವಾಗಿ ಜಮೆ ಮಾಡುವಂತೆ ಸೂಚಿಸಿದ್ದು, ಅನುದಾನ ವಿನಿಯೋಗಿಸಿಕೊಂಡ ಬಗ್ಗೆ ವರದಿ ನೀಡುವಂತೆಯೂ ತಿಳಿಸಲಾಗಿದೆ.
ತಸ್ತೀಕ್ ಹಣ ಬಿಡುಗಡೆ ತಡವಾಗುತ್ತಿರುವ ಕುರಿತು ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಇದು ಸಚಿವರ ಗಮನಕ್ಕೂ ಬಂದಿತ್ತು.