

ಪೇಶಾವರ: ವಾಯವ್ಯ ಪಾಕಿಸ್ತಾನದಲ್ಲಿ ದುಷ್ಕರ್ವಿುಗಳ ಗುಂಪೊಂದು ದೇವಾಲಯದ ಮೇಲೆ ದಾಳಿ ನಡೆಸಿ, ಪೂಜಾ ಸ್ಥಳವನ್ನು ಸಂಪೂರ್ಣ ಧ್ವಂಸಗೊಳಿಸಿದೆ. ಕರಕ್ ಜಿಲ್ಲೆಯ ಟೆರ್ರಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ಇರ್ಫಾನ್ ಮಾರ್ವಾತ್ ತಿಳಿಸಿದ್ದಾರೆ.
ದೇವಾಲಯವನ್ನು ಇತ್ತೀಚೆಗೆ ಜೀಣೋದ್ಧಾರ ಮಾಡಲಾಗಿತ್ತು. ದುಷ್ಕರ್ವಿುಗಳ ಗುಂಪು ಹಳೆಯ ರಚನೆ ಜತೆಗೆ ಇತ್ತೀಚೆಗೆ ನಡೆಸಲಾದ ಎಲ್ಲ ಕಾಮಗಾರಿಯನ್ನು ಧ್ವಂಸಗೊಳಿಸಿದೆ. ಘಟನೆ ಸಂಬಂಧ ಯಾವುದೇ ದೂರು ದಾಖಲಾಗಿಲ್ಲ ಹಾಗೂ ಯಾರ ಬಂಧನವೂ ಆಗಿಲ್ಲ. ಪಾಕಿಸ್ತಾನದ ಸಂಸದೀಯ ಮಾನವ ಹಕ್ಕುಗಳ ಸಂಸದೀಯ ಕಾರ್ಯದರ್ಶಿ ಲಾಲ್ ಚಂದ್ ಮಾಲ್ಹಿ, ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಸಮಾಜ ವಿರೋಧಿ ಕೃತ್ಯ ಎಂದಿದ್ದಾರೆ. ಘಟನೆ ಸಂಬಂಧ ದೂರು ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.
ದುಷ್ಕರ್ವಿುಗಳು ಧ್ವಂಸಗೊಳಿಸಿದ ದೇವಸ್ಥಾನದಲ್ಲಿ ಹಿಂದು ಧಾರ್ವಿುಕ ಮುಖಂಡರೊಬ್ಬರ ಸಮಾಧಿ ಇದೆ. ದೇಶಾದ್ಯಂತದ ಭಕ್ತರು ಅಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ ಎಂದು ಪಾಕ್ನ ಹಿಂದು ಸಮುದಾಯದ ಮುಖಂಡ ಹರೂನ್ ಸರಬ್ ದಿಯಾಲ್ ಹೇಳಿದ್ದಾರೆ.