

ನವದೆಹಲಿ: ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಪ್ರಮುಖ ದೇವಾಲಯವನ್ನು ಖಾಲಿಸ್ತಾನ್ ಬೆಂಬಲಿಗರು ಧ್ವಂಸಗೊಳಿಸಿದ್ದು "ಹಿಂದೂ ವಿರೋಧಿ ಮತ್ತು ಭಾರತ ವಿರೋಧಿ ಬರಹ"ವನ್ನು ಬರೆದಿದ್ದಾರೆ ಎನ್ನಲಾಗಿದೆ. ಈ ಘಟನೆ ಶನಿವಾರ ಬೆಳಿಗ್ಗೆ 12.29 ಕ್ಕೆ ಸರ್ರೆಯ ಶ್ರೀ ಲಕ್ಷ್ಮಿ ನಾರಾಯಣ ಮಂದಿರದಲ್ಲಿ ನಡೆಯಿತು.
ದೇವಾಲಯದ ಫೇಸ್ ಬುಕ್ ಪುಟದ ಪ್ರಕಾರ, ಒಬ್ಬ ಗಂಡು ಮತ್ತು ಒಂದು ಹೆಣ್ಣು ಹೊರಗಿನ ಕಾಂಪೌಂಡ್ ಮೇಲೆ ಹಾರಿ ಮತ್ತು ಮುಖ್ಯ ಪ್ರವೇಶ ದ್ವಾರದಲ್ಲಿ ಮತ್ತು ಮಂದಿರದ ಪ್ರವೇಶದ್ವಾರದಲ್ಲಿ ಖಲೀಸ್ತಾನ್ ಪರ ಪೋಸ್ಟರ್ ಗಳನ್ನು ಉದ್ದೇಶಪೂರ್ವಕವಾಗಿ ಅಂಟಿಸಿದರು. ಪೋಸ್ಟರ್‍ಅಲ್ಲಿ ಭಾರತೀಯ ರಾಜದೂತರ ಫೋಟೊಗಳನ್ನು ಹಾಕಲಾಗಿದ್ದು ವಾಂಟೆಡ್ ಎಂದು ಬರೆಯಲಾಗಿದೆ
"ಆಗಸ್ಟ್ 12, 2023 ರಂದು ದೇವಾಲಯದೊಳಗೆ ಏನಾಯಿತು ಎಂಬುದು ನಿಜಕ್ಕೂ ತುಂಬಾ ದುಃಖಕರವಾಗಿದೆ, ತಡರಾತ್ರಿಯಲ್ಲಿ ಬೆಳಿಗ್ಗೆ 12.29 ಕ್ಕೆ, ಒಬ್ಬ ಗಂಡು ಮತ್ತು ಒಬ್ಬ ಹೆಣ್ಣು ವ್ಯಕ್ತಿಯು ಹೊರಗಿನ ಕಾಂಪೌಂಡ್ ಹಾರಿ, ಮುಖ್ಯ ಪ್ರವೇಶ ದ್ವಾರದಲ್ಲಿ ಮತ್ತು ಸರ್ರೆ ಮಂದಿರದ ಮುಖ್ಯ ಪ್ರವೇಶದ್ವಾರದಲ್ಲಿ ಖಾಲಿಸ್ತಾನ್ ಪರ ಪೋಸ್ಟರ್ ಗಳನ್ನು ಉದ್ದೇಶಪೂರ್ವಕವಾಗಿ ಅಂಟಿಸಿದ್ದಾರೆ, ಎಂದು ಪೋಸ್ಟ್‍ನಲ್ಲಿ ಉಲ್ಲೇಖಿಸಲಾಗಿದೆ.
ಹಿಂದೂ ದೇವಾಲಯಗಳ ಮೇಲೆ ದಾಳಿ ಬಗ್ಗೆ ಭಾರತ ಈ ಹಿಂದೆ ತೀವ್ರವಾಗಿ ಖಂಡಿಸಿದ್ದ ನಂತರ ಕೆನಡಾದಲ್ಲಿ ಖಾಲಿಸ್ತಾನ್ ಬೆಂಬಲಿಗರು ಮತ್ತು ಅಪರಾಧಿಗಳ ವಿರುದ್ಧ ಅಲ್ಲಿನ ಅಧಿಕಾರಿಗಳು ಕ್ರಮ ಕೈಗೊಂಡರು.
ಹಿಂದೂಗಳಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಲು ಈ ಕೃತ್ಯವನ್ನು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. "ಈ ದ್ವೇಶ ಹಬ್ಬುವವರು ಹಿಂದೂ ದೇವಾಲಯವಾದ ಶ್ರೀ ಲಕ್ಷ್ಮಿ ನಾರಾಯಣ ಮಂದಿರವನ್ನೂ ಬಿಟ್ಟಿಲ್ಲ. ಮಂದಿರದ ಆಸ್ತಿಯನ್ನು ಅತಿಕ್ರಮಣ ಮಾಡುವ ಮೂಲಕ ಪೋಸ್ಟರ್ಸ್ ಮುಖ್ಯ ಬಾಗಿಲಿಗೆ ಅಂಟಿಸಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ"ಎಂದು ದೇವಾಲಯದ ವೆಬ್ ಸೈಟ್ ತಿಳಿಸಿದೆ. ಈ ಕುರಿತಾಗಿ ದೇವಸ್ಥಾನ ಕಾನೂನು ಕ್ರಮವನ್ನೂ ಕೈಗೊಳ್ಳಲು ಮುಂದಾಗಿದೆ ಎನ್ನಲಾಗಿದೆ. (ಏಜೆನ್ಸೀಸ್)