More

    ಕೆನಡಾದಲ್ಲಿ ಹಿಂದು ದೇವಾಲಯಗಳ ಮೇಲಿನ ದಾಳಿಯನ್ನು ಸಂಸತ್ತಿನಲ್ಲಿ ಖಂಡಿಸಿದ ಕನ್ನಡಿಗ ಚಂದ್ರ ಆರ್ಯ

    ತುಮಕೂರು: ಕೆನಡಾ ಸಂಸತ್ತಿನಲ್ಲಿ ಪ್ರಪ್ರಥಮ ಬಾರಿಗೆ ಕನ್ನಡ ಕಹಳೆ ಮೊಳಗಿಸಿ ಒಂದೇ ದಿನದಲ್ಲಿ ಜಗದ್ವಿಖ್ಯಾತಿ ಪಡೆದ ಅಲ್ಲಿನ ಸಂಸತ್ ಸದಸ್ಯ, ಕನ್ನಡಿಗ ಚಂದ್ರ ಆರ್ಯ ಅವರು ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

    ಈ ಬಾರಿ ಚಂದ್ರ ಆರ್ಯ ಅವರು ಕೆನಡಾದಲ್ಲಿ ಹಿಂದೂ ದೇವಾಲಯಗಳ ಮೇಲಿನ ದಾಳಿಯ ಬಗ್ಗೆ ಸಂಸತ್​ನಲ್ಲಿ ಖಂಡಿಸುವ ಮೂಲಕ ಭಾರತೀಯ ಅಸ್ಮಿತೆಯ ಬಗ್ಗೆ ಬೆಳಕು ಚೆಲ್ಲಿದ್ದಾರೆ.

    ಅಂದಹಾಗೆ ಚಂದ್ರ ಆರ್ಯ ಅವರು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನ ದ್ವಾರಾಳು ಗ್ರಾಮದವರು. ಕೆನಡಾದಲ್ಲಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿರುವ ಚಂದ್ರ ಆರ್ಯ, ಕೆನಾಡದ ಟೊರೆಂಟೋದಲ್ಲಿ ಹಿಂದೂ ದೇವಾಲಯಗಳ‌ ಮೇಲೆ ನಡೆದ ದಾಳಿಯನ್ನು ಖಂಡಿಸಿದ್ದಾರೆ.

    ಟೊರೆಂಟೋದ ಸ್ವಾಮಿ ನಾರಾಯಣ, ವಿಷ್ಣು ಮಂದಿರಗಳ ಮೇಲೆ ಕೆಲ ಕಿಡಿಗೇಡಿಗಳು ದಾಳಿ ಮಾಡಿದ್ದಾರೆ. ಭಾರತ ಸೇರಿದಂತೆ ದಕ್ಷಿಣ ಏಷ್ಯದಿಂದ ಸಾಕಷ್ಟು ಹಿಂದೂಗಳು ಕೆನಡಾಗೆ ಆಗಮಿಸಿದ್ದಾರೆ. ಭಾರತೀಯ ಮೂಲದ ಹಿಂದೂಗಳು ಶಾಂತಿ ಪ್ರಿಯರು ಹಾಗೂ ಶ್ರಮ ಜೀವಿಗಳು. ತಮ್ಮ ಮಕ್ಕಳ ಶಿಕ್ಷಣ ಸೇರಿದಂತೆ ಕುಟುಂಬದ ಉನ್ನತಿಗೆ ಶ್ರಮಿಸುತ್ತಾರೆ. ಆದರೆ, ಕೆನಾಡದಲ್ಲಿ ಹಿಂದೂ ವಿರೋಧಿ ಗುಂಪುಗಳಿಂದ ಹಿಂದೂಗಳ ಭಾವನೆಗಳ‌ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಜನಾಂಗೀಯ ದ್ವೇಷದಿಂದ ಗಲಾಟೆಗಳು, ಹಲ್ಲೆಗಳು ನಡೆಯುತ್ತಿವೆ ಎಂದರು.

    ಮುಂದುವರಿದು ಮಾತನಾಡಿದ ಚಂದ್ರ ಆರ್ಯ ಅವರು ಕೆನಡಾ ಸಂಸತ್ ಇದನ್ನು ಖಂಡಿಸಬೇಕು ಹಾಗೂ ಇದಕ್ಕೆ ಕಠಿಣ ಕ್ರಮಗಳನ್ನು ರೂಪಿಸಬೇಕು. ಹಿಂದೂಗಳ ಹಾಗೂ ಅವರ ಭಾವನೆಗಳ ರಕ್ಷಣೆಗೆ ಕ್ರಮಗಳನ್ನು ಕೈಗೊಳ್ಳಬೇಕೆಂದು ತಮ್ಮ ಸಂಸತ್ ಭಾಷಣದ ಮೂಲಕ ಒತ್ತಾಯ ಮಾಡಿದರು. (ದಿಗ್ವಿಜಯ ನ್ಯೂಸ್​)

    ಅಶ್ಲೀಲ ವಿಡಿಯೋ ಸೋರಿಕೆ: ಖ್ಯಾತ ನಟಿ, ಬಿಗ್​ಬಾಸ್​ ಬ್ಯೂಟಿ ಅಕ್ಷರಾ ಕೊಟ್ಟ ಖಡಕ್​ ಪ್ರತಿಕ್ರಿಯೆ ಹೀಗಿತ್ತು…

    ಪ್ರೀತಿಸಿ ಮದ್ವೆಯಾದ ಪತ್ನಿಯನ್ನೇ ಕೊಂದನಾ ಪತಿ? ಆರೋಪ-ಪ್ರತ್ಯಾರೋಪಗಳ ಮಧ್ಯೆ ಅನಾಥವಾದ ಕಂದಮ್ಮ

    ತಿರುಪತಿ ತಿಮ್ಮಪ್ಪನ ಸನ್ನಿಧಿಗೆ 1.02 ಕೋಟಿ ರೂಪಾಯಿ ದೇಣಿಗೆ ನೀಡಿದ ಮುಸ್ಲಿಂ ಕುಟುಂಬ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts