More

    ಕ್ವಾರ್ಟರ್‌ಫೈನಲ್‌ಗೆ ಕನ್ನಡಿಗ ಬೋಪಣ್ಣ ಜೋಡಿ: ಸೆಮೀಸ್‌ಗೇರಿದರೆ ಅಗ್ರಸ್ಥಾನದ ಅವಕಾಶ, ಅಲ್ಕರಾಜ್ ಮುನ್ನಡೆ

    ಮೆಲ್ಬೋರ್ನ್: ಭಾರತದ ಅಗ್ರ ಡಬಲ್ಸ್ ಆಟಗಾರ, ಕನ್ನಡಿಗ ರೋಹನ್ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿ ವರ್ಷದ ಮೊದಲ ಗ್ರಾಂಡ್ ಸ್ಲಾಂ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೇರಿದೆ. ಇದರೊಂದಿಗೆ 43 ವರ್ಷದ ಬೋಪಣ್ಣ ಎಟಿಪಿ ವಿಶ್ವ ರ‌್ಯಾಂಕಿಂಗ್‌ನಲ್ಲಿ 2ನೇ ಸ್ಥಾನಕ್ಕೇರಿದ್ದು, ಸೆಮಿೈನಲ್‌ಗೇರಿದರೆ ಅಗ್ರಸ್ಥಾನ ಒಲಿಸಿಕೊಳ್ಳುವ ಅವಕಾಶವನ್ನೂ ಹೊಂದಿದ್ದಾರೆ.

    ಸಿಂಗಲ್ಸ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್, 2ನೇ ಶ್ರೇಯಾಂಕಿತ ಕಾರ್ಲೋಸ್ ಅಲ್ಕರಾಜ್, ರಷ್ಯಾದ ಡೇನಿಲ್ ಮೆಡ್ವೆಡೆವ್, ಪೋಲೆಂಡ್‌ನ ಹುಬರ್ಟ್ ಹರ್ಕಾಜ್, ಮಹಿಳಾ ವಿಭಾಗದಲ್ಲಿ ಲಿಂಡಾ ನೊಸ್ಕೋವಾ, ಡಯನಾ ಯಾಸ್ಟ್ರೆಮ್ಸ್ಕಾ ಎಂಟರಘಟ್ಟಕ್ಕೆ ಪ್ರವೇಶಿಸಿದ್ದಾರೆ. 2 ಬಾರಿ ಚಾಂಪಿಯನ್ ವಿಕ್ಟೋರಿಯಾ ಅಜರೆಂಕಾ ನಿರಾಸೆ ಅನುಭವಿಸಿದರೆ, ಯೂಕ್ರೇನ್ ಎಲಿನಾ ಸ್ವಿಟೋಲಿನಾ ಗಾಯದ ಸಮಸ್ಯೆಯಿಂದ ಪಂದ್ಯ ತ್ಯಜಿಸಿದರು.
    ಸೋಮವಾರ ನಡೆದ ಡಬಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ಬೋಪಣ್ಣ-ಎಬ್ಡೆನ್ ಜೋಡಿ 7-6 (10-8), 7-6 (7-4) ನೇರಸೆಟ್‌ಗಳಿಂದ ನೆದರ್ಲೆಂಡ್‌ನ ವೆಸ್ಲಿ ಕೂಲ್‌ಹಾಫ್ ಹಾಗೂ ಕ್ರೊವೇಷಿಯಾದ ನಿಕೋಲಾ ಮೆಕ್ಟಿಕ್ ಜೋಡಿ ಎದುರು ಗೆಲುವು ದಾಖಲಿಸಿತು.

    ಅಲ್ಕರಾಜ್ ಮುನ್ನಡೆ: ಸ್ಪೇನ್‌ನ ಯುವ ಆಟಗಾರ ಕಾರ್ಲೋಸ್ ಅಲ್ಕರಾಜ್ ಪುರುಷರ ಸಿಂಗಲ್ಸ್‌ನಲ್ಲಿ 6-4, 6-4, 6-0ರಿಂದ ಸೆರ್ಬಿಯಾದ ಮಿಯೋಮಿರ್ ಕೆಕ್ಮನೋವಿಕ್ ಎದುರು ಸುಲಭ ಗೆಲುವು ದಾಖಲಿಸಿದರು. ಇದರೊಂದಿಗೆ ಮುಕ್ತ ಟೆನಿಸ್ ಯುಗದ ಎಲ್ಲ ಗ್ರಾಂಡ್ ಸ್ಲಾಂ ಟೂರ್ನಿಯ ಕ್ವಾರ್ಟರ್‌ೈನಲ್ ಪ್ರವೇಶಿಸಿದ 4ನೇ ಕಿರಿಯ ಆಟಗಾರ ಎನಿಸಿದರು. ಬೋರಿಸ್ ಬೆಕರ್, ರಾೆಲ್ ನಡಾಲ್, ಜೋಕೊವಿಕ್ ಹಿಂದಿನ ಸಾಧಕರು. ರಷ್ಯಾದ ಡೇನಿಲ್ ಮೆಡ್ವೆಡೆವ್ 6-3, 7-6(4), 5-7, 6-1 ಸೆಟ್‌ಗಳಿಂದ ಪೋರ್ಚುಗಲ್‌ನ ನುನೊ ಬೋರ್ಗೆಸ್ ಅವರನ್ನು ಮಣಿಸಿ ಅಂತಿಮ ಎಂಟರಘಟ್ಟ ಪ್ರವೇಶಿಸಿದರು. ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ 4 ಗಂಟೆ 5 ನಿಮಿಷಗಳ ಹೋರಾಟದಲ್ಲಿ ಅಮೆರಿದ ಕ್ಯಾಮರೋನ್ ನೋರಿ ಎದುರು 7-5,3-6,6-3,4-6,7-6 ರಿಂದ ಜಯಿಸಿದರು.

    ಹೊರಬಿದ್ದ ಅಜರೆಂಕಾ, ಸ್ವಿಟೋಲಿನಾ: ಮಾಜಿ ಚಾಂಪಿಯನ್ ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾಗೆ 6-7,4-6 ನೇರಸೆಟ್‌ಗಳಿಂದ ಯೂಕ್ರೇನ್‌ನ ಡಯನಾ ಯಾಸ್ಟ್ರೆಮ್ಸ್ಕಾ ಆಘಾತ ನೀಡಿದರು. 23 ವರ್ಷದ ಡಯಾನಾ ಎಂಟರ ಘಟ್ಟದಲ್ಲಿ ಶ್ರೇಯಾಂಕ ರಹಿತೆ ಲಿಂಡಾ ನೊಸ್ಕೋವಾ ವಿರುದ್ಧ ಸೆಣಸಲಿದ್ದಾರೆ. ವಿಶ್ವ ನಂ.1 ಇಗಾ ಸ್ವಿಯಾಟೆಕ್‌ಗೆ ಶಾಕ್ ನೀಡಿದ್ದ ಲಿಂಡಾ ವಿರುದ್ಧದ ಪಂದ್ಯದಲ್ಲಿ 18ನೇ ಶ್ರೇಯಾಂಕಿತೆ ಎಲಿನಾ ಸ್ವಿಟೋಲಿನಾ 3-0 ಮುನ್ನಡೆ ಸಾಧಿಸಿದರೂ ಬೆನ್ನುನೋವಿನಿಂದ ಪಂದ್ಯ ತ್ಯಜಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts