ರಾಜ್ಯಪಾಲರಿಂದ ಟೆಂಪಲ್ ರನ್

rajabhavan
Published on

ಬೆಂಗಳೂರು: ಮುಡಾ ಪ್ರಕರಣದ ಕಾರಣಕ್ಕೆ ರಾಜಭವನ ಕೇಂದ್ರಿತ ಚಟುವಟಿಕೆ ಬಿರುಸುಗೊಂಡು ಇದೀಗ ಕೊಂಚ ತಣ್ಣಗಾಗುತ್ತಿದ್ದಂತೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಟೆಂಪಲ್ ರನ್ ನಡೆಸಿದ್ದಾರೆ.
ಗೆಹಲೋತ್ ಅವರು ಕುಟುಂಬ ಸಮೇತರಾಗಿ ಮಂಗಳವಾರ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಪಾರ್ಶ್ವ ಪದ್ಮಾವತಿ ಜೈನ ದೇವಾಲಯ ಹಾಗೂ ವೆಲ್ಲೂರಿನಲ್ಲಿರುವ ಶ್ರೀರಾಮಪುರ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.
ವೆಲ್ಲೂರಿನಲ್ಲಿ ಶ್ರೀನಾರಾಯಣಿ ದೇವಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿ, ಕೆಲವು ನಿಮಿಷಗಳ ಕಾಲ ಪ್ರಾರ್ಥನೆ ಮಾಡುವ ಮೂಲಕ ದೇವಾಲಯದಲ್ಲಿ ಸಮಯ ಕಳೆದರು. ಇದೇ ವೇಳೆ ಶ್ರೀ ನಾರಾಯಣಿ ಪೀಠದ ಸಂಸ್ಥಾಪಕ ಮತ್ತು ಪೀಠಾಧಿಪತಿ ಶ್ರೀ ಶಕ್ತಿ ಅಮ್ಮ ಅವರ ಆಶೀರ್ವಾದ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net