

ಉತ್ತರಪ್ರದೇಶ: ಮಿರ್ಜಾಪುರ ಜಿಲ್ಲೆಯ ವಿದ್ಯಾವಾಸಿನಿ ( Temple News ) ದೇವಸ್ಥಾನಕ್ಕೆ ( Temple ) ಚಪ್ಪಲಿ ಧರಿಸಿ ಪ್ರವೇಶಿದ ಆರೋಪದಡಿ ಜಿಲ್ಲಾ ಕೃಷಿ ಅಭಿವೃದ್ಧಿ ಸಹಾಯಕ ಅಧಿಕಾರಿಯನ್ನು (ಎಡಿಒ) ಕೆಲಸದಿಂದ ಅಮಾನತು ( suspended) ಮಾಡಲಾಗಿದೆ.
ಉಪವಿಭಾಗಧಿಕಾರಿಯಾಗಿ ಕೆಲಸ ಮಾಡುತ್ತಿರುವ ಪ್ರತೀಕ್ ಕುಮಾರ್ ಸಿಂಗ್ ಪಾದರಕ್ಷೆ ಧರಿಸಿಕೊಂಡು ದೇವಸ್ಥಾನ ಪ್ರವೇಶ ಮಾಡಿದ್ದಾನೆ. ಇದನ್ನು ಗಮನಿಸಿದ ಶಾಸಕ ರತ್ನಾಕರ್ ಮಿಶ್ರಾ, ಈ ಬಗ್ಗೆ ಸಂಬಂಧಪಟ್ಟ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ದೇವಸ್ಥಾನದ ಆವರಣದಲ್ಲಿ ಪಾದರಕ್ಷೆ ಧರಿಸಿದ್ದ ಎಡಿಒ ಅವರನ್ನು ನೋಡಿದ ಸದರ್ ಶಾಸಕ ರತ್ನಾಕರ್ ಮಿಶ್ರಾ ಅವರು ಅಧಿಕಾರಿಯನ್ನ ತಡೆದರು. ಅಧಿಕಾರಿ ಕೊರಳಲ್ಲಿ ಧರಿಸಿದ್ದ ಗುರುತಿನ ಚೀಟಿಯನ್ನು ಓದಿ ಛೀಮಾರಿ ಹಾಕಿ ತಕ್ಷಣ ಅವರನ್ನು ದೇವಸ್ಥಾನದ ಆವರಣದಿಂದ ಹೊರಕ್ಕೆ ಹೋಗುವಂತೆ ಹೇಳಿದ್ದಾರೆ. ಈ ವಿಚಾರ ತಿಳಿದ ಜಿಲ್ಲಾಧಿಕಾರಿಗಳು ತಕ್ಷಣ ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಸೂಚಿಸಿದರು.
ಪತ್ರಿಕಾ ಪ್ರಕಟಣೆಯ ಪ್ರಕಾರ, ನವರಾತ್ರಿ ಜಾತ್ರೆಯ ಸಂದರ್ಭದಲ್ಲಿ, ಸೆಕ್ಟರ್ ಮ್ಯಾಜಿಸ್ಟ್ರೇಟ್ ಮಾಡಿದ ಸಹಾಯಕ ಅಭಿವೃದ್ಧಿ ಅಧಿಕಾರಿ ಪ್ರತೀಕ್ ಕುಮಾರ್ ಸಿಂಗ್ ಅವರು ದೇವಸ್ಥಾನದಲ್ಲಿ ತಮ್ಮ ಮೂಲ ಕರ್ತವ್ಯ ಸ್ಥಳವನ್ನು ಬಿಟ್ಟು ತಮ್ಮ ಪರಿಚಯಸ್ಥರನ್ನು ಭೇಟಿ ಮಾಡಲು ಹೋಗಿದ್ದರು. ಸೆಕ್ಟರ್ ಮ್ಯಾಜಿಸ್ಟ್ರೇಟ್ ದೇವಸ್ಥಾನದ ಆವರಣದಲ್ಲಿ ಪಾದರಕ್ಷೆ ಧರಿಸಿದ್ದರು. ಈ ಘಟನೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಧಿಕಾರಿ ಪ್ರಿಯಾಂಕಾ ನಿರಂಜನ್ ಅವರ ಸೂಚನೆ ಮೇರೆಗೆ ಪ್ರತೀಕ್ ಕುಮಾರ್ ಸಿಂಗ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.