ಚಿತ್ರ ವಿ-ಚಿತ್ರ: ಮುಟ್ಟದೆಯೂ ಮೊಳಗುವ ಘಂಟೆ

Sudina-1
Published on

ನವದೆಹಲಿ: ದೇಶದ ಬಹುಪಾಲು ಧಾರ್ವಿುಕ ಕೇಂದ್ರಗಳೆಲ್ಲ ಕೋವಿಡ್-19 ಸೋಂಕಿನ ಕಾರಣದಿಂದಾಗಿ ಮುಚ್ಚಲ್ಪಟ್ಟಿದ್ದವು. ಇತ್ತೀಚೆಗಷ್ಟೇ ಧಾರ್ವಿುಕ ಕೇಂದ್ರಗಳಿಗೆ ಭಕ್ತರು ಆಗಮಿಸಲು ಅವಕಾಶ ಮಾಡಿಕೊಡಲಾಗಿದೆ. ಆದರೆ ಪಾಲ್ಗೊಳ್ಳುವ ಭಕ್ತರಿಗೆ ವಿಶೇಷ ನಿಯಮಗಳನ್ನು ವಿಧಿಸಲಾಗಿದೆ.

ಮಧ್ಯಪ್ರದೇಶದ ಮಂಡ್ಸೂರಿನಲ್ಲಿರುವ ಪಶುಪತಿನಾಥ ದೇವಾಲಯದಲ್ಲಿರುವ ಘಂಟೆಯ ಬಳಿ ಕೈಯಾಡಿಸಿದರೆ ಅದಾಗಿಯೇ ಮೊಳಗುತ್ತದೆ. ಹೀಗೆ ಘಂಟೆಯನ್ನು ಮುಟ್ಟದೆಯೂ ನಾದ ಹೊಮ್ಮಲು ಕಾರಣ ಅದಕ್ಕೆ ಅಳವಡಿಸಲಾದ ಸೆನ್ಸರ್. ಅದನ್ನು ಅಳವಡಿಸುವ ಮೂಲಕ ಘಂಟೆ ಮೊಳಗಿಸುವ ಪರಿಕಲ್ಪನೆ ನಹ್ರು ಖಾನ್ ಎನ್ನುವವರದು. ಇದಕ್ಕೆ ಭಕ್ತರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net