20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಉಷ್ಣಾಂಶ ಹೆಚ್ಚಳ : ಮುಂಜಾನೆ ಚಳಿ ಅನುಭವ- Temperature rise

ಕೆಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಮಾತ್ರವಲ್ಲದೆ ಕನಿಷ್ಠ ತಾಪಮಾನದಲ್ಲೂ ಏರಿಕೆ ಕಂಡುಬಂದರೆ, ಇನ್ನೂ ಕೆಲ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಇಳಿಮುಖವಾಗಿದೆ. ಮುಂದಿನ 7 ದಿನ ರಾಜ್ಯಾದ್ಯಂತ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಹವಾಮಾನ ಇಲಾಖೆ ಮಾಹಿತಿ
20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಉಷ್ಣಾಂಶ ಹೆಚ್ಚಳ
Published on: 

ಬೆಂಗಳೂರು: ಹಿಂಗಾರು ದುರ್ಬಲಗೊಂಡ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೆ ಬಿಸಿಲು ಜಾಸ್ತಿಯಾಗಿದೆ. 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ವಾಡಿಕೆಗಿಂತ ಅಧಿಕವಾಗಿ ಉಷ್ಣಾಂಶ ದಾಖಲಾಗುತ್ತಿದ್ದು, ಬೆಳಗ್ಗೆಯಿಂದಲೇ ಜನರಿಗೆ ಸುಡು ಬಿಸಿಲು ಕಾಡುತ್ತಿದೆ. ಪ್ರಸ್ತಕ ಸಾಲಿನ ಮಳೆಗಾಲದಲ್ಲೂ ತಾಪಮಾನ ಹೆಚ್ಚಳವಾಗಿ ಬಿಸಿಲು ವಾತಾವರಣ ನಿರ್ಮಾಣವಾಗಿತ್ತು.

ರಾಜ್ಯದ ಇತರ ಜಿಲ್ಲೆಗಳಗಿಂತ ಕಲಬುರಗಿಯಲ್ಲಿ ಅತಿ ಹೆಚ್ಚು ಅಂದರೆ 35 ಡಿ.ಸೆ. ಉಷ್ಣಾಂಶ ಬುಧವಾರ ದಾಖಲಾಗಿದೆ. ಇದು ವಾಡಿಕೆಗಿಂತ 3 ಡಿ.ಸೆ.ಅಧಿಕವಾಗಿದೆ. ಕೊಪ್ಪಳ 5, ಹೊನ್ನಾವರ 3.2, ವಿಜಯಪುರ 3.1, ಮೈಸೂರು 3.1, ಗದಗ 3, ಬಾಗಲಕೋಟೆ 3, ಧಾರವಾಡ 2.6, ಮಂಡ್ಯ 2.5, ರಾಯಚೂರು 2.4, ಹಾವೇರಿ 2.1, ಬೀದರ್ 2.1, ಬೆಂಗಳೂರು ನಗರದಲ್ಲಿ ವಾಡಿಕೆಗಿಂತ 2 ಡಿ.ಸೆ.ಉಷ್ಣಾಂಶ ಅಧಿಕವಾಗಿದೆ.

ಕೆಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ ಮಾತ್ರವಲ್ಲದೆ ಕನಿಷ್ಠ ತಾಪಮಾನದಲ್ಲೂ ಏರಿಕೆ ಕಂಡುಬಂದರೆ, ಇನ್ನೂ ಕೆಲ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಇಳಿಮುಖವಾಗಿದೆ. ಮುಂದಿನ 7 ದಿನ ರಾಜ್ಯಾದ್ಯಂತ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

Also Read
ಆಸ್ಟ್ರೇಲಿಯಾದ ಕಾಡಲ್ಲಿ ಸಿಕ್ಕಿದ 'ಚಿನ್ನದ ಆಲೂಗಡ್ಡೆ'! ಇದರ ಬೆಲೆ ಕೇಳಿದ್ರೆ ತಲೆ ತಿರುಗೋದು ಗ್ಯಾರಂಟಿ! Gold Nugget
ಹವಾಮಾನ ಇಲಾಖೆ ಮಾಹಿತಿ

ರಾಜ್ಯದಲ್ಲಿ ಪ್ರಸ್ತುತ ಚಳಿಗಾಲ ಶುರುವಾಗಿದೆ. ಚಳಿ ಮತ್ತು ಬಿಸಿಲಿನ ಮಿಶ್ರಣ ವಾತಾವರಣ ಕಂಡುಬರುತ್ತಿದೆ. ಬಯಲು ಸೀಮೆ ಮತ್ತು ಉತ್ತರ ಕರ್ನಾಟಕದ ಭಾಗಗಳಲ್ಲಿ ಕನಿಷ್ಠ ತಾಪಮಾನ ಕುಸಿತವಾಗಿ ಮಾಗಿಯ ಚಳಿ ಅನುಭವವಾಗುತ್ತಿದೆ. ಮುಂಜಾನೆ ಚಳಿ ಇದ್ದರೂ, ಮಧ್ಯಾಹ್ನ ಸಾಮಾನ್ಯ ತಾಪಮಾನ ಇರಲಿದೆ. ಹಲವು ಜಿಲ್ಲೆಗಳಲ್ಲಿ ಮುಂಜಾನೆ ಮಂಜಿನ ವಾತಾವರಣ ಕಾಣಿಸಿಕೊಳ್ಳುತ್ತಿದೆ. ‘ಎಲ್ ನಿನೋ’ ಪರಿಣಾಮದಿಂದ ಮುಂಗಾರು ಮಳೆ ಅಭಾವ ಉಂಟಾಗಿತ್ತು. ಇದೀಗ, ಹಿಂಗಾರು ಮಳೆ ಕಡಿಮೆಯಾಗಲಿದೆ. ಒಟ್ಟಾರೆ, ಚಳಿಗಾಲದ ತೀವ್ರತೆ ಎಂದಿಗಿಂತ ಕೊಂಚ ಕಡಿಮೆ ಇರಲಿದೆ ಎನ್ನುತ್ತಾರೆ ಹಿರಿಯ ಹವಾಮಾನ ತಜ್ಞ ಡಾ.ಶ್ರೀನಿವಾಸರೆಡ್ಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net