ಈ ನಟಿಯ ಸಾವು ಆಕಸ್ಮಿಕವಲ್ಲ, ಇದೊಂದು ಕೊಲೆ; ಸ್ಟಾರ್​ ನಟನ ವಿರುದ್ಧ ದಾಖಲಾಯ್ತು ದೂರು| Soundarya

Actress Soundarya
Published on

ಹೈದರಾಬಾದ್: ತಮ್ಮ ನಟನೆ ಹಾಗೂ ವಿಭಿನ್ನ ಮ್ಯಾನರಿಸಂ ಮೂಲಕ 90ರ ದಶಕದಲ್ಲೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದ ನಟಿ ಸೌಂದರ್ಯ ಅವರು ಇಂದಿಗೂ ಜನಮಾನಸದಲ್ಲಿ ಜೀವಂತವಾಗಿದ್ದಾರೆ. 2004 ಏಪ್ರಿಲ್ 17ರಂದು ಸಂಭವಿಸಿದ ವಿಮಾನ ಪತನದಲ್ಲಿ ನಟಿ ಸೌಂದರ್ಯ (Soundarya) ಮೃತಪಟ್ಟಿದ್ದರು. ಇದೀಗ ಘಟನೆ ನಡೆದು 21 ವರ್ಷಗಳ ಬಳಿಕ ತೆಲುಗು ನಟ (Actor) ಮೋಹನ್ ಬಾಬು ವಿರುದ್ಧ ಪ್ರಕರಣ ದಾಖಲಾಗಿದೆ.

ಕೌಟುಂಬಿಕ ಕಲಹದ ವಿಚಾರವಾಗಿ ಈಗಾಗಲೇ ನಟ (Actor) ಮೋಹನ್ ಬಾಬು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದು, ಇದೀಗ ಅವರ ವಿರುದ್ಧ ಕೊಲೆ ಸಂಚು ಆರೋಪ ಕೇಳಿ ಬಂದಿದೆ. ತೆಲಂಗಾಣದ ಖಮ್ಮಂ ಜಿಲ್ಲೆಯ ಸತ್ಯನಾರಾಯಣಪುರಂ ನಿವಾಸಿಯಾದ ಚಿಟ್ಟಿಮಲ್ಲು ಎಂಬುವವರು ಸೌಂದರ್ಯ (Soundarya) ಅವರ ಸಾವಿನ ಹಿಂದೆ ಮೋಹನ್ ಬಾಬು ಕೈವಾಡ ಇದೆ ಎಂದು ಆರೋಪಿಸಿ ದೂರು ದಾಖಲಿಸಿದ್ದು, ಸದ್ಯ ಈ ವಿಚಾರ ಹೊಸ ಸಂಚಲನ ಮೂಡಿಸಿದೆ.

ದೂರಿನಲ್ಲಿ ಏನಿದೆ? 

ಸೌಂದರ್ಯಾ ಅವರದ್ದು ಆಕಸ್ಮಿಕ ಸಾವಲ್ಲ, ಇದೊಂದು ನಿಯೋಜಿತ ಕೊಲೆ. ಶಂಷಾಬಾದ್‌ನ ಜಲ್ಲೆಪಲ್ಲಿಯಲ್ಲಿರುವ ಆರು ಎಕರೆ ಜಾಗದ ವಿಚಾರವಾಗಿ ಈ ಕೊಲೆ ನಡೆದಿದೆ. ಸೌಂದರ್ಯಾ ಹಾಗೂ ಅವರ ಸಹೋದರ ಅಮರನಾಥ್ ಶಂಶಾಬಾದ್​ನಲ್ಲಿ ಆರು ಎಕರೆ ಜಾಗವನ್ನು ಹೊಂದಿದ್ದರು. ಇದನ್ನು ತಮಗೆ ಕೊಡುವಂತೆ ನಟ (Actor) ಮೋಹನ್ ಬಾಬು ಕೇಳುತ್ತಿದ್ದರು. ಇದನ್ನು ಮಾರಲು ಸೌಂದರ್ಯಾ ಮತ್ತು ಅವರ ಸಹೋದರ ನಿರಾಕರಿಸಿದ್ದರು. ಜಾಗ ಮಾರಲು ನಿರಾಕರಿಸಿದ್ದಕ್ಕಾಗಿ ಸಂಚು ರೂಪಿಸಿ ಕೊಲೆ ಮಾಡಲಾಗಿದೆ.

Soundarya Complaint

ಸೌಂದರ್ಯ ಅವರ ನಿಧನದ ಬಳಿಕ ಮೋಹನ್ ಬಾಬು ಅವರು ಈ ಜಾಗವನ್ನು ತಮಗೆ ಮಾರಾಟ ಮಾಡುವಂತೆ ಕುಟುಂಬಸ್ಥರ ಬಳಿ ಕೇಳಿಕೊಂಡಿದ್ದರು. ಆದರೆ, ಕುಟುಂಬದವರು ಇದಕ್ಕೆ ಒಪ್ಪಿರಲಿಲ್ಲ. ಆ ಬಳಿಕ ಅವರು ಅಕ್ರಮವಾಗಿ ಜಾಗವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದಲ್ಲದೆ ನಟ (Actor) ಮೋಹನ್ ಬಾಬು ಅವರು ನನಗೆ ಬೆದರಿಕೆ ಹಾಕಿದ್ದು, ರಕ್ಷಣೆ ನೀಡುವಂತೆ ದೂರುದಾರ ಚಿಟ್ಟಿಮಲ್ಲು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

2004ರಲ್ಲಿ ಆಂಧ್ರಪ್ರದೇಶದಲ್ಲಿ ಚುನಾವಣಾ ಪಕ್ಷವೊಂದರ ಪರ ಪ್ರಚಾರ ಮಾಡಲು ನಟಿ ಸೌಂದರ್ಯ ಅವರು ತಮ್ಮ ಸಹೋದರು ಅಮರನಾಥ್ ಅವರೊಂದಿಗೆ ಖಾಸಗಿ ಜೆಟ್​ನಲ್ಲಿ ಪ್ರಯಾಣ ಬೆಳೆಸಿದ್ದರು. ಜೆಟ್ ಟೇಕಾಫ್​ ಆದ ಕೆಲವೇ ಕ್ಷಣಕ್ಕೆ ಪತನಗೊಂಡಿದ್ದು, ನಟಿ ಸೌಂದರ್ಯ ಮತ್ತು ಅವರ ಸಹೋದರ ಅಮರನಾಥ್ ದಾರುಣ ಅಂತ್ಯ ಕಂಡಿದ್ದರು. ಘಟನೆ ನಡೆದಾಗ ನಟಿ ಸೌಂದರ್ಯ ಅವರು ಗರ್ಭಿಣಿಯಾಗಿದ್ದರು ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net