

ಟಾಲಿವುಡ್ ಚಿತ್ರರಂಗದಲ್ಲಿ ಹೆಸರು ಮಾಡಿರುವ ಖ್ಯಾತ ಹಿರಿಯ ನಟ ಜಯಪ್ರಕಾಶ್ ರೆಡ್ಡಿ (74) ಇಂದು (ಸೆ. 8) ಆಂಧ್ರ ಪ್ರದೇಶದ ಗುಂಟೂರಿನಲ್ಲಿರುವ ನಿವಾಸದಲ್ಲಿ ಹೃದಯಾಘಾತದಿಂದ ನಿಧನಹೊಂದಿದರು.
ತೆಲುಗಿನಲ್ಲಿ 100 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ನಟ ಜಯಪ್ರಕಾಶ್ ರೆಡ್ಡಿ ಸಾವಿಗೆ ತೆಲುಗು ಚಿತ್ರೋದ್ಯಮ ಕಂಬನಿ ಮಿಡಿದಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ನೆಚ್ಚಿನ ನಟನಿಗೆ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಸಿಸಿಬಿ ಅಧಿಕಾರಿಗಳಿಂದ ನಟಿ ಸಂಜನಾ ಗಲ್ರಾನಿ ಬಂಧನ…!
1988ರಲ್ಲಿ ಬ್ರಹ್ಮ ಪುತ್ರುಡು ಚಿತ್ರದ ಮೂಲಕ ಟಾಲಿವುಡ್ಗೆ ಬಂದ ಜಯಪ್ರಕಾಶ್ ರೆಡ್ಡಿ, ಸಮರಸಿಂಹ ರೆಡ್ಡಿ, ಪ್ರೇಮಿಂಚಕುಂದಮ್ ರಾ, ನರಸಿಂಹ ನಾಯ್ಡು, ನುವುಸ್ತಾನಂಟೆ ನೆನುದ್ದುಟಾನಾ, ಜುಲಾಯಿ, ರೆಡ್ಡಿ, ಕಿಕ್, ಜಯಂ, ಮನೆದೆರಾ, ಜಂಬಾ ಲಕಿಡಿ ಪಂಬಾ, ಅವುನು ವಲ್ಲಿದ್ದಾರು ಇಷ್ಟಪದ್ದಾರು, ಕಬಡ್ಡಿ ಕಬಡ್ಡಿ ಸಿನಿಮಾ ಸೇರಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಸತ್ಯ ಇನ್ ಲವ್ ಮತ್ತು ಸಿಟಿಜನ್ ಚಿತ್ರದಲ್ಲಿ ನಟಿಸಿದ್ದರು.
ಆಂಧ್ರ ಮುಖ್ಯಮಂತ್ರಿ ವೈ ಎಸ್ ಜಗನ್ಮೋಹನ್ ರೆಡ್ಡಿ ಸಹ ಟ್ವಿಟರ್ನಲ್ಲಿ ಅಗಲಿದ ನಟನಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಮಹೇಶ್ ಬಾಬು, ಜೆನಿಲಿಯಾ, ಪ್ರಕಾಶ್ ರೈ, ಎನ್ಟಿಆರ್ ಸೇರಿ ಇಡೀ ಟಾಲಿವುಡ್ ಹಾಸ್ಯನಟನಿಗೆ ಭಾವಪೂರ್ಣ ವಿದಾಯ ಹೇಳಿದ್ದಾರೆ. (ಏಜೆನ್ಸೀಸ್)