

ನವದೆಹಲಿ: ತೆಲುಗಿನ ಖ್ಯಾತ ನಟಿ ಸುರೇಖಾವಾಣಿ ದೇವರಿಗೆ ತಮ್ಮ ಕೇಶರಾಶಿಯನ್ನೂ ಅರ್ಪಿಸಿ ತಿರುಮಲ ವೆಂಕಟೇಶ್ವರ ಸ್ವಾಮಿಗೆ ನಮನ ಸಲ್ಲಿಸಿದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಸುರೇಖಾ ವಾಣಿ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಹಲವು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರಲ್ಲಿ ಉತ್ತಮ ಮನ್ನಣೆ ಗಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದು, ಬೋಲ್ಡ್ ಫೋಟೋ, ಡ್ಯಾನ್ಸ್ ಗಳಿಂದ ವೈರಲ್ ಆಗುತ್ತಿವೆ. ಸುರೇಖಾ ಜೊತೆಗೆ ಅವರ ಮಗಳು ಸುಪ್ರೀತಾ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಇದರೊಂದಿಗೆ ಇಬ್ಬರಿಗೂ ಒಳ್ಳೆಯ ಫಾಲೋಯಿಂಗ್ ಇದೆ.
ಇಂದು (ಜನವರಿ 8 ರಂದು) ಸುರೇಖಾ ವಾಣಿ ಅವರು ಕುಟುಂಬ ಸಮೇತ ತಿರುಮಲ ವೆಂಕಟೇಶ್ವರನ ದರ್ಶನ ಪಡೆದರು. ದೇವರಿಗೆ ತಮ್ಮ ಕೇಶರಾಶಿಯನ್ನೂ ಅರ್ಪಿಸಿದರು. ನಂತರ ಸಹ ಭಕ್ತರೊಂದಿಗೆ ಕುಟುಂಬ ಸಮೇತ ದರ್ಶನ ಪಡೆದರು. ಅದಾದ ನಂತರ ಅಲ್ಲಿ ಫೋಟೋ ಕೇಳಿದವರಿಗೆ ಫೋಟೋ ಕೊಟ್ಟು ಖುಷಿ ಪಡಿಸಿದರು. ಸದ್ಯ ಇದಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗಿವೆ.
ಇದೇ ವೇಳೆ ಸುರೇಖಾ ವಾಣಿ ಪುತ್ರಿ ಸುಪ್ರೀತಾ ಕೂಡ ಸದ್ಯದಲ್ಲೇ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಅದಕ್ಕಾಗಿಯೇ ಅವರು ತಮ್ಮ ತಾಯಿಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ ಮತ್ತು ಅವರೊಂದಿಗಿನ ಅನೇಕ ಸಂದರ್ಶನಗಳಲ್ಲಿ ಭಾಗವಹಿಸುತ್ತಿದ್ದಾರೆ. ಮತ್ತು ಸುಪ್ರೀತಾ ಎಂಟ್ರಿ ಯಾವಾಗ ಆಗುತ್ತೋ ನೋಡೋಣ.