ಪೊಲೀಸರಿಗೆ ತೆಲಂಗಾಣ ಮಾದರಿ ಟೋಪಿ?

8-686d5bb47740f
Published on

ಬೆಂಗಳೂರು: ಪೊಲೀಸ್ ಕಾನ್​ಸ್ಟೆಬಲ್​ಗಳಿಗೆ ನೀಡಲಾಗಿರುವ ಬ್ರಿಟಿಷರ ಕಾಲದ ವೃತ್ತಾಕಾರದ (ಸ್ಲೋಚ್) ಟೋಪಿಯನ್ನು ಬದಲಾಯಿಸಿ ಎತ್ತರದ (ಪೀಕ್) ಟೋಪಿ ಕೊಡುವ ಅಂತಿಮ ನಿರ್ಧಾರ ಬುಧವಾರ (ಜು.9) ಹೊರಬೀಳುವ ಸಾಧ್ಯತೆ ಇದೆ.

ರಾಜ್ಯದ ಪೊಲೀಸರಿಗೆ ತೆಲಂಗಾಣ ಮಾದರಿ ಟೋಪಿ ಕೊಡಲು ಸಿಎಂ ಸಿದ್ದರಾಮಯ್ಯ ಹಾಗೂ ಗೃಹಸಚಿವ ಡಾ.ಜಿ. ಪರಮೇಶ್ವರ ಈಗಾಗಲೇ ಒಲವು ತೋರಿದ್ದು, ಇದು ಜಾರಿಯಾದರೆ ಪೊಲೀಸರ ಬಹುವರ್ಷಗಳ ಬೇಡಿಕೆ ಕೊನೆಗೂ ಈಡೇರಲಿದೆ. ಪೀಕ್ ಕ್ಯಾಪ್ ಕೊಡುವ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲು ಡಿಜಿ-ಐಜಿಪಿ ಡಾ.ಎಂ.ಎ.ಸಲೀಂ ಸೂಚನೆ ಮೇರೆಗೆ ರಾಜ್ಯ ಸಶಸ್ತ್ರ ಮೀಸಲು ಪಡೆ (ಕೆಎಸ್ಸಾರ್ಪಿ) ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಉಮೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ಸಂಜೆ 4 ಗಂಟೆಗೆ ಕಿಟ್ ನಿರ್ದಿಷ್ಟತಾ ಸಮಿತಿ ಪುನರ್ ಪರಿಶೀಲನಾ ಸಭೆ ಕರೆಯಲಾಗಿದ್ದು, ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net