

ಹೈದರಾಬಾದ್: ಕಾನ್ಸ್ಟೇಬಲ್ನನ್ನು ಚಾಕುವಿನಿಂದ ಇರಿದು ಕೊಂದ ಆರೋಪದ ಮೇಲೆ ವ್ಯಕ್ತಿಯೊರ್ವನನ್ನು ತೆಲಂಗಾಣ ಪೊಲೀಸರು ಎನ್ಕೌಂಟರ್(Encounter)ಮಾಡಿದ ಘಟನೆ ನಿಜಮಾಬಾದ್ನ ಸಾರಂಗಪುರದಲ್ಲಿ ಸೋಮವಾರ ನಡೆದಿದೆ.
ಕಾನ್‌ಸ್ಟೆಬಲ್ ಅಮರ್ ಎಂಪಳ್ಳಿ ಪ್ರಮೋದ್ ಕುಮಾರ್ ಎಂಬುವವರನ್ನು ಕೊಲೆ ಮಾಡಿ ಆರೋಪಿ ಶೇಖ್ ರಿಯಾಜ್ ಪರಾರಿಯಾಗಿದ್ದ. ಬಳಿಕ ರಿಯಾಜ್ ಸಾರಂಗಪುರದ ಬಳಿ ಇರುವುದ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು, ಆರೋಪಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಆತನನ್ನು ಹಿಡಿಯಲು ಯತ್ನಿಸಿದಾಗ ಪೊಲೀಸರ ಬಳಿಯಿದ್ದ ರಿವಲ್ವರ್ ಕಸಿಯಲು ಪ್ರಯತ್ನ ಮಾಡಿದಾಗ ಪೊಲೀಸರು ರಿಯಾಜ್ ಮೇಲೆ ಗುಂಡು ಹಾರಿಸಿದ್ದಾರೆ. ಬಳಿಕ ಆತನನ್ನು ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಿಸದೆ ಮೃತ ಪಟ್ಟಿದ್ದಾನೆ ಎಂದು ಹೈದರಾಬಾದ್ ಡಿಜಿಪಿ ಕಚೇರಿ ತಿಳಿಸಿದೆ.
ಕಳ್ಳತನ ಆರೋಪದ ಮೇಲೆ ರಿಯಾಜ್ನನ್ನು ಕಳೆದ ಶುಕ್ರವಾರ(ಅ.17) ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದಾಗ ಕಾನ್ಸ್ಪೇಬಲ್ ಪ್ರಮೋದ್ ಕುಮಾರ್ (42) ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ. ಕಾನ್ಸ್ಟೇಬಲ್ ಪ್ರಮೋದ್ ಕುಮಾರ್ ಅವರನ್ನು ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.(ಏಜೆನ್ಸೀಸ್)