ತೆಲಂಗಾಣ ಮಾದರಿಯಲ್ಲಿ ರಾಜ್ಯದಲ್ಲೂ ಜಾತಿ ಸಮೀಕ್ಷ ನಡೆಸಲು ಸಿಎಂ ನಿರ್ಧಾರ

siddaramaih
Published on

ಬೆಂಗಳೂರು:

ತೆಲಂಗಾಣ ಮಾದರಿಯಲ್ಲಿ ಜಾತಿಗಣತಿ ನಡೆಸಲು ರಾಜ್ಯ ಸರ್ಕಾರ ಗಂಭೀರವಾಗಿ ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು, ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ತೆಲಂಗಾಣದಲ್ಲಿ 70 ಲಕ್ಷ ಮನೆಗಳ ಸರ್ವೆಯನ್ನು 50 ದಿನಗಳಲ್ಲೇ ಮುಗಿಸಲಾಗಿದೆ. ಸರ್ವೆ ನಡೆಸುವ ಪ್ರತಿ ನೌಕರನಿಗೆ 150 ಮನೆಗಳನ್ನು ನೀಡಿದ್ದರಿಂದ ಇದು ಸಾಧ್ಯವಾಗಿತ್ತು. ಮೂರು ತಿಂಗಳ ಕಾಲವಕಾಶವಿದ್ದರು 50 ದಿನಕ್ಕೆ ಸಮೀಕ್ಷೆ ಮುಗಿದಿದ್ದು ದಾಖಲೆಯಾಗಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿನ ಜಾತಿ ಸಮೀಕ್ಷೆ ಬಗ್ಗೆ ಮಾಹಿತಿಯನ್ನು ಸಿಎಂ ತರಿಸಿಕೊಂಡಿದ್ದಾರೆ.

ಇದೇ ಕಾರಣಕ್ಕೆ ಹಿಂದುಳಿದ ವರ್ಗ ಮತ್ತು ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳೊಂದಿಗೆ ಮ್ಯಾರಥಾನ್ ಸಭೆ ನಡೆಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತೆಲಂಗಾಣ ಮಾದರಿಯಲ್ಲಿ ರಾಜ್ಯದಲ್ಲಿ ಹೊಸ ಜಾತಿ ಸಮೀಕ್ಷೆ ಮಾಡಲು ಮುಂದಾಗಿದೆ.

ರಾಜ್ಯದಲ್ಲಿ ಒಂದೂವರೆ ಕೋಟಿ ವಾಸದ ಮನೆಗಳಿವೆ. ಒಂದು ಲಕ್ಷ ಶಾಲಾ ಶಿಕ್ಷಕರನ್ನು ಗಣತಿಗೆ ನಿಯೋಜನೆ ಮಾಡಲು ನಿರ್ಧರಿಸಲಾಗಿದೆ. ಮೂರು ತಿಂಗಳ ಕಾಲ ನಿಗದಿ ಪ್ರತಿ ಗಣತಿದಾರರಿಗೆ 150 ಮನೆಗಳ ಗಣತಿ ನಿಗದಿಗೆ ತೀರ್ಮಾನಿಸಲಾಗಿದೆ. ಕೆಲಸದ ಅವಧಿ ಹೊರತುಪಡಿಸಿ ಜಾತಿಗಣತಿ ಸರ್ವೆ ಸದ್ಯದಲ್ಲೇ ಜಾತಿಸಮೀಕ್ಷೆ ನಡೆಸಲು ಸರ್ಕಾರಿ ಆದೇಶ ಹೊರಡಿಸುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ವಿಶ್ವಾಸರ್ಹ ಮೂಲಗಳಿಂದ ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net