ಕೋವಿಡ್​ನಿಂದ ಟ್ರಂಪ್ ಗುಣವಾಗಲೆಂದು ಉಪವಾಸ ವ್ರತ ಮಾಡ್ತಿದ್ದ ಅಭಿಮಾನಿ ಸಾವು..!

Bussa Krishna Raju
Published on

ಮೇದಕ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಕರೊನಾ ಸೋಂಕಿನಿಂದ ಗುಣವಾಗಲೆಂದು ಸರಿಯಾಗಿ ನಿದ್ರಿಸದೇ ಉಪವಾಸ ವ್ರತದೊಂದಿಗೆ ಪ್ರಾರ್ಥನೆ ಮಾಡುತ್ತಿದ್ದ ತೆಲಂಗಾಣದ ಟ್ರಂಪ್​ ಅಭಿಮಾನಿ ಹೃದಯಾಘಾತದಿಂದ ಭಾನುವಾರ ಮೃತಪಟ್ಟಿದ್ದಾರೆ.

ಬುಸ್ಸಾ ಕೃಷ್ಣ ರಾಜು ಮೃತ ಟ್ರಂಪ್​ ಅಭಿಮಾನಿ. ಟ್ರಂಪ್​ ಅವರಿಗೆ ಕರೊನಾ ಸೋಂಕು ತಗುಲಿರುವ ಸುದ್ದಿ ಕೇಳಿ ರಾಜು ಆಘಾತಕ್ಕೆ ಒಳಗಾಗಿದ್ದರು ಎಂದು ಅವರ ಸ್ನೇಹಿತರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ರಾಜು ಅವರು ಟ್ರಂಪ್​ ಅವರ ಅಪ್ಪಟ್ಟ ಅಭಿಮಾನಿಯಾಗಿದ್ದರು. ದಿನನಿತ್ಯ ಪ್ರಾರ್ಥನೆ ಸಲ್ಲಿಸುವುದಕ್ಕಾಗಿಯೇ ಕಳೆದ ವರ್ಷ ತಮ್ಮ ಮನೆಯ ಮುಂದೆ ಟ್ರಂಪ್​ ಅವರ 6 ಅಡಿ ಎತ್ತರದ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದರು. ಪ್ರತಿನಿತ್ಯ ಪೂಜೆ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

ಕರೊನಾ ತಗುಲಿದೆ ಎಂಬ ಸುದ್ದಿ ಕೇಳಿದಾಗಿನಿಂದ ದುಃಖದಲ್ಲಿದ್ದರು. ಸರಿಯಾಗಿ ನಿದ್ರೆ ಮಾಡುತ್ತಿರಲಿಲ್ಲ ಮತ್ತು ಉಪವಾಸವಿದ್ದು, ಟ್ರಂಪ್​ ಗುಣಮುಖರಾಗಲೆಂದು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಆದರೆ, ಭಾನುವಾರ ಮಧ್ಯಾಹ್ನ ಹೃದಯಾಘಾತದಿಂದ ಮೃತಪಟ್ಟರು ಎಂದು ಆಪ್ತರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net