More

    ಭಾರತದಲ್ಲಿ ಐದೇ ವರ್ಷದಲ್ಲಿ ಡಿಜಿಟಲ್​ ಪಾವತಿ ಆರು ಪಟ್ಟು ಹೆಚ್ಚಳ: ಲಾಕ್​ಡೌನ್​ನಲ್ಲೂ ಭಾರಿ ಏರಿಕೆ!

    ನವದೆಹಲಿ: ಭಾರತದಲ್ಲಿ ಡಿಜಿಟಲ್​ ಪಾವತಿ ಹೆಚ್ಚಿಸಬೇಕೆಂಬ ಕೇಂದ್ರ ಸರ್ಕಾರ ಮತ್ತು ಆರ್​ಬಿಐ ಪ್ರಯತ್ನ ಸಫಲತೆಯೆಡೆಗೆ ಸಾಗುತ್ತಿದೆ. ಆರ್​ಬಿಐ ನೀಡಿರುವ ಇತ್ತೀಚಿನ ಡೇಟಾ ಪ್ರಕಾರ ಡಿಜಿಟಲ್​ ಪಾವತಿ ಐದು ವರ್ಷಗಳಲ್ಲಿ 6 ಪಟ್ಟು ಹೆಚ್ಚಾಗಿದೆ.

    ಕಳೆದ ಕೆಲವು ವರ್ಷಗಳಲ್ಲಿ ಆನ್‌ಲೈನ್ ವಹಿವಾಟಿನ ಮೇಲೆ ವಿಧಿಸಲಾಗುತ್ತಿದ್ದ ಶುಲ್ಕಗಳು ಸಹ ಗಣನೀಯವಾಗಿ ಕಡಿಮೆಯಾಗಿವೆ. ಸ್ಮಾರ್ಟ್​ಫೋನ್​ ಮತ್ತು ಡಿಜಿಟಲ್​ ವಹಿವಾಟಿನ ಮೇಲೆ ಯುವಕರ ಪ್ರಭಾವ ಹೆಚ್ಚಾಗುತ್ತಿರುವುದರಿಂದ ಡಿಜಿಟಲ್​ ಪಾವತಿ ಹೆಚ್ಚಾಗುತ್ತಿದೆ ಎಂದು ಆರ್​ಬಿಐ ತಿಳಿಸಿದೆ.

    ಇದನ್ನೂ ಓದಿ: ಮೈಸೂರಿನಲ್ಲಿ ನಾಪತ್ತೆಯಾಗಿದ್ದ ಯುವ ವಿಜ್ಞಾನಿ ಆಂಧ್ರದ ವಿಜಯವಾಡದಲ್ಲಿ ಪತ್ತೆ..!

    2015-16 ರಿಂದ 2019-20ರ ನಡುವಿನ ಅವಧಿಯಲ್ಲಿ ಡಿಜಿಟಲ್​ ಪಾವತಿ ವೇಗವಾಗೆ ಬೆಳವಣಿಗೆಯಾಗಿದೆ. 2016 ಮಾರ್ಚ್​ ತಿಂಗಳಲ್ಲಿ 593.61 ಕೋಟಿ ಇದ್ದ ಡಿಜಿಟಲ್​ ಪಾವತಿ 2020 ಮಾರ್ಚ್​ಗೆ 3434.56 ಕೋಟಿಗೆ ಏರಿಕೆಯಾಗಿದೆ. ಐದೇ ವರ್ಷದಲ್ಲಿ 5.8 ಬಾರಿ ಹೆಚ್ಚಳವಾಗಿದ್ದು, ಈ ಸಮಯದಲ್ಲಿ ಡಿಜಿಟಲ್​ ವಹಿವಾಟು 920.38 ಲಕ್ಷ ಕೋಟಿ ರೂ. ನಿಂದ 1,623.05 ಲಕ್ಷ ಕೋಟಿ ರೂ.ವರೆಗೆ ಹೆಚ್ಚಳವಾಗಿದೆ.

    ಕರೊನಾ ಲಾಕ್​ಡೌನ್​ ಸಮಯದಲ್ಲೂ ಡಿಜಿಟಲ್​ ವಹಿವಾಟು ವೇಗವಾಗಿ ಬೆಳೆದಿದೆ. ಡಿಜಿಟಲ್​ ವಹಿವಾಟುವಿನ ಮೇಲೆ ಆರ್​ಬಿಐ ಗಣನೀಯವಾಗಿ ಕಡಿಮೆ ಮಾಡಿರುವುದು ಮತ್ತು 24 ಗಂಟೆಗಳ ಎನ್​ಇಎಫ್​ಟಿ ಸೌಲಭ್ಯ ನೀಡಿರುವುದು ಬೆಳವಣಿಗೆಗೆ ಕಾರಣವಾಗಿದೆ. (ಏಜೆನ್ಸೀಸ್​)

    ಇಂದು ಆರ್‌ಸಿಬಿಗೆ ಕೆಕೆಆರ್ ಸವಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts