ವಿವಾಹಕ್ಕೂ ಮುನ್ನ ಇಬ್ಬರ ಜತೆ ಪ್ರೀತಿ ; ಮಕ್ಕಳು ಹುಟ್ಟಿದ ನಂತರ ಮದುವೆಯಾದ ಜೋಡಿ!

Telangana man marries two
Published on

ತೆಲಂಗಾಣ: ಮದುವೆಗೂ ಮುನ್ನ ಇಬ್ಬರ ಜತೆ ಪ್ರೀತಿಯಲ್ಲಿದ್ದ ಯುವಕ ಇಬ್ಬರು ಪ್ರೇಯಸಿಯರ ಜತೆ ಸಂಸಾರ ನಡೆಸಿದ್ದಾನೆ. ನಂತರ ಇವರಿಬ್ಬರಿಗೆ ಮಗು ಜನಿಸಿದ ಬಳಿಕ ಒಂದೇ ಮಂಟಪದಲ್ಲಿ ಇಬ್ಬರನ್ನೂ ವಿವಾಹವಾಗಿದ್ದಾನೆ.

ತೆಲಂಗಾಣದ ಬುಡಕಟ್ಟು ಸಮುದಾಯದ ಭದ್ರಾದ್ರಿ-ಕೊತಗುಡೆಂ ಜಿಲ್ಲೆಯ ಚೆರ್ಲಾ ಮಂಡಲದ ಎರ್ರಬೋರು ಗ್ರಾಮದ ಸತ್ತಿಬಾಬು ಕಳೆದ ಮೂರು ವರ್ಷಗಳಿಂದ ಸುನೀತಾ, ಸ್ವಪ್ನಾ ಜತೆ ಸಂಬಂಧವನ್ನು ಹೊಂದಿದ್ದು, ಇಬ್ಬರೂ ಮಹಿಳೆಯರಿಗೂ ತಲಾ ಒಂದು ಮಗುವನ್ನು ಕರುಣಿಸಿದ್ದಾನೆ. ಸುನೀತಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಸ್ವಪ್ನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಮದುವೆ ವಿಚಾರವಾಗಿ ಇಬ್ಬರು ಮಹಿಳೆಯರ ಕುಟುಂಬಗಳ ನಡುವೆ ಜಗಳ ನಡೆದಿದೆ. ಸತ್ತಿಬಾಬು ಮಾತ್ರ ಇಬ್ಬರನ್ನೂ ಮದುವೆಯಾಗುವುದಾಗಿ ಹೇಳಿದ್ದಾನೆ. ಎರಡೂ ವಧುಗಳ ಹೆಸರನ್ನು ಹೊಂದಿರುವ ಮದುವೆಯ ಆಮಂತ್ರಣಗಳನ್ನು ಸಹ ಮುದ್ರಿಸಿ ವಿವಾಹ ಸಂಭ್ರಮಕ್ಕೆ ಮನೆಮಂದಿ ತಯಾರಿ ನಡೆಸಿದ್ದಾರೆ. ಈ ವಿಷಯ ಇಡೀ ವೈರಲ್​ ಆಗುತ್ತಿದ್ದಂತೆ ಅಧಿಕಾರಿಗಳು ಮದುವೆ ನಿಲ್ಲಿಸುವ ಭೀತಿ ಹುಟ್ಟಿದೆ. ಗುರುವಾರ ಆಗಬೇಕಿದ್ದ ಮದುವೆಯನ್ನು ಹೆದರಿ ಬುಧವಾರ ರಾತ್ರಿಯೇ ಇಬ್ಬರಿಗೂ ತಾಳಿ ಕಟ್ಟಿದ್ದಾನೆ.

ಬುಡಕಟ್ಟು ಸಮುದಾಯದಲ್ಲಿ ಇಂತಹ ಮದುವೆಗಳು ಹೊಸತೇನಲ್ಲಾ, ಹೀಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನೇಕ ಉದಾಹರಣೆಗಳು ಇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net