ಕೆರೆ ಒತ್ತುವರಿ ತೆರವುಗೊಳಿಸಿ, ಇಲ್ಲವಾದ್ರೆ..?:ಸಿಎಂ ರೇವಂತ್ ರೆಡ್ಡಿ ಕೊಟ್ಟ ಎಚ್ಚರಿಕೆ ಏನು ಗೊತ್ತಾ?

revanth
Published on

ಹೈದರಾಬಾದ್​: ಕೆರೆಗಳಲ್ಲಿನ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸುವುದೇ ಹೈದ್ರಾದ ಕೆಲಸ. ಕೆರೆ ಒತ್ತುವರಿ ಮಾಡಿ , ನಿವೇಶನ, ಕಟ್ಟಡ ನಿರ್ಮಿಸಿದ್ದರೆ ಎಷ್ಟೇ ದೊಡ್ಡವರಾದರೂ ಬಿಡುವುದರಲ್ಲಿ ಅರ್ಥವಿಲ್ಲ ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಎಚ್ಚರಿಸಿದರು.

ತೆಲಂಗಾಣ ಪೊಲೀಸ್ ಅಕಾಡೆಮಿಯಲ್ಲಿ ನಡೆದ ಪಾಸಿಂಗ್ ಔಟ್ ಪರೇಡ್ ನಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮಾತನಾಡಿ, ಅಗತ್ಯವಿದ್ದರೆ ಒತ್ತುವರಿದಾರರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಎಚ್ಚರಿಸಿದರು.

ಕೆರೆಗಳಲ್ಲಿರುವ ಬಡವರ ಮನೆಗಳನ್ನು ತೆರವುಗೊಳಿಸಿ ಅವರಿಗೆ ಡಬಲ್ ಬೆಡ್ ರೂಂ ಮನೆಗಳನ್ನು ನಿರ್ಮಿಸಿಕೊಡಲಾಗುವುದು. ಎಂದು ಸ್ಪಷ್ಟಪಡಿಸಿದ್ದಾರೆ.

ಕೆರೆ ಒತ್ತುವರಿ ಮಾಡಿಕೊಂಡು ಕಟ್ಟಡಗಳನ್ನು ಕಟ್ಟಿರುವವರು ಗೌರವಯುತವಾಗಿ ಸರ್ಕಾರಕ್ಕೆ ಭೂಮಿ ಹಸ್ತಾಂತರಿಸಬೇಕು. ಇಲ್ಲವಾದಲ್ಲಿ ನೆಲಸಮ ಮಾಡಲಾಗುವುದು. ಇದಕ್ಕಾಗಿಯೇ ಹೈಡ್ರಾ ವ್ಯವಸ್ಥೆಯನ್ನು ತರಲಾಗಿದೆ ಎಂದು ಸ್ಪಷ್ಟಪಡಿಸಿದರು.

ರಾಜಕಾಲುವೆಗಳ ಅತಿಕ್ರಮಣದಿಂದ ಪ್ರವಾಹದಂತಹ ಪರಿಸ್ಥಿತಿ ಏರ್ಪಡುತ್ತಿದೆ. ಇದರಿಂದ ಬಡವರ ಮನೆಗಳು ಮುಳುಗಡೆಯಾಗುತ್ತಿವೆ. ಸರ್ಕಾರ ಕೆರೆ, ಕಾಲುವೆಗಳ ಒತ್ತುವರಿ ತೆರವಿಗೆ ಶ್ರಮಿಸುತ್ತಿದೆ. ಒತ್ತುವರಿ ತೆರವು ಮಾಡಿ ಮೂಸಿ ನದಿ ತೀರವನ್ನು ಅಭಿವೃದ್ಧಿ ಪಡಿಸುತ್ತೇವೆ ಎಂದು ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net