ಮೇಘಸ್ಫೋಟಕ್ಕೂ ಕೆಲವೇ ಕ್ಷಣದ ಮುನ್ನ ಕೈಗೊಂಡ ನಿರ್ಧಾರದಿಂದ ಅಪಾಯದಿಂದ ಪಾರಾದ ಬಿಜೆಪಿ ಶಾಸಕ!

TelanganaMLA
Published on

ನವದೆಹಲಿ: ಅಮರನಾಥ ಗುಹೆ ಬಳಿ ಸಂಭವಿಸಿರುವ ಮೇಘಸ್ಫೋಟದಿಂದಾಗಿ ಭಾರೀ ಹಾನಿ ಉಂಟಾಗಿದ್ದು, ಈವರೆಗೆ 16ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ನಡುವೆ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಈ ಮಧ್ಯೆ ತೆಲಂಗಾಣದ ಬಿಜೆಪಿ ಶಾಸಕ ಟಿ. ರಾಜಾ ಸಿಂಗ್​​ ಹಾಗೂ ಅವರ ಕುಟುಂಬ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಮೇಘಸ್ಫೋಟವಾದ ಕೆಲವೇ ಕ್ಷಣಗಳ ಮುಂಚೆ ತೆಗೆದುಕೊಂಡ ನಿರ್ಧಾರದಿಂದ ಶಾಸಕ ಸೇರಿ ಇಡೀ ಕುಟುಂಬವೇ ಸುರಕ್ಷಿತವಾಗಿದೆ.

ಅಮರನಾಥ ಗುಹೆ ಬಳಿ ತೆರಳಲು 40 ಕ್ಕೂ ಅಧಿಕ ಕಿಮೀ ವರೆಗೂ ಕಾಲ್ನಡಿಗೆ ಹಾಗೂ ಹೆಲಿಕಾಪ್ಟರ್​​ ಮೂಲಕವೂ ಹೋಗಬಹುದು. ವೈಪರೀತ್ಯ ಹವಾಮಾನದಿಂದಾಗಿ ಹೆಲಿಕಾಪ್ಟರ್​ನಲ್ಲಿ ಹೋಗುವ ನಿರ್ಧಾರವನ್ನು ಕೈ ಬಿಟ್ಟಿದ್ದರಿಂದ ಶಾಸಕ ಹಾಗೂ ಕುಟುಂಬಸ್ಥರು ಮುಂದಾಗಬಹುದಾದ ಅನಾಹುತದಿಂದ ಪಾರಾಗಿದ್ದಾರೆ.

ಹೆಲಿಕಾಪ್ಟರ್​​ ಸೇವೆಯನ್ನು ಕೂಡ ಇದೇ ನಿಲ್ಲಿಸಲಾಯಿತು, ಇದು ನಮಗೆ ವರದಾನವಾಯಿತು. ಇಲ್ಲವಾದಲ್ಲಿ ಇಂದು ನಾವೇನಾಗುತ್ತಿದ್ದೆವೋ ಎಂದು ಶಾಸಕ ರಾಜಾ ಸಿಂಗ್​ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net