More

    ಅಮರನಾಥದಲ್ಲಿ ಕನ್ನಡಿಗರು ಸುರಕ್ಷಿತ: 24 ಗಂಟೆ ಸಹಾಯವಾಣಿ ಆರಂಭ, ಇಲ್ಲಿದೆ ವಿವರ…

    ಬೆಂಗಳೂರು: ಅಮರನಾಥದಲ್ಲಿ ಸಂಭವಿಸಿದ ಮೇಘ ಸ್ಫೋಟದಿಂದ ಕನ್ನಡಿಗರು ಪಾರಾಗಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಅಮರನಾಥ ಯಾತ್ರೆಗೆ ತೆರಳಿದ್ದ 100 ಕನ್ನಡಿಗರು ಸುರಕ್ಷಿತವಾಗಿದ್ದು, ಸ್ಥಳಾಂತರಿಸಿ ಸುರಕ್ಷಿತ ನೆಲೆಗೆ ಕರೆತರುವ ಪ್ರಯತ್ನ ಮುಂದುವರಿದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಮಾಹಿತಿ ನೀಡಿದರು.

    ಆರ್ ಟಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರ, ಎನ್ ಡಿಆರ್ ಎಫ್, ಗಡಿ ಭದ್ರತಾ‌, ಇಂಡೋ-ಟಿಬೆಟಿಯನ್ ಪಡೆಗಳು, ಜಮ್ಮು ಕಾಶ್ಮೀರ ಸರ್ಕಾರ ರಕ್ಷಣೆ ಹಾಗೂ ಪರಿಹಾರ ಕಾರ್ಯದಲ್ಲಿ ತೊಡಗಿವೆ.

    ಕನ್ನಡಿಗರನ್ನು ಸುರಕ್ಷತೆಗೆ, ಸಹಾಯಕ್ಕಾಗಿ ದಿನದ 24 ತಾಸು ಕಾರ್ಯಾಚರಿಸುವ ಸಹಾಯವಾಣಿ ( 080-1070 , 22340676 , Operation Center ( to facilitate Email [email protected] , assistance through J & K [email protected] Government ) ಸ್ಥಾಪಿಸಲಾಗಿದ್ದು, ಈಗಾಗಲೇ 15-20 ಜನರು ಕರೆ ಮಾಡಿ ಸಹಾಯ ಕೋರಿದ್ದಾರೆ.

    ಈಗಿನವರೆಗೂ ಯಾವುದೇ ಅನಾಹುತಗಳಾದ ಮಾಹಿತಿಯಿಲ್ಲ. ಯಾತ್ರೆಗೆ ತೆರಳಿದ ಕನ್ನಡಿಗರೆಲ್ಲರೂ ಸುರಕ್ಷಿತವಾಗಿ ರಾಜ್ಯಕ್ಕೆ ಮರಳುವ ವಿಶ್ವಾಸವಿದ್ದು, ಕೇಂದ್ರ ಸರ್ಕಾರದ ಅಧಿಕಾರಿಗಳ ಜತೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

    ನೈಸರ್ಗಿಕ ವಿಪತ್ತು ನಿರ್ವಹಣಾ ಕೋಶ ನೀಡಿದ ಮಾಹಿತಿ ಪ್ರಕಾರ ಕನ್ನಡಿಗ ಯಾತ್ರಿಗಳ ಪೈ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮೈಸೂರು, ‌ದಕ್ಷಿಣಕನ್ನಡ, ಶಿವಮೊಗ್ಗ ಜಿಲ್ಲೆಗಳ ಮೂಲದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

    ಮೇಘಸ್ಫೋಟ: ಶಿವಮೊಗ್ಗದ ಮಹಿಳೆಯರು ಸೇಫ್​- ಅಮರನಾಥನ ದರ್ಶನ ಸಿಗದೇ ವಾಪಸ್​

    ಅಮರನಾಥ ಮೇಘಸ್ಫೋಟ: ಸಾವಿನ ಸಂಖ್ಯೆ 16ಕ್ಕೇರಿಕೆ, 15 ಸಾವಿರಕ್ಕೂ ಹೆಚ್ಚು ಯಾತ್ರಿಗಳ ರಕ್ಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts