ತೆಲಂಗಾಣ ಚುನಾವಣೆ 2023: ಗ್ಯಾಸ್ ಸಿಲಿಂಡರ್‌ಗೆ ಪೂಜೆ ಸಲ್ಲಿಸಿ ಮತ ಚಲಾವಣೆ ಮಾಡಿದ ಚುನಾವಣಾ ಅಭ್ಯರ್ಥಿ

viral News
Published on

ತೆಲಂಗಾಣ: ರಾಜಕೀಯ ನಾಯಕರು ಮತದಾರರ ಗಮನ ಸೆಳೆಯಲು ಗಿಮಿಕ್​ಗಳನ್ನು ಮಾಡುತ್ತೀರುತ್ತಾರೆ.   ದೇವಸ್ಥಾನಗಳಿಗೆ ಹೋಗಿ ಗೆಲ್ಲುವಂತೆ ಪ್ರಾರ್ಥಿಸುತ್ತಾರೆ. ವಿಶೇಷ ಪೂಜೆ ನೆರವೇರಿಸುತ್ತಾರೆ. ಮತದಾರರಿಗೆ ಆಮಿಷಗಳನ್ನು ಒಡ್ಡುತ್ತಾರೆ. ಇದೀಗ ತೆಲಂಗಾಣದಲ್ಲಿ ತೆಲಂಗಾಣ ವಿಧಾನಸಭೆ ಚುನಾವಣೆಗೆ ಮತದಾನ ನಡೆಯುತ್ತಿದೆ.

ತೆಲಂಗಾಣದಲ್ಲಿ ಬಿಆರ್ ಎಸ್ ಸೋಲಿಸಲೇಬೇಕು ಎಂಬ ಗುರಿಯೊಂದಿಗೆ ಕಣಕ್ಕೆ ಇಳಿದಿರುವ ಟಿಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ ಶುಭ ಸೂಚನೆಯಂತೆ ಮತ ಚಲಾಯಿಸಲು ತೆರಳುವ ಮುನ್ನ ಗೋಪೂಜೆ ನೆರವೇರಿಸಿ ಮತಯಾಚನೆ ಮಾಡಿದರು. ಕೊಡಂಗಲ್ ನಲ್ಲಿ ಪತ್ನಿಯೊಂದಿಗೆ ಗೋಪೂಜೆ ನೆರವೇರಿಸಿ ಮತಯಾಚಿಸಿದರು.

ಮತ್ತೋರ್ವ ಕಾಂಗ್ರೆಸ್ ಮುಖಂಡ, ಹುಸ್ನಾಬಾದ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಹಾಗೂ ಮಾಜಿ ಸಂಸದ ಪೊನ್ನಂ ಪ್ರಭಾಕರ್ ಅವರು ತಮ್ಮ ತಾಯಿಯ ಪಾದಗಳಿಗೆ ನಮಸ್ಕರಿಸಿ ಮತಯಾಚಿಸಿದರು. ಈ ವೇಳೆ ಪೊನ್ನಂ ಅವರು ತಮ್ಮ ನಿವಾಸದಲ್ಲಿ ಅಡುಗೆ ಅನಿಲ ಸಿಲಿಂಡರ್‌ಗೆ ಹಾರ ಹಾಕಿ, 500 ರೂ. ನೋಟು ಹಾಕಿ ಪೂಜೆ ಮಾಡಿದ್ದಾರೆ. ಚುನಾವಣಾ ಭರವಸೆಯ ಭಾಗವಾಗಿ ಮಹಿಳೆಯರಿಗೆ 500 ರೂ.ಗೆ ಗ್ಯಾಸ್ ಸಿಲಿಂಡರ್ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದ್ದಾರೆ. ಸಾಂಕೇತಿಕವಾಗಿ ಕಾಂಗ್ರೆಸ್ ಮುಖಂಡ ಪೊನ್ನಂ ಪ್ರಭಾಕರ್ ಗ್ಯಾಸ್ ಸಿಲಿಂಡರ್​ಗೆ ಹಾರವನ್ನು ಹಾಕಿ ಮತದಾರರ ಗಮನ ಸೆಳೆದಿದ್ದಾರೆ.

ಇದೇ ವೇಳೆ ಪೊನ್ನಂ ಹುಸ್ನಾಬಾದ್‌ನ ಸರ್ಕಾರಿ ಬಾಲಕರ ಜೂನಿಯರ್ ಕಾಲೇಜಿನಲ್ಲಿ ಕುಟುಂಬ ಸದಸ್ಯರೊಂದಿಗೆ ಮತದಾನದ ಹಕ್ಕು ಚಲಾಯಿಸಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮತದಾರರಿಗೆ ಧನ್ಯವಾದ ಅರ್ಪಿಸಿದರು.

ಇಂದು ಸಂಜೆ 5ರವರೆಗೆ ಮತದಾನ ನಡೆಯಲಿದೆ. 119 ಕ್ಷೇತ್ರಗಳಲ್ಲಿ 2,290 ಮಂದಿ ಸ್ಪರ್ಧಿಸಿದ್ದಾರೆ. ತೆಲಂಗಾಣದ 33 ಜಿಲ್ಲೆಗಳ 119 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ಮತದಾನ ನಡೆಯುತ್ತಿದೆ. ಆದರೆ ಎಲ್ಲರೂ ಮತದಾನ ಮಾಡುತ್ತೇವೆ ಸರಿ ಆದರೆ ಬಿಗ್​ಬಾಸ್​​ ಮನೆಯಲ್ಲಿರುವವರು ಹೇಗೆ ಮತಚಲಾಯಿಸುತ್ತಾರೆ ಎಂದು ಪ್ರಶ್ನೆ ಮುನ್ನೆಲೆಗೆ ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net