More

    ರಕ್ತದಾನ, ನೇತ್ರದಾನದಂತೆ ಮಲದಾನ; ಮಾನವನ ತ್ಯಾಜ್ಯವನ್ನು ಮಾರಿ ಕೋಟಿ..ಕೋಟಿ ಸಂಪಾದಿಸಿ…

    ಅಮೆರಿಕಾ:  ಹಸು, ಎಮ್ಮೆ ಸಗಣಿ, ಮೇಕೆ, ಆಡು ಹಿಕ್ಕೆಯನ್ನು ಕೆಜಿಗೆ ಇಷ್ಟು ಎಂಬಂತೆ ಚೀಲಗಳಲ್ಲಿ ತುಂಬಿಸಿ ಕೃಷಿಕರಿಗೆ ಮಾರಲಾಗುತ್ತದೆ. ಪ್ರಾಣಿಗಳ ತ್ಯಾಜ್ಯವನ್ನು ಕೃಷಿಗೆ ಬಳಸಲಾಗುತ್ತದೆ ಎನ್ನುವುದು ಗೊತ್ತಿರುವ ವಿಚಾರವಾಗಿದೆ. ಆದರೆ ಮನುಷ್ಯ ಮಲಕ್ಕೂ ಇದೇ ರೀತಿ ಬೆಲೆ ಬಾಳುತ್ತದೆ ಎಂದರೆ ನಂಬಲು ಸಾಧ್ಯವಿಲ್ಲ ಅಲ್ವಾ? ಆದರೆ ಇದು ಸತ್ಯ…..ವಿದೇಶಿ ಕಂಪನಿಯೊಂದು ಮಾನವನ ಮಲಕ್ಕೆ ಲಕ್ಷಾಂತರರೂಪಾಯಿ ಹಣವನ್ನು ನೀಡಿ ಖರೀದಿ ಮಾಡುತ್ತದೆ.

    ಅಮೆರಿಕಾ, ಕೆನಡಾದಲ್ಲಿ ಕಾರ್ಯಾಚರಿಸುವ ಹ್ಯೂಮನ್ ಮೈಕ್ರೋಬ್ಸ್ ಎಂಬ ಸಂಸ್ಥೆಯೊಂದು ಹೀಗೆ ಮಲವನ್ನು ದಾನ ಮಾಡುವ ದಾನಿಗಳಿಗೆ ಬರೋಬ್ಬರಿ 40 ಸಾವಿರ ರೂಪಾಯಿಗಳನ್ನು ನೀಡಿ ಖರೀದಿ ಮಾಡುತ್ತಿದೆ.  ಈ ಕಂಪನಿ ಪ್ರಪಂಚದಾದ್ಯಂತ ದಾನಿಗಳಿಂದ ಅವರು ನೀಡುವ ಮಲದ ಸ್ಯಾಂಪಲ್‌ನ್ನು  ಪಡೆಯುತ್ತದೆ. ದಿನಕ್ಕೆ 500 ಡಾಲರ್‌ ನೀಡಿದರೆ  360 ದಿನಕ್ಕೆ ನಿಮಗೆ ಒಂದು ಕೋಟಿ 50 ಲಕ್ಷದ 462 ರೂಪಾಯಿಗಳು ಸಿಗಲಿವೆ. ನೀವು ಈ ಮಲದಾನಕ್ಕೆ ಯೋಗ್ಯರೇ ಎಂದು ತಿಳಿಯುವುದಕ್ಕೆ  ಸಂಸ್ಥೆ  ಪ್ರಶ್ನಾವಳಿಗಳನ್ನು ನೀಡುತ್ತದೆ. ಅದನ್ನು ನೀವು ಭರ್ತಿ ಮಾಡಿ ಕಳುಹಿಸಬೇಕು. ಇದಾದ ನಂತರ ಸಂದರ್ಶನವಿರುತ್ತದೆ. ಸಂದರ್ಶನ ಮುಗಿದ ನಂತರ ನಿಮಗೆ ಕೆಲ ತಪಾಸಣೆಗಳಿರುತ್ತವೆ. ಇದೆಲ್ಲದಕ್ಕೂ ಸಂಸ್ಥೆಯೇ ನಿಮಗೆ ಹಣ ಪಾವತಿ ಮಾಡುತ್ತದೆ.

    View this post on Instagram

    A post shared by Taller Taller (@taller.t)

    ಪರೀಕ್ಷೆಯಲ್ಲಿ ದಾನ ಮಾಡಲು ಬಯಸುವ ವ್ಯಕ್ತಿ ಯಶಸ್ವಿಯಾದರೆ ಸಂಸ್ಥೆಯೂ ಅವರಿಗೆ ಮುಂಚಿತವಾಗಿಯೇ ಪಾವತಿ ಮಾಡುತ್ತದೆ. ನಂತರ ದಾನಿಗಳು ತಮ್ಮ ಮಲವನ್ನು ಡ್ರೈ ಐಸ್ ಶಿಪ್ಪಿಂಗ್( ಕರಗದ ಐಸ್‌ ಇರುವ ಬಾಕ್ಸ್‌ ಮೂಲಕ ಸಾಗಣೆ) ಮಾಡಬೇಕಾಗುತ್ತದೆ. ಸಂಸ್ಥೆಯೂ ಅದನ್ನೂ ಬಹಳ ಗೌಪ್ಯವಾಗಿಡುತ್ತದೆಯಂತೆ.  ಆದರೆ ಈ ಮಲದಿಂದ ಕಂಪನಿ ಏನು ಮಾಡುತ್ತದೆ ಎನ್ನುವ ಪ್ರಶ್ನೆ ನಿಮಗೆ ಬರಬಹುದು. ಇದಕ್ಕೂ ಕೂಡಾ ಉತ್ತರ ಇದೆ.

    ಜಗತ್ತಿನ ಎಲ್ಲ ಭಾಗಗಳಲ್ಲೂ ಆಹಾರ ಪದ್ಧತಿಯಲ್ಲಿ  ವಿಪರೀತ ಬದಲಾವಣೆಯಾಗಿದೆ. ಹಿಂದಿನ ಜನರಂತೆ ಶುದ್ಧವಾದ ಆಹಾರ ಸೇವನೆ ಇಂದು ಸಾಧ್ಯವೇ ಇಲ್ಲ. ಪರಿಣಾಮವಾಗಿ, ಇಲ್ಲಸಲ್ಲದ ಕಾಯಿಲೆಗಳು ಬಂದಿವೆ, ಬರುತ್ತಿವೆ. ತಲೆಮಾರುಗಳಿಂದ ತಲೆಮಾರಿಗೆ ಹೊಟ್ಟೆಯಲ್ಲಿರುವ ಸೂಕ್ಷ್ಮಜೀವಾಣುಗಳ ವ್ಯವಸ್ಥೆ ಬದಲಾಗುತ್ತಿದೆ. ಕೆಲವೇ ಕೆಲವು ಜನರಲ್ಲಿ ಮಾತ್ರ ಸ್ಥಳೀಯ ಬ್ಯಾಕ್ಟೀರಿಯಾಗಳು ಕಂಡುಬರುತ್ತವೆ. ಅವರನ್ನು ವೈದ್ಯರು, ಸಂಶೋಧಕರು, ಆಸ್ಪತ್ರೆಗಳ ಅಧ್ಯಯನಗಳಲ್ಲಿ ಭಾಗಿಯಾಗುವಂತೆ ಮಾಡುವುದು ಸಂಸ್ಥೆಯ ಉದ್ದೇಶ. ಉತ್ತಮ ಮೈಕ್ರೋಬ್ಸ್‌ ಹೊಂದಿರುವ ಜನರನ್ನು ಹೆಚ್ಚಿನ ಅಧ್ಯಯನದ ಉದ್ದೇಶಕ್ಕಾಗಿಯೇ “ಗುಣಮಟ್ಟದ ಮಲ ದಾನಿʼಗಳನ್ನು ಹುಡುಕಲಾಗುತ್ತಿದೆ.

    ವಿಶ್ವದ ಕೇವಲ ಶೇಕಡ 0.1 ರಷ್ಟು ಜನ ಮಾತ್ರವೇ ಆರೋಗ್ಯವಂತರಾಗಿದ್ದಾರೆ ಎನ್ನಲಾಗಿದೆ. ಈ ಜನರ ಮಲವನ್ನೇ ಸಂಗ್ರಹಿಸಿ ಸಂಶೋಧನೆ ಮಾಡುವುದು ಸಂಸ್ಥೆಯ ಉದ್ದೇಶ. ಸರಳವಾಗಿ ಹೇಳುವುದಾದರೆ, ಸಂಶೋಧನೆ ಉದ್ದೇಶಗಳಿಗಾಗಿ ಉಪಯುಕ್ತವಾಗಿರುವ ಈ ಸೂಕ್ಷ್ಮಜೀವಿಗಳನ್ನು ಹೊಂದಿರುವ ಕೆಲವು ಜನರನ್ನು ಕಂಪನಿಯು ಹುಡುಕುತ್ತಿದೆ. ಈ ರೀತಿ ಮಲದಾನ ಪಡೆಯುವುರಿಂದ ಸಂಸ್ಥೆಯೂ ಉತ್ತಮ ಗುಣಮಟ್ಟದ ಮಲ ದಾನಿಗಳನ್ನು ಈ ಸಂಶೋಧಕರೊಂದಿಗೆ ಸಂಪರ್ಕಿಸಲು ನೆರವಾಗುತ್ತದೆ.

    ದೇಶದಲ್ಲಿ ದೀರ್ಘಕಾಲದ ಕಾಯಿಲೆ ಮತ್ತು ಸಾಮಾನ್ಯ ಕಳಪೆ ಆರೋಗ್ಯವು ಕಳೆದ ದಶಕಗಳಲ್ಲಿ ತೀವ್ರವಾಗಿ ಹೆಚ್ಚುತ್ತಿದೆ, ಅಲ್ಲಿನ ಹೆಚ್ಚಿನ ಜನಸಂಖ್ಯೆಯು ಈಗ ಅತ್ಯಂತ ಅನಾರೋಗ್ಯಕರವಾಗಿದೆ ಎಂದು ಕಂಪನಿ ಹೇಳಿದೆ.  ಹೆಚ್ಚಿನ ಭಾಗದಲ್ಲಿ ನಮ್ಮ ಸ್ಥಳೀಯ ಮೂಲ ಸೂಕ್ಷ್ಮಜೀವಿಗಳು ಪೀಳಿಗೆಯಿಂದ ಪೀಳಿಗೆಗೆ ನಶಿಸಿ ಹೋಗುತ್ತಿರುವುದರಿಂದ ಇದು ಪೀಳಿಗೆಯಿಂದ ಪೀಳಿಗೆಗೆ ಹದಗೆಡುತ್ತಿರುವ ಬಿಕ್ಕಟ್ಟಾಗಿದೆ. ಆರೋಗ್ಯ ಸಮಸ್ಯೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಅಧ್ಯಯನ ಮಾಡುವುದು ಮುಖ್ಯ ಉದ್ದೇಶ. ಇತ್ತೀಚಿನ ಕೆಲವು ಮೈಕ್ರೋಬ್ಸ್‌ ಕುರಿತ ಅಧ್ಯಯನ ಮಾಡಲು ಈ ಸಂಸ್ಥೆ  ಮಲದಾನಿಗಳನ್ನು ಹುಡುಕುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts